
ಕೆ.ಜಿ.ಎಮ್.ಎಸ್ ಶಾಲಾ ಗೇಟ ಮುಂಭಾಗ, ಕಂಪೌಡ ಸುತ್ತಮುತ್ತಲೂ ಅಸ್ವಚ್ಛತೆ : ಪಾಲಕರಲ್ಲಿ ಡೆಂಗ್ಯೂ ಭಯ ಆಂತಕ.
ಕೆ.ಜಿ.ಎಮ್.ಎಸ್ ಶಾಲಾ ಗೇಟ ಮುಂಭಾಗ, ಕಂಪೌಡ ಸುತ್ತಮುತ್ತಲೂ ಅಸ್ವಚ್ಛತೆ : ಪಾಲಕರಲ್ಲಿ ಡೆಂಗ್ಯೂ ಭಯ ಆಂತಕ.
ಗಜೇAದ್ರಗಡ:
ಒಂದಡೆ ರಾಜ್ಯಾದ್ಯಂತ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿದ್ದು ಅದರಲ್ಲಿ ಶಾಲಾ ಮಕ್ಕಳಿಗೆ ಹೆಚ್ಚಿನ ಸೊಂಕು ಪತ್ತೆಯಾದ ಹಿನ್ನಲ್ಲೆಯಲ್ಲಿ ಪಾಲಕರು ಕೂಡಾ ಇದರ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಿದೆ.ನಗರದ ಕಮ್ಮಾರ ಓಣಿಯಲ್ಲಿನ ಸರ್ಕಾರಿ ಹಿರಿಯ ಬಾಲಕಿಯರ ಪ್ರಾಥಮಿಕ ಶಾಲೆಯ ಸುತ್ತಮುತ್ತಲೂ ಅಸ್ವಚ್ಚತೆಯು ತಾಂಡವವಾಡುತ್ತಿದೆ.
ಈ ಕೆ.ಜಿ.ಎಮ್.ಎಸ್. ಶಾಲೆಯಲ್ಲಿ ಸು.೫೦೦ಕ್ಕೂ ಹೆಚ್ಚು ಹೆಣ್ಣು ಮಕ್ಕಳು ವಿದ್ಯಾಬ್ಯಾಸ ಮಾಡುತ್ತಿದ್ದು, ಶಾಲೆಯ ಕಂಪೌಡ, ಗೇಟ್ ಮುಂಭಾಗದಲ್ಲಿಯೇ ಅಸ್ವಚ್ಚತೆಯು ತಾಂಡವಾಡುತ್ತಿದ್ದರೂ ಪುರಸಭೆಯ ಅಧಿಕಾರಿಗಳು, ಶಾಲಾ ಮುಖ್ಯಶಿಕ್ಷಕರು, ಶಿಕ್ಷಕ ವರ್ಗದವರು, ಸಾರ್ವಜನಿಕರು ಜಾಣ ಕುರುಡು ವರ್ತನೆ ತೋರುತ್ತಿರುವುದು ವಿರ್ಪಯಾಸವೇ ಸರಿ.
ಈ ಘಟನೆ ಕುರಿತು ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ಅವರಿಗೆ ಮಾಹಿತಿ ಘಟನೆ ಕುರಿತಂತೆ ಅಲ್ಲಿನ ಮುಖ್ಯ ಶಿಕ್ಷಕರು ದೂರವಾಣಿ ಮೂಲಕ ಮಾಹಿತಿ ನೀಡಿದ್ದು, ನಮ್ಮ ಸಿಬ್ಬಂದಿಗಳಿಗೆ ಸ್ಥಳಕ್ಕೆ ತೆರಳುವಂತೆ ಸೂಚಿಸಿ ಸರಿ ಪಡಿಸುತ್ತೇನೆ ಎಂದರು.
ಇನ್ನೂ ಶಾಲಾ ಮುಖ್ಯ ಶಿಕ್ಷಕ ಬಸವರಾಜ ಹಿರೇಮಠ ಅವರನ್ನು ಕೇಳಿದಾಗ ಶಾಲಾ ಕಂಪೌಡಗೆ ಹೊಂದಿಕೊAಡಿರುವ ಕಸವನ್ನು ಪುರಸಭೆ ಸಿಬ್ಬಂದಿಗಳು ಪ್ರತನಿತ್ಯವೂ ತೆಗೆದುಕೊಂಡು ಹೋಗುತ್ತಾರೆ. ಆದರೆ ಇದೀಗ ಈ ಘಟನೆ ಕುರಿತು ಯಾಕೆ ಕಸ ವಿಲೇವಾರಿ ಮಾಡಿಲ್ಲ ಮಾಹಿತಿ ಇಲ್ಲ, ಇನ್ನೂ ಶಾಲೆಯ ಗೇಟ್ ಗೆ ಹೊಂದಿಕೊAಡಿರುವ ಕಸದ ಕುರಿತು ಈ ಕಸವೂ ಶಾಲಾ ಆವರಣದಲ್ಲಿ ಬಂಗಾಲಿ ಗಿಡ ಇದೆ ಆ ಗಿಡದ ಕೊಂಬೆಯು ಶನಿವಾರದಂದು ಗಾಳಿಗೆ ಮುರಿದು ಬಿದ್ದಿದ್ದು ಅದನ್ನು ಖಾಸಗಿ ವ್ಯಕ್ತಿಯನ್ನು ಕಳಿಸಿ ತೆರವುಗೊಳಿಸಿದ್ದೇನೆ, ಆದರೆ ಗಿಡದ ಎಲೆಗಳು, ಟೊಂಗೆಗಳು ಮಾತ್ರ ಇರುವುದು. ಅದನ್ನು ಸಹ ತೆರವುಗೊಳಿಸಲು ಪುರಸಭೆಯವರಿಗೆ ದೂರವಾಣಿ ಮೂಲಕ ಮಾಹಿತಿ ತಿಳಿಸಿದ್ದೇನೆ ಎಂದರು.
ಈ ಕುರಿತು ಪುರಸಭೆ ಸದಸ್ಯ ಮುರ್ತುಜಾ ಡಾಲಾಯತರನ್ನು ಕೇಳಿದಾಗ ಈ ವಿಷಯಕ್ಕೆ ಸಂಭದಿಸಿದAತೆ ಶಾಲೆಯ ಮುಖ್ಯ ಶಿಕ್ಷಕರಿಗೆ ಅದನ್ನು ಪುರಸಭೆಯವರಿಗೆ ಮಾಹಿತಿ ನೀಡಿ ಎಂದು ಹೇಳಿದ್ದೇನೆ. ಪುರಸಭೆ ಅಧಿಕಾರಿಗಳಿಗೆ ದೂರವಾಣಿಯ ಮೂಲಕ ಮಾಹಿತಿ ನೀಡಿ ಕಸ ವಿಲೇವಾರಿ ಮಾಡಿ ಎಂದು ಸೂಚನೆ ನೀಡಿದ್ದೇನೆ ಎಂದರು.
ಇದ್ದು ಸತ್ತಂತೆ ಪುರಸಭೆಯ ಕಸದ ಡಬ್ಬಿಗಳು:
ಕೆ.ಜಿ.ಎಮ್.ಎಸ್.ಶಾಲೆಯಲ್ಲಿ ಮಕ್ಕಳ ಸಂಖ್ಯೆಯು ಹೆಚ್ಚಾಗಿದ್ದರಿಂದ ಕಸ ವಿಲೇವಾರಿಗೆ ತೊಂದರೆಯಾತ್ತದೆ ಎಂದು ಪುರಸಭೆಯವರ ಹಸಿ ಕಸ ಹಾಗೂ ಒಣ ಕಸದ ವಿಂಗಡನೆಗೆ ೨ ದೊಡ್ಡದಾದ ಕಸದ ಬುಟ್ಟಿಯನ್ನು ನೀಡಿದ್ದರು. ಆದರೆ ಪುಂಡರ ಹಾವಳಿಯೋ, ಶಾಲಾ ಮಕ್ಕಳ ಕಿತಾಪತಿಯೋ ಗೊತ್ತಿಲ್ಲ ಅದರಲ್ಲಿನ ಒಂದು ಡಬ್ಬಿ ಮಾಯ, ಇನ್ನೊಂದು ಕೆಳಗಡೆಯ ತಳವೇ ಇಲ್ಲ. ಇದ್ದು ಸತ್ತಂತೆ ಎನ್ನುವ ವಾಣಿಯಂತೆ ಆಗಿದೆ.
ಒಟ್ಟಿನಲ್ಲಿ ಅದು ಏನೇ ಇರಲಿ ಡೆಂಗ್ಯೂ ಸೊಂಕಿನ ತಡೆಗೆ ಸೂಕ್ತ ಕ್ರಮವನ್ನು ತಾಲೂಕಾ ಆಡಳಿತ, ಆರೋಗ್ಯ ಇಲಾಖೆ, ಪುರಸಭೆ ಇಲಾಖೆ ಮುತುರ್ವಜಿ ವಹಿಸಿ ಗಜೇಂದ್ರಗಡದಲ್ಲಿ ಸೊಂಕು ಬರದಂತೆ ತಡೆದರೆ ಸಾಕು ಎನ್ನುತ್ತಾರೆ ಬುದ್ದಿ ಜೀವಿಗಳು.