
ಶಿಕ್ಷಕ ಶೆಟ್ಟಪ್ಪಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ
ಶಿಕ್ಷಕ ಶೆಟ್ಟಪ್ಪಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ
ರೋಣ ಇಂದಿರಾಗಾಂಧಿ ವಸತಿ ಶಾಲೆಯ ದೈಹಿಕ ಶಿಕ್ಷಣದ ತರಬೇತುದಾರ
—
ರೋಣ:
ನಗರದ ಪದವಿ ಕಾಲೇಜಿನ ಕಟ್ಟಡದಲ್ಲಿರುವ ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಯ ದೈಹಿಕ ಶಿಕ್ಷಣದ ತರಬೇತುದಾರ ಶೆಟ್ಟಪ್ಪ ಬಂಡಿವಡ್ಡರ ಇವರಿಗೆ ಕಪ್ಪತ್ತಗಿರಿ ರಾಜ್ಯ ಫೌಂಡೇಷನ್ ರಾಜ್ಯ ಘಟಕದ ವತಿಯಿಂದ ಗದಗ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಎಂದು ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.
ಶೆಟ್ಟಪ್ಪ ಬಂಡಿವಡ್ಡರ ಅವರ ಮಾರ್ಗದರ್ಶನದಲ್ಲಿ ಪಳಗಿದ ಅನೇಕ ವಿದ್ಯಾರ್ಥಿಗಳು ವಿವಿಧ ಕ್ರೀಡೆಯಲ್ಲಿ ರಾಜ್ಯಮಟ್ಟದ ವರೆಗೆ ಪ್ರತಿ ವರ್ಷ ಸಾಧನೆ ಮಾಡುತ್ತಿದ್ದಾರೆ. ಈ ಮೊದಲು ಶ್ರೀಮತಿ ಇಂದಿರಾಗಾಂಧಿ ವಸತಿ ಶಾಲೆಯ ಆರಂಭದ ದಿನಗಳಲ್ಲಿ ಪ್ರಭಾರಿ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಶಾಲೆಯನ್ನು ಹೊಳೆಆಲೂರ ಭಾಗದಲ್ಲಿ ಹಾಗೂ ರೋಣ ಭಾಗದಲ್ಲಿ ಹೆಸರು ಮಾಡಲು ಹಾಗೂ ಮಕ್ಕಳಿಂದ ವಿವಿಧ ಕ್ಷೇತ್ರದಲ್ಲಿ ಉತ್ತಮ ಸಾಧನೆಗಳು ಹೊರಹೊಮ್ಮಲು ಶ್ರಮಿಸಿದ್ದಾರೆ. ಇವರ ಶೈಕ್ಷಣಿಕ ಸೇವೆಯನ್ನು ಗುರುತಿಸಿದ ಕಪ್ಪತ್ತಗಿರಿ ಫೌಂಡೇಷನ್‌ನವರು ಸೆಪ್ಟೆಂಬರ್-8 ರಂದು ಗದಗ ನಗರದ ಗುರುಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿದರು.
—
9ರೋಣ1: ರೋಣ ನಗರದ ಇಂದಿರಾಗಾಂಧಿ ವಸತಿ ಶಾಲೆಯ ಶಿಕ್ಷಕ ಶೆಟ್ಟಪ್ಪ ಅವರಿಗೆ ಪ್ರದಾನ ಮಾಡಲಾಗಿರುವ ಪ್ರಶಸ್ತಿ ಪತ್ರ.
9ರೋಣ1,2: ರೋಣ ನಗರದ ಇಂದಿರಾಗಾಂಧಿ ವಸತಿ ಶಾಲೆಯ ಶಿಕ್ಷಕ ಶೆಟ್ಟಪ್ಪ ಅವರಿಗೆ ಗದಗ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಎಂದು ಕಪ್ಪತ್ತಗಿರಿ ಫೌಂಡೇಷನ್‌ನಿಂದ ಪ್ರಶಸ್ತಿ ಪ್ರದಾನ ಮಾಡಲಾಯಿತು