
ವಿವಿಧ ಕಾಮಗಾರಿಗಳನ್ನು ತಾ.ಪಂ. ಇಒ ಮಂಜುಳಾ ಹಕಾರಿ ವೀಕ್ಷಣೆ
ಮುಶಿಗೇರಿ ಗ್ರಾಮದ ಪಶು ಆಸ್ಪತ್ರೆ ಅಭಿವೃದ್ಧಿ ಕಾಮಗಾರಿ, ಚಿಕ್ಕಳಗುಂಡಿ ಗ್ರಾಮದ ಶಾಲಾ ಅಭಿವೃದ್ಧಿ ಕಾಮಗಾರಿ ಸ್ಥಳ ಭೇಟಿ ನೀಡಿ ನೆಲ ಆಸು, ಬಣ್ಣ ಬಳಕೆ, ಬಾಗಿಲು ಕಿಟಗಿ ದುರಸ್ಥಿ, ಪರಿಶೀಲಿಸಿದರು.
JanadhwaniNewsKannada:ಗಜೇಂದ್ರಗಡ: ತಾಲೂಕಿನ ಮುಶೀಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ನರೇಗಾ ಯೋಜನೆ ಹಾಗೂ ತಾಲೂಕು ಪಂಚಾಯತ ಅನುದಾನದಡಿ ಅನುಷ್ಠಾನಗೊಂಡಿರುವ ವಿವಿಧ ಕಾಮಗಾರಿಗಳನ್ನು ಇಂದು ಮಾನ್ಯ ತಾಲೂಕ ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಂಜುಳಾ ಹಕಾರಿ ಅವರು ವೀಕ್ಷಣೆ ಮಾಡಿದರು.
ಈ ವೇಳೆ ಮುಶಿಗೇರಿ ಗ್ರಾಮದ ಪಶು ಆಸ್ಪತ್ರೆ ಅಭಿವೃದ್ಧಿ ಕಾಮಗಾರಿ, ಚಿಕ್ಕಳಗುಂಡಿ ಗ್ರಾಮದ ಶಾಲಾ ಅಭಿವೃದ್ಧಿ ಕಾಮಗಾರಿ ಸ್ಥಳ ಭೇಟಿ ನೀಡಿ ನೆಲ ಆಸು, ಬಣ್ಣ ಬಳಕೆ, ಬಾಗಿಲು ಕಿಟಗಿ ದುರಸ್ಥಿ, ಪರಿಶೀಲಿಸಿದರು. ನರೇಗಾ ಯೋಜನೆಯಡಿ ಶಾಲಾ ಕಂಪೌಂಡ್ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ ವೀಕ್ಷಣೆ ಮಾಡಿದರು. ನರೇಗಾ ಯೋಜನೆಯಡಿ ಶಾಲಾ ಕಂಪೌಂಡ್ ಮತ್ತು ಶೌಚಾಲಯ ಕಾಮಗಾರಿ ಆರ್ಧಕ್ಕೆ ನಿಂತಿರುವ ಬಗ್ಗೆ ಮಾಹಿತಿ ಪಡೆದು ತ್ವರಿತವಾಗಿ ಪ್ರಾರಂಭಿಸಲು ಸಂಬಂಧಿಸಿದ ಅಧಿಕಾರಿಗೆ ತಿಳಿಸಿದರು.
ಇದಕ್ಕೂ ಮೊದಲು ಗ್ರಾಮ ಪಂಚಾಯತಿಗೆ ಭೇಟಿ ನೀಡಿ ಹಾಜರಾತಿ, ಗ್ರಾ.ಪಂ. ದಾಖಲಾತಿಗಳು ನರೇಗಾ ಯೋಜನೆಯ ಕಾಮಗಾರಿಗಳ ಪೈಲ್‌ಗಳನ್ನು ಪರಿಶೀಲಿಸಿದರು. ೭ ವಹಿ (ರಜಿಸ್ಟರ್) ಗಳನ್ನು ಎಸ್.ಬಿ.ಎಂ. ಪೈಲ್, ಸಮುದಾಯ ಶೌಚಾಲಯ ನಿರ್ಮಾಣ, ಶೌಚಾಲಯ ವರ್ಕ ಆರ್ಡರ್ ತೆಗೆಯುವುದು. ಆರೋಗ್ಯ ಅಮೃತ ಅಭಿಯಾನ ಪಿ.೨ ಎಂಟ್ರಿ ಮಾಡಿಸಲು ಪಿಡಿಒ ಅವರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ರಾಜಶೇಖರ ಮಾಲಗಿತ್ತಿ. ಗ್ರಾಮ ಪಂಚಾಯತಿ ಸದಸ್ಯ ಶ್ರಿ ಕಳಕಪ್ಪ ಸೂಡಿ, ಪಿಡಿಒ ಮಂಜುನಾಥ ಮೇಟಿ, ಕಾರ್ಯದರ್ಶಿ ಸತೀಶ ಚಂದಾಲವರ, ಹಾಗೂ ಪಂಚಾಯತಿ ಸಿಬ್ಬಂದಿಗಳು ಇದ್ದರು. ನಂತರ ಇಟಗಿ ಗ್ರಾಮ ಪಂಚಾಯತಿಗೆ ವ್ಯಾಪ್ತಿಯ ಪಶು ಆಸ್ಪತ್ರೆಗೆ ಭೇಟಿ ನೀಡಿ ಕಾಮಗಾರಿ ವೀಕ್ಷಣೆ ಮಾಡಿದರು.