
‘ವಿಶ್ವ’ಕಪ್ ಗೆದ್ದ ಭಾರತ: ಗೆಲುವಿನ ಅಶ್ವಾರೋಹಿ ರೋಹಿತ್ ಶರ್ಮಾ ಪಡೆ.
17 ದಶಕದ ಕನಸನ್ನು ನನಸು ಮಾಡಿದ ರೋಹಿತ್ ಶರ್ಮ ಪಡೆ.
ಜನಧ್ವನಿ ಕನ್ನಡ ಡಿಜಿಟಲ್ ನ್ಯೂಸ್.
ಬ್ರಿಡ್ಜಟೌನ:
ಬ್ರಿಡ್ಜ್‌ಟೌನ್ ಮೈದಾನದಲ್ಲಿ ನಡೆದ 2024ರ ಟಿ20 ವಿಶ್ವಕಪ್ ಫೈನಲ್ ಹೈವೋಲ್ಟೇಜ್ ಪಂದ್ಯದಲ್ಲಿ ಸೌತ್ ಆಫ್ರಿಕಾ ವಿರುದ್ಧ ಟೀಮ್ ಇಂಡಿಯಾ ಗೆದ್ದು ಬೀಗಿದೆ. ಫೈನಲ್ನಲ್ಲಿ ಗೆದ್ದು ಟೀಮ್ ಇಂಡಿಯಾ ಟಿ20 ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕಿದೆ.
ಟಾಸ್ ಗೆದ್ದು ಫಸ್ಟ್ ಬ್ಯಾಟಿಂಗ್ ಮಾಡಿದ್ದ ಟೀಮ್ ಇಂಡಿಯಾದ ಪರ ಓಪನರ್ ಆಗಿ ಬಂದ ಕ್ಯಾಪ್ಟನ್ ರೋಹಿತ್ ಶರ್ಮಾ ಎಂದಿನಂತೆ ಅಬ್ಬರಿಸಲು ಮುಂದಾದ್ರು. ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಶುರು ಮಾಡಿದ ರೋಹಿತ್ ಕೇಶವ್ ಮಹಾರಾಜ್ ಬೌಲಿಂಗ್ನಲ್ಲಿ ಬ್ಯಾಕ್ ಟು ಬ್ಯಾಕ್ ಫೋರ್ ಚಚ್ಚಿದ್ರು. ಬಳಿಕ ಮತ್ತೊಂದು ಬೌಂಡರಿ ಬಾರಿಸಲು ಹೋಗಿ ರೋಹಿತ್ ಕ್ಯಾಚ್ ಕೊಟ್ಟರು.
ತಾನು ಆಡಿದ 3 ಬಾಲ್ನಲ್ಲಿ 2 ಫೋರ್ ಸಮೇತ 9 ರನ್ ಗಳಿಸಿ ಪೆವಿಲಿಯನ್ಗೆ ತೆರಳಿದ್ರು. ಐಸಿಸಿ ಮೆಗಾ ಟೂರ್ನಮೆಂಟ್ನಲ್ಲಿ ಸಿಕ್ಕ ಅವಕಾಶವನ್ನೂ ಕೈ ಚೆಲ್ಲಿದ ರೋಹಿತ್ ಶರ್ಮಾ ಎಂದು ಫ್ಯಾನ್ಸ್ ಆಕ್ರೋಶ ಹೊರಹಾಕಿದರು
ಇನ್ನೊಂದೆಡೆ ಆರಂಭಿಕ ಆಘಾತಕ್ಕೆ ಸಿಲುಕಿದ ಟೀಮ್ ಇಂಡಿಯಾಗೆ ಆಸರೆ ಆಗಬೇಕಿದ್ದ ರಿಷಭ್ ಪಂತ್ ಬೇಜವಾಬ್ದಾರಿಯಿಂದ ಬ್ಯಾಟಿಂಗ್ ಮಾಡಿದ್ರು. ರೋಹಿತ್ ಔಟಾದ ಬೆನ್ನಲ್ಲೇ ಕ್ರೀಸ್ಗೆ ಬಂದ ಪಂತ್ ಕೇಶವ್ ಮಹಾರಾಜ್ ಬೌಲಿಂಗ್ ಅನಗತ್ಯ ಹೊಡೆತಕ್ಕೆ ಕೈ ಹಾಕಿ ಕ್ಯಾಚ್ ನೀಡಿದ್ರು. ಈ ವಿಚಾರಕ್ಕೆ ಸಿಟ್ಟಿಗೆದ್ದಿರೋ ಟೀಮ್ ಇಂಡಿಯಾ ಫ್ಯಾನ್ಸ್ ಪಂತ್ ವಿರುದ್ಧ ಬಹಿರಂಗ ಅಸಮಾಧಾನ ಹೊರಹಾಕಿದ್ದು ಕಾಣಬಹುದಾಗಿತ್ತು.
ಸಾಲು ಸಾಲು ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಮ್ ಇಂಡಿಯಾಗೆ ಅಕ್ಷರ್ ಪಟೇಲ್ ಬಲ ತುಂಬಿ. ಭಾರೀ ಒತ್ತಡದ ಮಧ್ಯೆ ಕೊಹ್ಲಿಗೆ ಸಾಥ್ ನೀಡಿ ಸಿಕ್ಸರ್ಗಳ ಸುರಿಮಳೆಗೈದರು. ತಾನು ಆಡಿದ 31 ಬಾಲ್ನಲ್ಲಿ 4 ಭರ್ಜರಿ ಸಿಕ್ಸರ್, 1 ಫೋರ್ ಸಮೇತ 47 ರನ್ ಚಚ್ಚಿದ್ರು. ಕೊನೆಗೆ ಡಿಕಾಕ್ನಿಂದ ರನೌಟ್ ಆದ್ರು. ಇವರ ಸ್ಟ್ರೈಕ್ ರೇಟ್ 150ಕ್ಕೂ ಹೆಚ್ಚು ಇತ್ತು.
ಓಪನರ್ ಆಗಿ ಬಂದಿದ್ದ ಕೊಹ್ಲಿ ಕೊನೆವರೆಗೂ ಕ್ರೀಸ್ನಲ್ಲಿ ನಿಂತು ಬ್ಯಾಟ್ ಬೀಸಿದ್ರು. ಒತ್ತಡದ ಮಧ್ಯೆ ಕೂಡ ಸ್ಟ್ರೈಕ್ ರೊಟೇಟ್ ಮಾಡುತ್ತಾ ವಿಕೆಟ್ ಬೀಳಿಸದೆ ಅತ್ಯುತ್ತಮ ಆಟ ಆಡಿದ್ರು. ತಾನು ಆಡಿದ 59 ಬಾಲ್ನಲ್ಲಿ 2 ಭರ್ಜರಿ ಸಿಕ್ಸರ್, ಬ್ಯಾಕ್ ಟು ಬ್ಯಾ 6 ಫೋರ್ ಸಮೇತ 76 ರನ್ ಸಿಡಿಸಿದ್ರು. ದುಬೆ 27 ರನ್ ಗಳಿಸಿದ ಕಾರಣ ಟೀಮ್ ಇಂಡಿಯಾ 20 ಓವರ್ಗಳಲ್ಲಿ 7 ವಿಕೆಟ್ಗೆ 176 ರನ್ ಕಲೆ ಹಾಕಿತ್ತು.
*ಕೊನೆವರೆಗೂ ಕ್ರೀಸ್ನಲ್ಲಿ ನಿಂತು ಸ್ಫೋಟಕ ಬ್ಯಾಟಿಂಗ್ ಮಾಡಿದ ವಿರಾಟ್ ಕೊಹ್ಲಿ..!*
ಓಪನರ್ ಆಗಿ ಬಂದಿದ್ದ ಕೊಹ್ಲಿ ಕೊನೆವರೆಗೂ ಕ್ರೀಸ್ನಲ್ಲಿ ನಿಂತು ಬ್ಯಾಟ್ ಬೀಸಿದ್ರು. ಒತ್ತಡದ ಮಧ್ಯೆ ಕೂಡ ಸ್ಟ್ರೈಕ್ ರೊಟೇಟ್ ಮಾಡುತ್ತಾ ವಿಕೆಟ್ ಬೀಳಿಸದೆ ಅತ್ಯುತ್ತಮ ಆಟ ಆಡಿದ್ರು. ತಾನು ಆಡಿದ 59 ಬಾಲ್ನಲ್ಲಿ 2 ಭರ್ಜರಿ ಸಿಕ್ಸರ್, ಬ್ಯಾಕ್ ಟು ಬ್ಯಾ 6 ಫೋರ್ ಸಮೇತ 76 ರನ್ ಸಿಡಿಸಿದ್ರು.
ಬಳಿಕ ಟೀಮ್ ಇಂಡಿಯಾ ನೀಡಿದ ಬೃಹತ್ ಟಾರ್ಗೆಟ್ ಬೆನ್ನತ್ತಿದ ಸೌತ್ ಆಫ್ರಿಕಾ ಆರಂಭದಲ್ಲೇ 2 ವಿಕೆಟ್ ಕಳೆದುಕೊಂಡಿತ್ತು. ಕ್ರೀಸ್ನಲ್ಲೇ ನಿಂತು ಇನ್ನಿಂಗ್ಸ್ ಕಟ್ಟಿದ ಕ್ವಿಂಟನ್ ಡಿ ಕಾಕ್ 31 ಬಾಲ್ನಲ್ಲಿ 1 ಸಿಕ್ಸರ್, 4 ಫೋರ್ ಸಮೇತ 39 ರನ್ ಬಾರಿಸಿದ್ರು. ಬಳಿಕ ಉತ್ತಮ ಬ್ಯಾಟಿಂಗ್ ಮಾಡಿದ ಸ್ಟಬ್ಸ್ ಕೂಡ 21 ಬಾಲ್ನಲ್ಲಿ 1 ಸಿಕ್ಸ್, 3 ಫೋರ್ ಜತೆಗೆ 31 ರನ್ ಚಚ್ಚಿದ್ರು.
ಇನ್ನು, ನಂತರ ಭರ್ಜರಿ ಬ್ಯಾಟಿಂಗ್ ಮಾಡಿದ ಹೆನ್ರಿಕ್ ಕ್ಲಾಸೆನ್ ಪಂದ್ಯದ ದಿಕ್ಕನ್ನೇ ಬದಲಿಸಿದ್ರು. ತಾನು ಆಡಿದ 27 ಬಾಲ್ನಲ್ಲಿ 5 ಭರ್ಜರಿ ಸಿಕ್ಸರ್, 2 ಫೋರ್ನೊಂದಿಗೆ 52 ರನ್ ಸಿಡಿಸಿದ್ರು. ಡೇವಿಡ್ ಮಿಲ್ಲರ್ 21 ರನ್ ಗಳಿಸಿದ್ರು. ಸೌತ್ ಆಫ್ರಿಕಾ ನಿಗದಿತ 20 ಓವರ್ನಲ್ಲಿ 7 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿದ್ರು. ಟೀಮ್ ಇಂಡಿಯಾ ವಿರುದ್ಧ 7 ರನ್ಗಳಿಂದ ಹೀನಾಯ ಸೋಲು ಕಂಡಿದೆ.
ಒಟ್ಟಿನಲ್ಲಿ ಅದೃಷ್ಟ ಒಳಿದಿದೆ. ಈ ಬಾರಿಯ *ವಿಶ್ವ* ಕಪ್ ಭಾರತದಾಗಿದೆ.ಇದರಿಂದ ವಿಶ್ವವನ್ನೇ ಗೆದ್ದ ಭಾರತ ಹೆಗ್ಗಳಿಕೆ ಪಾತ್ರ.