
ಹನಮನ ನಾಮ ಜಪದಲ್ಲಿ ಒಂದು ಶಕ್ತಿ ಅಡಗಿದೆ: ಪರಶುರಾಮ ಗೌಡರ.
೧೧ನೇ ವಾರ್ಡಿನಲ್ಲಿ ಹನುಮ ಜಯಂತಿ ಆಚರಣೆ.
ಜನಧ್ವನಿ ಕನ್ನಡ ಸುದ್ದಿಮೂಲ
ಗಜೇಂದ್ರಗಡ;
ದೇಶದಾದ್ಯಂತ ಹನುಮ ಜಯಂತಿಯನ್ನು ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತಿವೆ. ನಗರದ ವಿವಿಧ ದೇಗುಲಕ್ಕೆ ಆಗಮಿಸುತ್ತಿರುವ ಭಕ್ತರು ಹನುಮಂತನ ನಾಮಸ್ಮರಣೆ ಮಾಡುತ್ತಾ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ.
ಇನ್ನೂ ವಾಣಿಜ್ಯ ನಗರಿ ಖ್ಯಾತಿಯ ಗಜೇಂದ್ರಗಡದಲ್ಲಿಯೂ ಸಹ ಹನುಮ ಜಯಂತಿಯನ್ನು ಭಕ್ತರು ಶ್ರದ್ಧಾಭಕ್ತಿಯಿಂದ ಆಚರಣೆ ಮಾಡಿದರು.
ನಗರದ ೧೧ ನೇ ವಾರ್ಡಿನಲ್ಲಿರುವ ಹನಮಂತನ ದೇವಾಲಯದಲ್ಲಿ ವಿಶೇಷ ಪೂಜೆ ನಡೆದವು. ಪೂಜಾ ಕಾರ್ಯಕ್ರಮದಲ್ಲಿ ೧೧ ನೇ ವಾರ್ಡಿನ ಸಾರ್ವಜನಿಕರು, ಯುವಕರು ಭಾಗಿಯಾಗಿ ಹನುಮನ ನಾಮ ಸ್ಮರಣೆ ಮಾಡಿದರು
ಬಳಿಕ ಯಾದವ ಸಮಾಜದ ಗಜೇಂದ್ರಗಡ ತಾಲೂಕಾ ಅದ್ಯಕ್ಷರಾದ ಪರಶುರಾಮ ಗೌಡರ ಮಾತನಾಡಿ
ಹನುಮ ದೇವರ ಸ್ಮರಣೆ ಎಲ್ಲರಲ್ಲೂ ಒಂದು ವಿಶೇಷ ಶಕ್ತಿಯನ್ನು ತುಂಬುತ್ತದೆ. ರಾಮದೂತನನ್ನು ನೆನೆಯುವ ದಿನವೇ ಹನುಮ ಜಯಂತಿಯಾಗಿದ್ದು, ತ್ರೇತಾಯುಗದಲ್ಲಿ ರಾಮಭಕ್ತನಾಗಿ ಅವತಾರ ಮಾಡಿದ ಹನುಮನಿಗೆ ಅನೇಕ ವಿಧವಾದ ಶಕ್ತಿಯಿರುವುದನ್ನು ರಾಮಾಯಣದಲ್ಲಿ ತಿಳಿದುಕೊಳ್ಳಬಹುದು ಎಂದರು.
ಇನ್ನೂ ಇದೇ ಸಂದರ್ಭದಲ್ಲಿ ಡಾ. ಪರಶುರಾಮ ಮ್ಯಾಗೇರಿ, ಹನಮಂತಪ್ಪ ಬೊನೇರ, ನಾಗಪ್ಪ ಮ್ಯಾಗೇರಿ, ಗಣೇಶ ದಿವಾಣದ, ಹನಮಂತ ಕುರಿ, ರವಿಕುಮಾರ ದಿವಾಣದ, ಪರಶುರಾಮ ಗುಳೇದ, ಮುತ್ತಣ್ಣ ಗುಳೇದ, ವೆಂಕಟೇಶ ಗೌಡರ, ದಾಸಪ್ಪ ಮ್ಯಾಗೇರಿ, ಪರಶುರಾಮ ವರಗಾ, ಕಳಕಪ್ಪ ಕಟಗೇಲಿ, ಸುನೀಲ ಗುಳೇದ, ಕಳಕಪ್ಪ ಬಣ್ಣದ, ಗೋಪಾಲ ಬಣ್ಣದ, ಸಂತೋಷ ದಿವಾಣದ, ಪ್ರಕಾಶ ಕುರಿ, ಶರಣಪ್ಪ ಗೌಡರ, ಶ್ರೀಧರ ಬೊನ್ನೇರಿ ಕಳಕಪ್ಪ ಡೊಳ್ಳಿನ ಸೇರಿದಂತೆ ಅನೇಕರು ಇದ್ದರು.