
ಪುರಸಭೆ ಪರವಾನಗಿ ಪಡೆಯದ ಅಂಗಡಿಗಳಿಗೆ, ಹೋಟೆಲ್ ಗಳ ಮೇಲೆ ದಾಳಿ.
ಪುರಸಭೆ ಪರವಾನಗಿ ಪಡೆಯದ ಅಂಗಡಿಗಳಿಗೆ, ಹೋಟೆಲ್ ಗಳ ಮೇಲೆ ದಾಳಿ.
ಗಜೇಂದ್ರಗಡ ::
ನಗರದ ತಹಶಿಲ್ದಾರರ, ಆಹಾರ ಇಲಾಖೆ, ಪುರಸಭೆ , ಕಾರ್ಮಿಕ ಇಲಾಖೆ, ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ನಗರದ ವಿವಿಧ ಹೋಟೆಲ್,ಕಿರಾಣಿ ಅಂಗಡಿಗಳ ಮೇಲೆ ದಾಳಿ ನಡೆಸಿದ್ದಾರೆ.
ಇನ್ನೂ ಈ ದಾಳಿಯಲ್ಲಿ ಕೆಲ ನಿಷೇಧಿತ ಕಲರ ಬಳಕೆ, ಟೆಸ್ಟಿಂಗ್ ಪೌಡರ್ ಬಳಕೆ, ಗುಟ್ಕಾ ಮಾರುತ್ತಿದ್ದ ಅಂಗಡಿಗಳ ಮೇಲೆಯೂ ಸಹ ದಾಳಿ ಮಾಡಲಾಯಿತು.
ಇನ್ನೂ ವಿಷಯ ತಿಳಿದ ಕೆಲ ಅಂಗಡಿ ಮಾಲೀಕರು, ಬೇಕರಿ ಅಸೋಸಿಯೇಷನ್, ಹೀಗೆ ಇನ್ನೂ ಹತ್ತು ಹಲವು ಸಂಘದವರು ತಹಶಿಲ್ದಾರರ ಕಚೇರಿಗೆ ಬೇಟಿ ನೀಡಿ ತಹಶಿಲ್ದಾರರ ಕಿರಣ ಕುಮಾರ ಕುಲಕರ್ಣಿಯವರಿಗೆ ವಾಸ್ತವ ಮಾಹಿತಿ ನೀಡಿದರು ಬಳಿಕ ತಹಶಿಲ್ದಾರರ ಕೆಲ ಮಾರ್ಗಸೂಚಿಗಳನ್ನು ಅಂಗಡಿಕಾರರಿಗೆ ಸೂಚಿಸಿದರು ಅದಕ್ಕೆ ಅಂಗಡಿ ಮಾಲೀಕರು ಸಹಮತ ವ್ಯಕ್ತ ಪಡಿಸಿದ್ದಾರೆ.
ಇದಕ್ಕೂ ಮೊದಲು ಪುರಸಭೆ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ಅವರು ಪುರಸಭೆ ಅಂಗಡಿ ಪರವಾಗಿಗೆ ಪರಿಶೀಲನೆಗೆ ತೆರಳಿದ್ದಾಗ ಏಕಾಏಕಿಯಾಗಿ ನೂರಾರು ಜನ ಸೇರಿದರು. ಕೆಲ ಕಾಲ ಮಾತಿನ ವಾಗ್ವಾದ ನಡೆಯಿತು.
ಬಳಿಕಕ ಮಾಧ್ಯಮದ ಜೊತೆ ಪುರಸಭೆ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ ಮಾತನಾಡಿ ನಮ್ಮ ಪುರಸಭೆಗೆ ಸು. ೨೦ ಲಕ್ಷಕ್ಕೂ ಹೆಚ್ಚು ಹಣ ಸಂಗ್ರಹವಾಗಬೇಕಿದೆ. ಅದಕ್ಕಾಗಿ ಮೇಲಾಧಿಕಾರಿಗಳ ಆದೇಶದಂತೆ ಪರವಾನಗಿ ಪಡೆದ ಹಾಗೂ ಪಡೆಯದ ಅಂಗಡಿ ಮುಗ್ಗಟ್ಟುಗಳಿಗೆ ಬೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದೇವೆ. ಕೆಲ ಹೋಟೆಲ್ ಗಳಲ್ಲಿ ಕಲಬೆರಕೆ ಎಣ್ಣೆ, ನಿಷೇದಿಕ ಕಲರ ಬಳಕೆ, ಟೆಸ್ಟಿಂಗ್ ಪೌಡರ ಬಳಕೆ, ಅಸ್ವಚ್ಚತೆ ಇದ್ದಿದ್ದು ಕಂಡು ಬಂದಿದೆ. ಅಂತಹ ಅಂಗಡಿಗಳ ಮಾಲೀಕರಿಗೆ ಸೂಕ್ತ ಕ್ರಮಕ್ಕೆ ಮುಂದಾಗಿದ್ದೇವೆ ಎಂದರು.
ಇದೇ ಸಂದರ್ಭದಲ್ಲಿ ಪೋಲಿಸ್ ಇಲಾಖೆ , ಆಹಾರ ಇಲಾಖೆ , ಪುರಸಭೆ ಇಲಾಖೆಯ ಅಧಿಕಾರಿಗಳು ಇದ್ದರು.