ರಾಜಕೀಯcrimeಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುರಾಜ್ಯ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್ಸ್ಥಳೀಯ ಸುದ್ದಿಗಳು

Notices issued to CM’s wife Parvati and Minister Bhairati Suresh :ಸಿಎಂ ಸಿದ್ದು ಫ್ಯಾಮಿಲಿಗೆ ED ಬಿಗ್ ಶಾಕ್ – ಪತ್ನಿ ಪಾರ್ವತಿ, ಸಚಿವ ಭೈರತಿ ಸುರೇಶ್​​ಗೆ ನೋಟಿಸ್ ಸಂಕಷ್ಟ! 

ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಹಾಗೂ ಸಿಎಂ ಸಿದ್ದರಾಮಯ್ಯ ಆಪ್ತ ಸಚಿವ ಭೈರತಿ ಸುರೇಶ್​ಗೆ ED ನೋಟಿಸ್ ನೀಡಿದೆ. ಇಂದೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೊಟ್ಟಿದೆ. ಈ ಮೂಲಕ 14 ಸೈಟ್ ಅಕ್ರಮದಲ್ಲಿ ಸಿಎಂ ಪತ್ನಿಗೆ ಭಾರೀ ಸಂಕಷ್ಟ ಎದುರಾಗಿದೆ.

Share News

ಜನಧ್ವನಿ ಸುದ್ದಿ ಬೆಂಗಳೂರು :ಮುಡಾ ಹಗರಣದಲ್ಲಿ ಭಾರೀ ಸಂಚಲನ ಸೃಷ್ಟಿಯಾಗಿದೆ. ನಿವೇಶನ ಹೆಸರಲ್ಲಿ ಕೋಟಿ ಕೋಟಿ ಹಣ ಅಕ್ರಮ ವಹಿವಾಟು ಕೇಸಲ್ಲಿ ತನಿಖೆ ನಡೆಸುತ್ತಿರುವ ED ಇದೀಗ ಮಹತ್ವದ ಹೆಜ್ಜೆ ಇಟ್ಟಿದ್ದು, CM ಕುಟುಂಬಕ್ಕೆ ED ಬಿಗ್ ಶಾಕ್ ಕೊಟ್ಟಿದೆ.

ಮುಡಾ ಹಗರಣ ಸಂಬಂಧ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಹಾಗೂ ಸಿಎಂ ಸಿದ್ದರಾಮಯ್ಯ ಆಪ್ತ ಸಚಿವ ಭೈರತಿ ಸುರೇಶ್​ಗೆ ED ನೋಟಿಸ್ ನೀಡಿದೆ. ಇಂದೇ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ಕೊಟ್ಟಿದೆ. ಈ ಮೂಲಕ 14 ಸೈಟ್ ಅಕ್ರಮದಲ್ಲಿ ಸಿಎಂ ಪತ್ನಿಗೆ ಭಾರೀ ಸಂಕಷ್ಟ ಎದುರಾಗಿದೆ.

ED ನೋಟಿಸ್ ಬರ್ತಿದ್ದಂತೆಯೇ ಹೈಕೋರ್ಟ್​ಗೆ ಸಿಎಂ ಪತ್ನಿ ಪಾರ್ವತಿ ಹಾಗೂ ಸಚಿವ ಭೈರತಿ ಸುರೇಶ್ ಅವರು ಅರ್ಜಿ ಸಲ್ಲಿಸಿದ್ದಾರೆ. ED ಕೊಟ್ಟಿರುವ ನೋಟಿಸ್ ಪ್ರಶ್ನಿಸಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಕೆ ಮಾಡಲಾಗಿದ್ದು, ತುರ್ತು ವಿಚಾರಣೆಗೆ ಸ್ವೀಕರಿಸುವಂತೆ ವಕೀಲರು ಮನವಿ ಮಾಡಿದ್ದಾರೆ.

ನಾಗಪ್ರಸನ್ನ ಪೀಠದಲ್ಲಿ ಮಧ್ಯಾಹ್ನ 2.30ಕ್ಕೆ ಅರ್ಜಿ ವಿಚಾರಣೆಗೆ ಮನವಿ ಮಾಡಿದ್ದು, ಸಿಎಂ ಪತ್ನಿ ಪಾರ್ವತಿ ಹಾಗೂ ಸಚಿವ ಭೈರತಿ ಸುರೇಶ್ ಅವರು ಹೈಕೋರ್ಟ್​ ಮೆಟ್ಟಿಲೇರಿದ್ದಾರೆ.

Share News

Related Articles

Leave a Reply

Your email address will not be published. Required fields are marked *

Back to top button