ಸ್ಥಳೀಯ ಸುದ್ದಿಗಳುಗದಗಜಿಲ್ಲಾ ಸುದ್ದಿತಾಲೂಕುರಾಜ್ಯ ಸುದ್ದಿ

ಭಾವೈಕ್ಯ ಬೆಸೆಯಲು ಬಸವ ಪುರಾಣ ಅತ್ಯವಶ್ಯಕ : ಪೂಜ್ಯ ಶ್ರೀ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು

ವಚನ ಸಾಹಿತ್ಯದಲ್ಲಿದೆ ಆದರ್ಶ ಬದುಕಿನ ಸೂತ್ರ ; ಮುಪ್ಪಿನ ಬಸವಲಿಂಗ ಶ್ರೀಗಳು

Share News

Jandhwani News Gajendrgad ಜನಧ್ವನಿ ಕನ್ನಡ ಸುದ್ದಿಮೂಲ ಗಜೇಂದ್ರಗಡ: 12ನೇ ಶತಮಾನದಲ್ಲಿ ರಚಿತವಾದ ವಚನಗಳನ್ನು ಅರಿತು, ನಾವೂ ನೀವು ಎಲ್ಲಾ ಜಾಗತಿಕ ಮೌಲ್ಯ ಹಾಗೂ ಆದರ್ಶಗಳನ್ನು ಅಳವಡಿಸಿಕೊಂಡಾಗ ಜೀವನದಲ್ಲಿ ಬದುಕಲು ಸಾಧ್ಯವಿದೆ ಮತ್ತು ಮಾನವನು ಭಾವೈಕ್ಯದಿಂದ ಜೀವನವನ್ನು ಸಾಗಿಸಲು ಬಸವ ಪುರಾಣವು ಅತ್ಯಂತ ಮಹತ್ವದ ಪಾತ್ರ ವಹಿಸುತ್ತದೆ ಎಂದು ಶ್ರೀ ಮ.ನಿ.ಪ್ರ. ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಹೇಳಿದರು.

ನಗರದ 13, 14, 16 ನೇ ವಾರ್ಡಗಳಲ್ಲಿ ಸದ್ಭಾವನಾ ಪಾದಯಾತ್ರೆಯ ಸಂದರ್ಭದಲ್ಲಿ ಭಕ್ತರನ್ನು ಉದ್ದೇಶಿಸಿ ಮಾತನಾಡಿದರು.

ಒಂದು ತಿಂಗಳುಗಳ ಕಾಲ ನಡೆಯುವ ಭೀಮಕವಿ ವಿರಚಿತ ಬಸವ ಪುರಾಣವನ್ನು ಕೋಟೆನಾಡಿನ ಜನ ದಿನದಿಂದ ದಿನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗಿಯಾಗುತ್ತಾ ಇದ್ದಾರೆ. ಅಂದರೆ ಕೋಟೆನಾಡಿನ ಜನರು ಹೆಚ್ಚಿನ ಸಂಖ್ಯೆಯಲ್ಲಿ ಧಾರ್ಮಿಕದತ್ತ ಒಲವು ಮೂಡುತ್ತಿದೆ ಎನ್ನುವುದರಲ್ಲಿ ಸಂದೇಹವಿಲ್ಲ. ಕೋಟೆನಾಡು ಭಾವೈಕ್ಯದ ಬೀಡು ಇಲ್ಲಿ ಹಿಂದೂ ಮುಸ್ಲಿಂ ಎನ್ನುವ ಭೇದ ಭಾವ ಮಾಡದೆ ಎಲ್ಲರೂ ಒಂದೇ ಎನ್ನುವ ನೀತಿಯಲ್ಲಿ ಜೀವನ ಸಾಗಿಸುತ್ತಾ ಇದ್ದಾರೆ. ಇವತ್ತಿನ ವಾರ್ಡನ ಸದಸ್ಯ ಮುರ್ತುಜಾ ಡಾಲಾಯತ ಅವರು ಬಸವಣ್ಣನವರ ಮೇಲೆ ಇಟ್ಟಿರುವ ಭಕ್ತಿಯನ್ನು ತಮ್ಮ ವಾರ್ಡನ ಸದ್ಭಾವನಾ ಪಾದಯಾತ್ರೆಯಲ್ಲಿ ತೋರಿರುವುದು ಭಾವೈಕ್ಯತೆಗೆ ಹಿಡಿದ ಕೈಕನ್ನಡಿ ಯಾಗಿದೆ ಎಂದರು.

ಇನ್ನೂ ಪೂಜ್ಯರಿಗೆ ದರೂರು ಸಂಗನಬಸವೇಶ್ವರ ಮಠದ ಕೊಟ್ಟೂರು ಸ್ವಾಮೀಜಿ, ಸೋಮಸಮುದ್ರದ ಸಿದ್ದಲಿಂಗ ದೇಶಿಕರು ಹಾಗೂ ಶ್ರೀಧರಗಡ್ಡೆಯ ಮರಿಕೊಟ್ಟರು ದೇಶಿಕರು,ಸಂಗನಾಳದ ವಿಶ್ವೇಶ್ವರ ದೇವರು ಪಾದಯಾತ್ರೆಯಲ್ಲಿ ಭಾಗಿಯಾಗಿದ್ದರು.

ಇನ್ನೂ ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಸಿದ್ದಪ್ಪ ಬಂಡಿ, ಪುರಸಭೆ ಸದಸ್ಯರ ಮುರ್ತುಜಾ ಡಾಲಾಯತ, ರಾಜೂ ಸಾಂಗ್ಲೀಕರ, ಎ.ಪಿ.ಗಾಣಗೇರ, ಅಂದಪ್ಪ ಸಂಕನೂರ, ಬಸವರಾಜ ಕೊಟಗಿ, ಸಿದ್ದಪ್ಪ ಚೋಳಿನ, ಸವರಾಜ ಚನ್ನಿ, ಬಸಯ್ಯ ಕಲ್ಮಂಗಿಮಠ, ಮುತ್ತಣ್ಣ ಚಟ್ಟೇರ, ಕಳಕಯ್ಯ ಸಾಲಿಮಠ, ದಾವಲಸಾಬ ಡಾಲಾಯತ, ಹೂವಾಜಿ ಚಂದುಕರ, ಶಿವಾನಂದ ಅರಳಿ, ರಂಗನಾಥ ಕಮ್ಮಾರ, ದಾವಲಸಾಬ ಆರಗಿದ್ದಿ, ಬಸವರಾಜ ಗುಡ್ಡದ, ಪ್ರಕಾಶ ಹೇಳವರ, ಪರಶುರಾಮ ಕಲಾಲ, ಪರಸಪ್ಪ ಕಮ್ಮಾರ, ಸುರೇಂದ್ರಸಾ ರಾಯಬಾಗಿ, ಶ್ರೀಕಾಂತ ಕಮ್ಮಾರ ಸೇರಿದಂತೆ ಅನೇಕರು ಇದ್ದರು.


Share News

Related Articles

Leave a Reply

Your email address will not be published. Required fields are marked *

Back to top button