
Bright Festival 2024-25: ಶಿಕ್ಷಣದೊಂದಿಗೆ ಸಂಸ್ಕಾರ ಸನ್ನಡತೆಗಳನ್ನು ರೂಢಿಸಿಕೊಳ್ಳಿ
ಶಿಕ್ಷಣವನ್ನು ಕೇವಲ ಅಂಕಗಳಿಗೋಸ್ಕರವಾಗಿ ಬಳಸಿಕೊಳ್ಳದೆ ಜೀವನದಲ್ಲಿ ಸನ್ನಡತೆ, ಮಾನವೀಯತೆ, ಗುರುಹಿರಿಯರಲ್ಲಿ ಭಕ್ತಿ, ಸಂಸ್ಕಾರ, ಸಂಸ್ಕೃತಿಗಳನ್ನು ರೂಢಿಸಿಕೊಳ್ಳಲು ಬಳಸಿಕೊಳ್ಳಬೇಕೆಂದು ಚಲನಚಿತ್ರ ನಟ ಶ್ರೀನಗರ ಕಿಟ್ಟಿ ಹೇಳಿದರು.
Janadhwani News Gajendrgad ಗಜೇಂದ್ರಗಡ: ಶಿಕ್ಷಣವನ್ನು ಕೇವಲ ಅಂಕಗಳಿಗೋಸ್ಕರವಾಗಿ ಬಳಸಿಕೊಳ್ಳದೆ ಜೀವನದಲ್ಲಿ ಸನ್ನಡತೆ, ಮಾನವೀಯತೆ, ಗುರುಹಿರಿಯರಲ್ಲಿ ಭಕ್ತಿ, ಸಂಸ್ಕಾರ, ಸಂಸ್ಕೃತಿಗಳನ್ನು ರೂಢಿಸಿಕೊಳ್ಳಲು ಬಳಸಿಕೊಳ್ಳಬೇಕೆಂದು ಚಲನಚಿತ್ರ ನಟ ಶ್ರೀನಗರ ಕಿಟ್ಟಿ ಹೇಳಿದರು.
ಪಟ್ಟಣದ ಜಿ.ಕೆ. ಬಂಡಿ ಗಾರ್ಡನ್ನಲ್ಲಿ ನಡೆದ ಬ್ರೆಟ್ ಬಿಗನಿಂಗ್ ಆಂಗ್ಲ ಮಾಧ್ಯಮ ಪೂರ್ವ ಪ್ರಾಥಮಿಕಶಾಲೆಯ 2ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ಸಾಮರ್ಥ್ಯಕ್ಕೆ ಅನುಗುಣವಾಗಿ ಅವರ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾದ ವಾತಾವರಣ ಸೃಷ್ಟಿಸುವ ನಿಟ್ಟಿನಲ್ಲಿ ಶಿಕ್ಷಕ ವೃಂದ ಹಾಗೂ ಪೋಷಕ ವರ್ಗ ಶ್ರಮಿಸಬೇಕು ಎಂದು ಹೇಳಿದರು.
ಸಚಿವ ಸಂತೋಷ ಲಾಡ್ ಮಾಧ್ಯಮ ಸಲಹೆಗಾರ ಇರ್ಫಾನ್ ಮುದಗಲ್ ಮಾತನಾಡಿ ವಿದ್ಯಾರ್ಥಿಗಳು ಭತ್ತ ತುಂಬುವ ಚೀಲಗಳಾಗದೆ, ಭತ್ತದ ಬೆಳೆ ಆಗಬೇಕೆಂದು, ಸಮಾಜಕ್ಕೆ ನಾವೇನಾದರೂ ನೀಡುತ್ತೇವೆ ಎಂದರೆ ನಮ್ಮ ಸನ್ನಡತೆ ಮಾನವೀಯತೆ ಪ್ರಮುಖವಾಗುತ್ತದೆ ಎಂದು ತಿಳಿಸಿದರು.
ಶೀತಲ್ ಓಲೆಕಾರ ಮಾತನಾಡಿ, ಮುಂಬರುವ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡಬೇಕಾದಲ್ಲಿ ವಿದ್ಯಾರ್ಥಿಗಳಿಗೆ ಶಿಕ್ಷಕರು ಹೇಳುವ ಪಾಠ ಗ್ರಹಿಸುವ ಶಕ್ತಿಯೊಂದಿಗೆ, ಅಪಾರ ತಾಳ್ಮೆಯು ಇರಬೇಕಾಗಿದ್ದು,ತಂದೆ-ತಾಯಿಯರಲ್ಲಿ ಗೌರವ ಇಟ್ಟು ಕೊಂಡರೆ ಭವಿಷ್ಯದಲ್ಲಿ ಯಶಸ್ಸು ಖಂಡಿತ ದೊರೆಯುತ್ತದೆ ಎಂದು ತಿಳಿಸಿದರು.
ಈ ವೇಳೆ ಶಾಲಾ ಮಕ್ಕಳು ಸ್ವಾಗತ ನೃತ್ಯ ಅತ್ಯಾಕರ್ಷಕವಾಗಿ ಮಾಡಿದರು ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಮೆಡಲ್ ಹಾಗೂ ಪ್ರಶಸ್ತಿ ಪ್ರತ ವಿತರಣೆ ನಂತರ ಸಾಂಸ್ಕೃತಿಕ ಕಾರ್ಯ ಕ್ರಮಗಳು ನಡೆದವು.ಸಂಜು ವೆಡ್ಸ ಗೀತಾ -2 ಚಲನಚಿತ್ರದ ನಿರ್ಮಾಪಕ ಚಲವಾದಿ ಕುಮಾರ, ನಿರ್ದೇಶಕ ನಾಗಶೇಖರ, ಪ್ರಗತಿಪರ ಚಿಂತಕ ಕೋಡಿಹಳ್ಳಿ ಭೀಮಪ್ಪ, ಯುಥ್ ಐಕಾನ್ ಅಂದಪ್ಪ ಸಂಕನೂರ, ಸಿ.ಆರ್.ಪಿ. ಆರ್.ಜಿ.ಮ್ಯಾಕಲ್, ಕಾಲೇಶ ವನ್ನಾಲ, ನಾಜೀಯಾ ಮುದಗಲ್ಲ, ಅನುಷಾ ತಳವಾರ, ನೇತ್ರಾವತಿ ಅಂಬೋರೆ, ಕಿರಣ ನಿಡಗುಂದಿ, ವಿಜಯಲಕ್ಷ್ಮಿ ಮುಲ್ಕಿಪಾಟೀಲ, ಸಾವಿತ್ರಿ ಹಾವೇರಿ, ಅಂಜುಮ್ , ರವಿ ನಿಡಗುಂದಿ ಸೇರಿದಂತೆ ಅನೇಕರು ಇದ್ದರು.