ನಗರದಲ್ಲಿ ಸಂಚಾರ ವ್ಯವಸ್ಥೆ ಸುಧಾರಣೆ ಹಾಗೂ ಕ್ರಮ ಕೈಗೊಳ್ಳುವುದರ ಸಿಟಿ ರೌಂಡ್ ಹಾಕಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್ ನೇಮಗೌಡ
ನಗರದಲ್ಲಿ ಸಂಚಾರ ವ್ಯವಸ್ಥೆ ಸುಧಾರಣೆ ಹಾಗೂ ಕ್ರಮ ಕೈಗೊಳ್ಳುವುದರ ಸಿಟಿ ರೌಂಡ್ ಹಾಕಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್ ನೇಮಗೌಡ.
ಗದಗ:
ನಗರದಲ್ಲಿ ದಿನದಿಂದ ದಿನಕ್ಕೆ ವಾಹನ ಸಂಚಾರ ಹೆಚ್ಚಾಗುತ್ತಿದೆ ಆದ್ದರಿಂದ ಸುಗಮ ಸಂಚಾರಕ್ಕೆ ನಗರದ ಕೆಲವೆಡೆ ತೆಗು ಗುಂಡಿಗಳು ಹಾಗೂ ರಸ್ತೆ ಅಗಲೀಕರಣ ಒಳ ಚರಂಡಿ ನೀರು ಹರಿದ ಸುಗಮ ಸಂಚಾರ ಅಡ್ಡಿಯಾಗುತ್ತಿದ್ದವು ಅವುಗಳನ್ನು ಸುಧಾರಣೆ ಮಾಡುವ ಸಲುವಾಗಿ ಗದಗ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್ ನೇಮೇಗೌಡ ಅವರು ನಗರದ ಪ್ರಮುಖ ಕಡೆಗಳಲ್ಲಿ ಸಂಚರಿಸಿ ನಗರ ಸಭೆ ಹಾಗೂ ಸಂಬAಧಪಟ್ಟ ಅಧಿಕಾರಿಗಳಿಗೆ ಅವುಗಳಿಗೆ ಸುಧಾರಣೆಗೆ ತಕ್ಷಣವೇ ಕ್ರಮ ಕೈಗೊಳ್ಳುವಂತೆ ಹೇಳಿದರು.
ನಗರದ ಮಾರುಕಟ್ಟೆ ಸರ್ಕಲ್. ಬಿ.ಎಸ್.ಎನ್.ಎಲ್ ಆಫೀಸ್ ,ಮಹೇಂದ್ರಕರ ಸರ್ಕಲ್. ಹಳೆ ಬಸ್ ಸ್ಟಾಂಡ್ ಮುಂದೆ. ಕರಿಯಪ್ಪ ಸರ್ಕಲ್. ಬೋಮರೆಡ್ಡಿ ಸರ್ಕಲ್. ಟಾಂಗ ಕೂಟ. ಮಾರ್ಕೆಟ್ ಬಸವೇಶ್ವರ ಸರ್ಕಲ್ ಕಡೆಗಳಲ್ಲಿ ಪೊಲೀಸ್ ವರಿಷ್ಠಾಧಿಕಾರಿಗಳು ಸಂಚರಿಸಿ ಅಲ್ಲಿ ಸುಗಮ ಸಂಚಾರಕ್ಕೆ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಸಂಚಾರದಲ್ಲಿ ಪಾಲ್ಗೊಂಡ ನಗರಸಭೆಯ ಪೌರಾಯುಕ್ತರು ಹಾಗೂ ಸಂಬAಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಯಿತು.
ಸಂಚಾರದಲ್ಲಿ ಪ್ರಮುಖ ಕಡೆಗಳಲ್ಲಿ ವಿದ್ಯುತ್ ದೀಪ ಕಂಬಗಳ ಅವುಗಳ ನಿರ್ವಹಣೆಯ ಕುರಿತಂತೆ ಗಮನಹರಿಸಿದ ಪೊಲೀಸ್ ವರಿಷ್ಠ ಅಧಿಕಾರಿಗಳು ರಾತ್ರಿಯಲ್ಲಿ ಸಂಚರಿಸುವ ವಾಹನಗಳಿಗೆ ತೊಂದರೆಯಾಗದAತೆ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡುವಂತೆ ಹಾಗೂ ಅವುಗಳ ದುರಸ್ತಿಗಳ ಕುರಿತಂತೆ ಸಂಬAಧಪಟ್ಟ ನಗರಸಭೆಯ ಅಧಿಕಾರಿಗಳಿಗೆ ಹೇಳಿದರು
ಈ ಸಂದರ್ಭದಲ್ಲಿ ಗದಗ್-ಬೆಟಗೇರಿ ನಗರಸಭೆ ಪೌರಾಯುಕ್ತರಾದ ಪ್ರಶಾಂತ್ ವರಗಪ್ಪನವರ್ ನಗರಸಭೆಯ ಮುಖ್ಯ ಇಂಜಿನಿಯರ್ ಬಂಡಿ ವಡ್ಡರ್ ಆನಂದ್ ಬದಿ ನಗರಸಭೆಯ ಆರೋಗ್ಯ ಇಲಾಖೆ ಮಕಾಂದರ ಸೇರಿದಂತೆ ನಗರಸಭೆಯ ಹಲವಾರು ಅಧಿಕಾರಿಗಳು ಪೊಲೀಸರ ಇಲಾಖೆಯ ಅಧಿಕಾರಿಗಳು ಸಂಚಾರಿ ಪೊಲೀಸ್ ಠಾಣೆಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
ಬಾಕ್ಸ್ …..
ನಗರದಲ್ಲಿ ಸಂಚಾರಕ ವ್ಯವಸ್ಥೆ ಸುಧಾರಣೆ ಮಾಡಲು ಉದ್ದೇಶದಿಂದ ಹಾಗೂ ನಗರ ಸಭೆ ಸಂಬAಧಪಟ್ಟ ಅಧಿಕಾರಿಗಳಿಂದ
ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಸಂಚಾರವನ್ನು ಕೈಗೊಳ್ಳಲಾಗಿದೆ ಎಂದು ನಮ್ಮ ದಿನಪತ್ರಿಕೆಗೆ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್ ನೇಮಗೌಡ ಅವರು ತಿಳಿಸಿದರು