
ರಸ್ತೆ ಬ್ರೇಕರ್ ಗೆ ಒತ್ತಾಯಿಸಿ ನಮ್ಮ ಕರ್ನಾಟಕ ಸೇನೆ ಸಂಘಟನೆ ಪ್ರತಿಭಟನೆ.
ರಸ್ತೆ ಬ್ರೇಕರ್ ಗೆ ಒತ್ತಾಯಿಸಿ ನಮ್ಮ ಕರ್ನಾಟಕ ಸೇನೆ ಸಂಘಟನೆ ಪ್ರತಿಭಟನೆ.
ಗಜೇಂದ್ರಗಡ:
ಗಜೇಂದ್ರಗಡ ನಗರದಲ್ಲಿ ಎನ್ ಹೆಚ್ 367 ಜೋಡು ರಸ್ತೆಗೆ ರೋಡ ಹಂಪ್ಸ್ ( ರಸ್ತೆ ಬ್ರೇಕರ್) ಹಾಕಬೇಕೆಂದು ನಮ್ಮ ಕರ್ನಾಟಕ ಸೇನೆ ಸಂಘಟನೆ ಹಾಗೂ ಗಜೇಂದ್ರಗಡ ನಗರದ ಸಾರ್ವಜನಿಕರು ಸೇರಿ ಬುಧವಾರದಂದು ರಸ್ತೆಯಲ್ಲಿ ಪ್ರತಿಭಟನೆ ನಡೆಸಿದರು.
ನಮ್ಮ ಕರ್ನಾಟಕ ಸೇನೆಯ ಜಿಲ್ಲಾಧ್ಯಕ್ಷರಾದ ಭೀಮಣ್ಣ ಇಂಗಳೆ ಮಾತನಾಡಿ
ಒಂದು ವರ್ಷದ ಹಿಂದೆ ರಜನಿಕಾಂತ್ ಕೆಂಗೇರಿ ಅವರಿಗೆ ಈ ಕುರಿತು ಮನವಿಯನ್ನು ಸಲ್ಲಿಸಲಾಗಿತ್ತು. ಆದರೆ ಮನವಿಗೆ ಯಾವುದೇ ಸ್ಪಂದನೆ ಸಿಕ್ಕಿರುವುದಿಲ್ಲ ಹಾಗೂ ಸರ್ಕಾರಿ ಉರ್ದು ಶಾಲೆ ಮತ್ತು ಉರ್ದು ಪ್ರೌಢ ಶಾಲೆ ಹಾಗೂ ಕನ್ನಡ ಪ್ರೌಢಶಾಲೆಗಳು ಹಾಸ್ಟೆಲ್ ಗಳು ಇರುವುದರಿಂದ ಮಕ್ಕಳಿಗೆ ತೊಂದರೆ ಆಗುತ್ತಿದೆ ಎಂದರು.
ಬಳಿಕ ತಹಶಿಲ್ದಾರರ ಕಿರಣಕುಮಾರ ಕುಲಕರ್ಣಿ,
ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಮತ್ತು ಪುರಸಭೆ ಅಧಿಕಾರಿಗಳು ಆಗಮಿಸಿ, ಪ್ರತಿಭನಾಕಾರರ ಅಹವಾಲು ಆಲಿಸಿದರು. ಇನ್ನೊಂದು ತಿಂಗಳಲ್ಲಿ ಬ್ರೆಕ್ ಹಾಕಲು ಎಲ್ಲ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.
ಇನ್ನು ಈ ವೇಳೆ ಭೀಮಣ್ಣ ಇಂಗಳೆ, ಶಾಮಿದ ಮಾಲ್ದಾರ್, ರಾಜು ಮಾಳೋತ್ತರ, ಜಗದೀಶ ಮಡಿವಾಳರ, ಮೆಹಬೂಬ ಮುದಗಲ, ತಿರುಪತಿ ಕುರಿ, ಪರಶುರಾಮ್ ಮೇಟಿ, ಆಶಿಕ ತಟಗಾರ , ಇಮ್ರಾನ ಅತ್ತಾರ, ಭಾಷಾ ಸಾಬ್ ಮುದಗಲ್, ಯಮನೂರು ಗೌಡ್ರು, ಕಳಕಪ್ಪ ಹಾಳಕೇರಿ, ಲಕ್ಷ್ಮಣ ಮಳೋತ್ತರ ಸೇರಿದಂತೆ ಸಂಘದ ಸರ್ವ ಸದಸ್ಯರು ಮತ್ತು ನಗರದ ಸಾರ್ವಜನಿಕರು ಇದ್ದರು.