
ನಗರ ಅಭಿವೃದ್ಧಿಗೆ ಪಕ್ಷಾತೀತವಾಗಿ ಶ್ರಮಿಸುವೆ :ನೂತನ ಅಧ್ಯಕ್ಷ ಸುಭಾಷ್ ಮ್ಯಾಗೇರಿ
ಪುರಸಭೆ ಅಧ್ಯಕ್ಷರಾಗಿ ಸುಭಾಷ ಮ್ಯಾಗೇರಿ, ಉಪಾಧ್ಯಕ್ಷರಾಗಿ ಸವಿತಾ ಶ್ರೀಧರ ಬಿದರಳ್ಳಿ ಪದಗ್ರಹಣ.
ನಗರ ಅಭಿವೃದ್ಧಿಗೆ ಪಕ್ಷಾತೀತವಾಗಿ ಶ್ರಮಿಸುವೆ :ನೂತಜ ಅಧ್ಯಕ್ಷ ಸುಭಾಷ್ ಮ್ಯಾಗೇರಿ.
ಕೋಟೆನಾಡಿನ ಪ್ರಚಲಿತ ಸಮಸ್ಯೆಗಳನ್ನು ಬಗೆಹರಿಸುವ ಭರವೆಸೆಯೊಂದಿಗೆ ಅಧಿಕಾರ ಸ್ವೀಕಾರ.
ಗಜೇಂದ್ರಗಡ:
ನಗರವನ್ನು ಶ್ರಯೋಭಿವೃದ್ಧಿಗೆ ಪಕ್ಷಭೇದ ಮರೆತು ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಮೂಲಕ ಹೊಸ ಇತಿಹಾಸ ಸೃಷ್ಟಿಸುವ ದೆಸೆಯಲ್ಲಿ ಶ್ರಮಿಸುತ್ತೇವೆ ಎಂದು ನೂತನ ಅಧ್ಯಕ್ಷ ಸುಭಾಸ ಮ್ಯಾಗೇರಿ ಹೇಳಿದರು.
ಪಟ್ಟಣದ ಪುರಸಭೆ ಅಧ್ಯಕ್ಷ- ಉಪಾಧ್ಯಕ್ಷರಾಗಿ ಆಯ್ಕೆಯಾದ ಹಿನ್ನಲೆ ಯಲ್ಲಿ ಶುಕ್ರವಾರ ಪುರಸಭೆಯಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿಯೇ ತೀವ್ರಗತಿ ಯಲ್ಲಿ ಬೆಳೆಯುತ್ತಿರುವ ಪಟ್ಟಣ ಗಜೇಂದ್ರಗಡದ ಬೆಳವಣಿಗೆಯಲ್ಲಿ ಪುರಸಭೆ ಆಡಳಿತದ ಕಾರ್ ಮಹತ್ತ ರವಾಗಿದೆ. ಯಾವುದೇ ಕೆಲಸವಾಗಲಿ, ಎಲ್ಲ ಸದಸ್ಯರನ್ನು ಒಗ್ಗೂಡಿಸಿಕೊಂಡು ಆಡಳಿತ ನಡೆಸಲಾಗುವುದು ಎಂದರು.
ಪುರಸಭೆ ಹಿರಿಯ ಸದಸ್ಯ ಶಿವರಾಜ ಘೋರ್ಪಡೆ ಮಾತನಾಡಿ, ಪುರಸಭೆ ಆಡಳಿತಾಧಿಕಾರಿ ವರ್ಷಗಳ ಆಡಳಿತ ಬಳಿಕ ಜನಪ್ರತಿನಿಧಿಗಳ ಆಡಳಿತ ಮಂಡಳಿ ರಚನೆಯಾಗಿದೆ. ಪುರಸಭೆಯ ಎಲ್ಲಾ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪಟ್ಟಣದ ಜನತೆಗೆ ಕುಡಿವ ನೀರು, ರಸ್ತೆ, ಚರಂಡಿ, ವಿದ್ಯುತ್, ಸೇರಿ ಮೂಲ ಸೌಲಭ್ಯ ಒದಗಿಸುವಲ್ಲಿ ಪ್ರಾಮಾಣಿಕ ಪ್ರಯತ್ನಕ್ಕೆ ನಮ್ಮೆಲ್ಲರ ಸಹಕಾರ ನೀಡಲಾಗುವುದು ಎಂದರು.
ಬಳಿಕ ಪುರಸಭೆ ಸದಸ್ಯ ರಾಜೂ ಸಾಂಗ್ಲೀಕರ ಮಾತನಾಡಿ
ನೂತನ ಅಧ್ಯಕ್ಷ-ಉಪಾಧ್ಯಕ್ಷರು ಬಡವರ, ನೊಂದವರ, ನಿರ್ಗತಿಕರ ಪರ ಆಡಳಿತ ನೀಡಲಿದ್ದಾರೆ. ರಾಜ್ಯದಲ್ಲಿ ಬಡವರ ಸರ್ಕಾರ ಜನಪರ ಕಾಠ್ಯಕ್ರಮ ಜಾರಿಗೊಳಿಸಿ, ಮಾದರಿ ರಾಜ್ಯವನ್ನಾಗಿಸಲು ಸಿಎಂ ಆಡಳಿತ ನಡೆಸುತ್ತಿದ್ದಾರೆ. ಕ್ಷೇತ್ರದಲ್ಲಿ ಸಹ ಶಾಸಕ. ಜಿ.ಎಸ್. ಪಾಟೀಲರು ಅಭಿವೃದ್ಧಿ ವಿಚಾರವಾಗಿ ಅವಿರತ ಶ್ರಮಿಸುತ್ತಿದ್ದಾರೆ ಎಂದರು.
ಈ ವೇಳೆ ಪುರಸಭೆ ಸಿಬ್ಬಂದಿಗಳಿಂದ ನೂತನ ಅಧ್ಯಕ್ಷ ಸುಭಾಸ ಮ್ಯಾಗೇರಿ ಉಪಾಧ್ಯಕ್ಷೆ ಸವಿತಾ ಬಿದರಳ್ಳಿ ಅವರನ್ನು ಸನ್ಮಾನಿಸಿದರು.
ಪದಗ್ರಹಣ ಕಾರ್ಯಕ್ರಮದಲ್ಲಿ ಪುರಸಭೆ ಸದಸ್ಯ ಮುರ್ತುಜಾ ಡಾಲಾಯತ್, ವೆಂಕಟೇಶ ಮುದಗಲ್ಲ, ಸಾಂಗ್ಲಿಕಾರ, ಮುಧೋಳ, ಮುದಿಯಪ್ಪ ಶರಣಪ್ಪ ಉಪ್ಪಿನಬೆಟಗೇರಿ, ವಿಜಯಾ ಮಳಗಿ, ಕೌಸರಬಾನು ಹುನಗುಂದ
ದುರಗಪ್ಪ ಮುಧೋಳ, ಶ್ರೀಧರ ಬಿದರಳ್ಳಿ, ರಫೀಕ ತೋರಗಲ್ಲ, ಮುತ್ತಣ್ಣ ಮ್ಯಾಗೇರಿ, ಗುರು ಕಲ್ಲವಡ್ಡರ,ಗುಲಾಂ ಹುನಗುಂದ, ಎಸ್.ವಾಯ್.ಮುಧೋಳ,
ಸೇರಿದಂತೆ ಅನೇಕರು ಇದ್ದರು.
ಪೋಟೋ ಶಿರ್ಷಿಕೆ:ಗಜೇಂದ್ರಗಡ ಪುರಸಭೆಯ ನೂತನ ಅಧ್ಯಕ್ಷ ಸುಭಾಷ ಮ್ಯಾಗೇರಿ, ಉಪಾಧ್ಯಕ್ಷೆ ಸವಿತಾ ಶ್ರೀಧರ ಬಿದರಳ್ಳಿ ಅಧಿಕಾರ ವಹಿಸಿಕೊಂಡಿದ್ದು.