
ಮಕ್ಕಳ ಕಲಿಕೆಗೆ ಕಲಿಕಾ ಹಬ್ಬ ಸಹಕಾರಿ : ಆರ್.ಎನ್.ಹುರಳಿ.
ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ ೬ ರಲ್ಲಿ ದಕ್ಷಿಣ ವಲಯದ ಕಲಿಕಾ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ
ಮಕ್ಕಳ ಕಲಿಕೆಗೆ ಕಲಿಕಾ ಹಬ್ಬ ಸಹಕಾರಿ : ಆರ್.ಎನ್.ಹುರಳಿ.
ಗಜೇಂದ್ರಗಡ :
ಮಕ್ಕಳಿಗೆ ಕಲಿಕೆಯ ವಿಧಾನವನ್ನು ಸುಗಮಗೊಳಿಸುವ ಮೂಲಕ ಕಲಿಕಾ ಆಸಕ್ತಿ ಹೆಚ್ಚಿಸಿದಾಗ ಮಾತ್ರ ಶಿಕ್ಷಕನ ಸಂವಹನಕ್ಕೆ ಅರ್ಥ ಬರುತ್ತದೆ ಎಂದು ರೋಣ ಕ್ಷೇತ್ರ ಶಿಕ್ಷಣ ಅಧಿಕಾರಿ ಆರ್.ಎನ್.ಹುರಳಿ ಹೇಳಿದರು.
ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ ೬ ರಲ್ಲಿ ದಕ್ಷಿಣ ವಲಯದ ಕಲಿಕಾ ಹಬ್ಬ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಇಂದು ಮಕ್ಕಳ ಕಲಿಕೆ ಎನ್ನುವುದು ಉಲ್ಲಾಸದಾಯಕ, ಉತ್ಸಾಹದಿಂದ ಪರಸ್ಪರ ಸಂವಹನ ಬೇಕಿದೆ. ವಿಧ್ಯಾರ್ಥಿಗಳ ಬುನಾದಿ ಅಕ್ಷರ ಜ್ಞಾನ, ಸಂಖ್ಯಾ ಜ್ಞಾನ, ಗಣಿತ ಕಲಿಕಾ ಆಂದೋಲನ ಹಾಗೂ ಶಿಕ್ಷಣ ಇಲಾಖೆಯು ನಿಗಧಿ ಪಡಿಸಿದ ಯೋಜನೆಗಳನ್ನು ನಾವಿನ್ಯತೆಯಿಂದ ಅನುಷ್ಠಾನ ತಂದಾಗ ಮಾತ್ರ ವಿಧ್ಯಾರ್ಥಿಗಳ ಜ್ಞಾನ ವಿಕಸಿತವಾಗಲು ಸಾಧ್ಯವಾಗುತ್ತದೆ ಎಂದರು.
ಬಳಿಕ ಪುರಸಭಾ ಸದಸ್ಯ ರೂಪ್ಲೇಶ ರಾಠೋಡ ಮಾತನಾಡಿ ಮಕ್ಕಳಿಗೆ ವಿನೂತನ ಶೈಲಿಯನ್ನು ಬಳಸಿ ಮಕ್ಕಳಿಗೆ ಅರ್ಥೈಸಿದಾಗ ಮಕ್ಕಳ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಲು ಸಾಧ್ಯವಾಗುತ್ತದೆ ಎಂದರು.
ಪ್ರೌಢಶಾಲಾ ವಿಭಾಗದ ಬಿ.ಆರ್.ಪಿ. ಐ.ಎಸ್. ಮಾದರ , ದಕ್ಷಿಣ ವಲಯದ ಸಿ.ಆರ್.ಪಿ. ಆರ್.ಜಿ.ಮ್ಯಾಕಲ್ , ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರಾದ ವಿ.ಎ.ಹಾದಿಮನಿ, ಕಾರ್ಯದರ್ಶಿ ಎಸ್.ಕೆ.ಸರಗಣಾಚಾರಿ, ಮಾತನಾಡಿದರು.
ಕಾರ್ಯಕ್ರಮದಲ್ಲಿ ಎಸ್.ಡಿ.ಎಮ್.ಸಿ.ಅಧ್ಯಕ್ಷ ಮಾರುತಿ ರಾಠೋಡ, ಶ್ರೀಮತಿ ಎಸ್.ಎಚ್.ಬಂಡಿವಡ್ಡರ, ಶರಣಮ್ಮ ಅಂಗಡಿ, ಸುಧಾ ಜಾಡರ, ಉತ್ತರ ವಲಯದ ಸಿ.ಆರ್.ಪಿ. ಕಾಲೇಶ ವನ್ನಾಲ, ರಾಜೂರ ವಲಯದ ಸಿ.ಆರ್.ಪಿ. ಎಮ್.ಯು. ಗೋಡೆಕಾರ, ಎಮ್.ವಿ. ಚಿನ್ನೂರ, ಬಿ.ಎಸ್.ಅಣ್ಣಿಗೇರಿ, ಎಸ್.ಎಸ್.ಪಸಾರದ, ಶಾಲೆಯ ಮುಖ್ಯಶಿಕ್ಷಕ ರವೀಂದ್ರ ಕವಡಿಮಟ್ಟಿ ಸೇರಿದಂತೆ ಅನೇಕರು ಇದ್ದರು.