
ಅಂತಾರಾಷ್ಟ್ರೀಯcrimeಆರೋಗ್ಯ ಇಲಾಖೆಉದ್ಯೋಗ ವಾರ್ತೆಗಳುಉಪಯುಕ್ತ ಮಾಹಿತಿಗಳುಕುಕನೂರುಕುಷ್ಟಗಿಕೊಪ್ಪಳಗಂಗಾವತಿಗದಗಚಿರತೆ ದಾಳಿಚುನಾವಣಾ ಬಾಂಡ್ ಅಕ್ರಮಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುಡಿವೋರ್ಸ್ತಾಲೂಕುಧಾರವಾಡಪರೀಕ್ಷೆಬಾಗಲಕೋಟೆಬಿಗ್ ಬಾಸ್ಬಿಸಿನೆಸ್ ಕನೆಕ್ಟ್ಬೆಳಗಾವಿಮರಣದಂಡನೆ ಶಿಕ್ಷೆರಾಜ್ಯ ಸುದ್ದಿರಾಷ್ಟೀಯ ಸುದ್ದಿಲೇಖನವಕ್ಫ್ವಿಡಿಯೋಗಳು
ಕೊಂದು ಉಳಿಸಿಕೊಳ್ಳುವ ಧರ್ಮ ಯಾವುದಿದೆ..? : ಕ್ರಾಂತಿ ಸೂರ್ಯ ಜೈ ಭೀಮ ಸೇನೆ ಖಂಡನೆ.
ಕೊಂದು ಉಳಿಸಿಕೊಳ್ಳುವ ಧರ್ಮ ಯಾವುದಿದೆ..? : ಕ್ರಾಂತಿ ಸೂರ್ಯ ಜೈ ಭೀಮ ಸೇನೆ ಖಂಡನೆ.
ಜನಧ್ವನಿ ಕನ್ನಡ ಸುದ್ದಿಮೂಲ ಗಜೇಂದ್ರಗಡ:
ಜಮ್ಮು-ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ಕೃತ್ಯ ಅತ್ಯಂತ ಭೀಭತ್ಸ್ಯ ಹಾಗೂ ಹೇಯ. ಈ ದಾಳಿಯಲ್ಲಿ ಇಬ್ಬರು ಕನ್ನಡಿಗರು ಸೇರಿದಂತೆ 28 ಕ್ಕೂ ಹೆಚ್ಚು ಜನ ಬಲಿಯಾಗಿದ್ದು ಅತೀವ ನೋವು ತಂದಿದೆ. ಉಗ್ರರ ಈ ಕ್ರೂರ ದಾಳಿಯ ಬಳಿಕ ‘ಕೊಂದು ಉಳಿಸಿಕೊಳ್ಳುವ ಧರ್ಮ ಯಾವುದಾದರೂ ಇದೆಯಾ.?’ ಎಂಬ ಪೂರ್ಣಚಂದ್ರ ತೇಜಸ್ವಿಯವರ ಮಾತು ನೆನಪಿಗೆ ಬರುತ್ತಿದೆ ಎಂದು ಕ್ರಾಂತಿಸೂರ್ಯ ಜೈ ಭೀಮ ಸೇನೆ ರಾಜ್ಯಾಧ್ಯಕ್ಷ ಮಂಜುನಾಥ ರಾಠೋಡ ಹೇಳಿದರು.
ನಗರದಲ್ಲಿ ಪತ್ರಿಕಾ ಪ್ರಕಟಣೆ ನೀಡಿರುವ ಅವರು
ಪಹಲ್ಗಾಮ್‌ನಲ್ಲಿ ನಡೆದಿರುವುದು ಕೇವಲ ಉಗ್ರರ ದಾಳಿಯಲ್ಲ. ಅದು ಮನುಷ್ಯತ್ವದ ವಿರುದ್ಧದ ದಾಳಿ, ಈ ದೇಶದ ಸಾರ್ವಭೌಮತ್ವದ ವಿರುದ್ಧದ ದಾಳಿ, ಈ ನೆಲದ ಅಸ್ಮಿತೆಯ ಮೇಲಿನ ದಾಳಿ. ಈ ದಾಳಿಯ ಹಿಂದಿನ ಶಕ್ತಿಗಳನ್ನು ಭಾರತೀಯರಾದ ನಾವು ಒಗ್ಗಟ್ಟಾಗಿ ಹುಟ್ಟಡಗಿಸಲೇಬೇಕಾಗಿದೆ ಎಂದು ಹೇಳಿದರು.