ಉಪಯುಕ್ತ ಮಾಹಿತಿಗಳುಕನಕಗಿರಿಕುಕನೂರುಕುಷ್ಟಗಿಕೊಪ್ಪಳಗಂಗಾವತಿಗದಗಸೋಶಿಯಲ್ ಮೀಡಿಯಾ ಅಪ್ಡೇಟ್ಸ್ಸ್ಥಳೀಯ ಸುದ್ದಿಗಳು

ಡಾ.ಬಿ.ಆರ್.ಅಂಬೇಡ್ಕರ ಸಂದೇಶ ಪಾಲಿಸುವ ಪ್ರತಿ ಪ್ರಜೆಯೂ ಜೀವನದಲ್ಲಿ ಕುಗ್ಗಲಾರ : ಉಮೇಶ ಮಲ್ಲಾಪೂರ.

ನಗರದ ಬಿಜೆಪಿ ಕಾರ್ಯಾಲಯದಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ಜಯಂತಿ ಆಚರಣೆ.

Share News

 

ಜನಧ್ವನಿ ಕನ್ನಡ ಸುದ್ದಿಮೂಲ ಗಜೇಂದ್ರಗಡ:

ಡಾ ಬಿ ಆರ್ ಅಂಬೇಡ್ಕರ್ ಅವರ ಬದುಕು, ಜೀವನಶೈಲಿ, ಅವರ ಕೊಡುಗೆಗಳು ಎಲ್ಲರಿಗೂ ಸ್ಫೂರ್ತಿ. ಅವರ ಕೊಡುಗೆ ಭಾರತ ಜನತೆಯ ಒಂದು ರೀತಿ ಜೀವನಾಡಿ ಇದ್ದಂತೆ. ಅವರ ಬೃಹತ್‌ ಮತ್ತು ಸೂಕ್ಷ್ಮ ಕೊಡುಗೆಗಳಿಂದಲೇ ಇಂದು ದೇಶದ ಎಲ್ಲ ಜನತೆಗೆ ಸಮಾನತೆ, ಹಕ್ಕು, ಕರ್ತವ್ಯ, ಪ್ರಗತಿಯ ಕನಸು ಎಲ್ಲವೂ ಸುಲಭ ಹಾಗೂ ಸುಗಮವಾಗಿರುವುದು ಎಂದು ಬಿಜೆಪಿ ರೋಣ ಮಂಡಳದ ಅಧ್ಯಕ್ಷ ಉಮೇಶ ಮಲ್ಲಾಪೂರ ಹೇಳಿದರು.

ನಗರದ ಬಿಜೆಪಿ ಕಾರ್ಯಾಲಯದಲ್ಲಿ ಸಂವಿಧಾನ ಶಿಲ್ಪಿ ಡಾ. ಬಾಬಾ ಸಾಹೇಬ ಅಂಬೇಡ್ಕರ್ ಅವರ ಜಯಂತಿ ಆಚರಣೆಯಲ್ಲಿ ಭಾಗಿಯಾಗಿ ಮಾತನಾಡಿದರು.

ನಾಡು ಕಂಡ ಮೇರು ನಾಯಕ ನಮ್ಮ ಹೆಮ್ಮೆಯ ಸಂವಿಧಾನ ಶಿಲ್ಪಿಯೂ, ಎಲ್ಲರ ಜೀವನಕ್ಕೆ ಆದರ್ಶ ಹಾಗೂ ಮಾರ್ಗ. ಬಾಬಾ ಸಾಹೇಬರ ಚಿಂತೆನೆಗಳು ಇಂದಿಗೂ ಸ್ಮರಣಾರ್ಥವಾಗಿದೆ ಅದನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು.

ಬಳಿಕ ಪುರಸಭೆ ವಿರೋಧ ಪಕ್ಷದ ನಾಯಕ ಮೂಕಪ್ಪ ನಿಡಗುಂದಿ, ಅಶೋಕ ವನ್ನಾಲ ಮಾತನಾಡಿ
ಅಂಬೇಡ್ಕರ್ ರವರು ನೀಡಿದ ಅದ್ಭುತ ಸಂದೇಶಗಳು, ಇಂದಿಗೂ ಸಹ ಸದಾ ಜನಜನಿತವಾಗಿವೆ. ಅವರ ಸಂದೇಶಗಳನ್ನು ಪಾಲಿಸುವ ಪ್ರತಿ ಪ್ರಜೆಯೂ ಜೀವನದಲ್ಲಿ ಎಂದೂ ಕುಗ್ಗಲಾರ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಜಯಂತಿ ಎಂದರೆ ಕೆಲ ಜಾತಿಯವರಿಗೆ ಮಾತ್ರ ಸೀಮಿತವಲ್ಲ. ಎಲ್ಲಾ ಜಾತಿ ಸಮುದಾಯದವರು ಸೇರಿಕೊಂಡು ಭಾವೈಕ್ಯದೊಂದಿಗೆ ವಿಜೃಂಭಣೆಯಿಂದ ಆಚರಿಸಬೇಕು ಎಂದರು.

ಇನ್ನೂ ಇದೇ ಸಂದರ್ಭದಲ್ಲಿ ಪುರಸಭೆ ಸದಸ್ಯ ರೂಪ್ಲೇಶ ರಾಠೋಡ, ದಾನು ರಾಠೋಡ, ಬುಡ್ಡಪ್ಪ ಮೂಲಿಮನಿ,ಕನಕಪ್ಪ ಅರಳಿಗಿಡದ, ಬಾಳಾಜಿರಾವ ಬೊಸ್ಲೆ, ಮಹಾಂತೇಶ ಪೂಜಾರ, ರಮೇಶ ವಕ್ಕರ, ಡಿ.ಜಿ.ಕಟ್ಟಿಮನಿ, ಶಿವಕುಮಾರ ಜಾಧವ, ಬಸವರಾಜ ಬಂಕದ, ಭೀಮಸಿ ಮಾದರ, ಯು.ಆರ್.ಚನ್ನಮ್ಮನವರ, ಹುಲ್ಲಪ್ಪ ಕೇಂಗಾರ, ಸಂತೋಷ ಕಡಿವಾಳ, ಅಶೋಕ ಮಾದರ ಕಳಕಪ್ಪ ಜೊಳ್ಳಿಯವರ, ಮಂಜುನಾಥ ಸೇರಿದಂತೆ ಅನೇಕರು ಇದ್ದರು.


Share News

Related Articles

Leave a Reply

Your email address will not be published. Required fields are marked *

Back to top button