
ಆಧುನಿಕ ಭರಾಟೆಯಲ್ಲಿ ದೇಶಿ ಸಂಸ್ಕೃತಿ ಉಳಿಸಿ, ಬೆಳೆಸಿ : ಸರಸ್ವತಿ ಸಿಂಗ್ರೀ
ಆಧುನಿಕ ಭರಾಟೆಯಲ್ಲಿ ದೇಶಿ ಸಂಸ್ಕೃತಿ ಉಳಿಸಿ, ಬೆಳೆಸಿ : ಸರಸ್ವತಿ ಸಿಂಗ್ರೀ
ಗಜೇAದ್ರಗಡ:
ಆಧುನಿಕ ಯುಗದಲ್ಲಿನ ಮಹಿಳೆಯರು ಮಾರ್ಡನ ಜಗತ್ತಿಗೆ ಮರುಳಾಗಿ ದೇಶಿಯ ಸಂಸ್ಕೃತಿಯನ್ನು ಮರೆಯುವ ಹಂತ ತಲುಪಿದ್ದಾರೆ ಎಂದು ಎಸ್.ಎಸ್.ಕೆ. ಸಮಾಜದ ಗಾಯತ್ರಿದೇವಿ ಮಹಿಳಾ ಮಂಡಳದ ಅಧ್ಯಕ್ಷರಾದ ಸರಸ್ವತಿ ಸಿಂಗ್ರೀ ಹೇಳಿದರು.
ನಗರದಲ್ಲಿನ ಶ್ರೀ ಜಗದಂಬಾ ದೇವಿ ದೇವಾಲಯದಲ್ಲಿ ಗಣೇಶ ಹಬ್ಬದ ಅಂಗವಾಗಿ ಆಯೋಜನೆ ಮಾಡಿದ್ದ ರಂಗೋಲಿ ಸ್ಪರ್ಧೆಯಲ್ಲಿ ಭಾಗಿಯಾಗಿ ಮಾತನಾಡಿದರು.
ದೇಶಿಯ ಮನರಂಜನೆಗಳಲ್ಲಿ ಒಂದಾದ ರಂಗೋಲಿ ಸ್ಪರ್ಧೆ ಅದರಲ್ಲೂ ಚುಕ್ಕಿ ರಂಗೋಲಿಯನ್ನು ಮನೆಯ ಮುಂದೆ ಹಾಕುವುದು ವಿರಳವಾಗಿದೆ. ಈ ಹಿನ್ನಲೆಯಲ್ಲಿ ಆಧುನಿಕ ಯುಗದಲ್ಲಿನ ಮಹಿಳೆಯರಿಗಾಗಿ ಚುಕ್ಕಿ ರಂಗೋಲಿ ಸ್ಪರ್ದೆ ಆಯೋಜನೆ ಮಾಡಿ ನಮ್ಮ ದೇಶದ ಸಂಸ್ಕೃತಿ ಆಚಾರ, ವಿಚಾರಗಳನ್ನು ಯುವ ಸಮುದಾಯಕ್ಕೆ ಮುಟ್ಟಿಸುವ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ಎಂದರು.
ರAಗೋಲಿ ಸ್ಪರ್ಧೆಯಲ್ಲಿ ಒಟ್ಟು ೨೧ ಮಹಿಳೆಯರು ಭಾಗಿಯಾಗಿದ್ದರು. ಅದರಲ್ಲಿ ಪ್ರಥಮ ಸ್ಥಾನವನ್ನು ಗಾಯಂತ್ರಿ ಗಾಗಜಿ, ದ್ವೀತೀಯ ಸ್ಥಾನವನ್ನು ನಯನಾ ಖೋಡೆ, ತೃತೀಯ ಸ್ಥಾನವನ್ನು ವೀಣಾ ಅರಸಿದ್ದಿ ಪಡೆದುಕೊಂಡಿದ್ದಾರೆ.
ಕಾರ್ಯಕ್ರಮದಲ್ಲಿ ಸವಿತಾ ರಾಯಬಾಗಿ, ಸುನೀತಾ ರಾಯಬಾಗಿ, ಮಂಜು ಖೋಡೆ,ಸುನಿತಾ ಅರಶಿದ್ದಿ,ಸಹನಾ ರಂಗ್ರೇಜಿ,ರೀತು ಪವಾರ,ರಾದಾಬಾಯಿ ಮೆಹರವಾಡೆ, ಆಶಾ ಬಾಕಳೆ ಗೀತಾ ದಲಬಂಜನ,ಅನ್ನಪೂರ್ಣಾ ರಾಯಬಾಗಿ, ಪ್ರತಿಭಾ ರಾಯಬಾಗಿ ಶಾರದಾ ರಾಯಬಾಗಿ, ಶಾರದಾ ಸಿಂಗ್ರೀ ಸೇರಿದಂತೆ ಅನೇಕರು ಇದ್ದರು.