ಆರೋಗ್ಯ ಇಲಾಖೆಉಡುಪಿಉದ್ಯೋಗ ವಾರ್ತೆಗಳುಉಪಯುಕ್ತ ಮಾಹಿತಿಗಳುಕನಕಗಿರಿಕುಕನೂರುಕುಷ್ಟಗಿಕೊಪ್ಪಳಗಂಗಾವತಿಗದಗಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುಧಾರವಾಡಬಿಸಿನೆಸ್ ಕನೆಕ್ಟ್ರಾಜ್ಯ ಸುದ್ದಿರಾಷ್ಟೀಯ ಸುದ್ದಿಲೇಖನವಿಡಿಯೋಗಳುಶಿವಮೊಗ್ಗಸಿಂಧನೂರುಸೋಶಿಯಲ್ ಮೀಡಿಯಾ ಅಪ್ಡೇಟ್ಸ್ಸ್ಥಳೀಯ ಸುದ್ದಿಗಳು

ಕೋಟೆನಾಡಿನಲ್ಲಿ ವಿಜೃಂಭಣೆಯಿಂದ ನಡೆದ ಚೌಡೇಶ್ವರಿ ದೇವಿಯ 43 ನೇ ವರ್ಷದ ಜ್ಯೋತಿ ಮಹೋತ್ಸವ

Share News

ಕೋಟೆನಾಡಿನಲ್ಲಿ ವಿಜೃಂಭಣೆಯಿಂದ ನಡೆದ ಚೌಡೇಶ್ವರಿ ದೇವಿಯ 43 ನೇ ವರ್ಷದ ಜ್ಯೋತಿ ಮಹೋತ್ಸವ

ಜನಧ್ವನಿ ಕನ್ನಡ:
ಗಜೇಂದ್ರಗಡ:

ಗದಗ ಜಿಲ್ಲೆಯ ಗಜೇಂದ್ರಗಡ ತಾಲೂಕಿನ ಗಜೇಂದ್ರಗಡ ನಗರದಲ್ಲಿನ ಕೆಳಗಲ ಪೇಟೆಯಲ್ಲಿನ ತೊಗಟವೀರ ಕ್ಷತ್ರಿಯ ಸಮಾಜದ ಶ್ರೀ ಚೌಡೇಶ್ವರಿ ದೇವಾಲಯದಲ್ಲಿ ಚೌಡೇಶ್ವರಿ ಜ್ಯೋತಿ ಉತ್ಸವವು ಗುರುವಾರ ಅಂತ್ಯಂತ ವಿಜೃಂಭಣೆಯಿಂದ ನಡೆಯಿತು.

ಪ್ರತಿವರ್ಷ ಸೀಗಿ ಹುಣ್ಣಿಮೆಯಂದು ನಡೆಯುವ ಈ ಉತ್ಸವ ದಿನಾಂಕ 16-10-2024 ರ ಮಧ್ಯರಾತ್ರಿ 2-30 ಕ್ಕೆ ಪಂಚ ಜ್ಯೋತಿಗಳ ಮೆರವಣಿಗೆ ಪ್ರಾರಂಭವಾಗಿ ಶಂಕಲಿಂಗ ದೇವಸ್ಥಾನ ಬಸವೇಶ್ವರ ವೃತ್ತ, ದುರ್ಗಾ ವೃತ್ತ, ಅಗಸಿಯ ಮಾರ್ಗ, ಭಜರಂಗದಳ ವೃತ್ತದಿಂದ ಕೊಳ್ಳಿಯರ ಕತ್ರಿ, ಶ್ರೀ ಜಗದಂಬಾ ದೇವಸ್ಥಾನದ ಮಾರ್ಗವಾಗಿ ಕೆಳಗಲ ಪೇಟೆಯ ಶ್ರೀ ಚೌಡೇಶ್ವರಿ ದೇವಾಲಯ ತಲುಪಿತು. ಮೆರವಣಿಗೆಯ ಉದ್ದಕ್ಕೂ ಆನಂದ ಗೀತೆಗಳು, ದೇವಿಯ ಆರಾಧನೆಯ ಗೀತೆಗಳೊಂದಿಗೆ ನೂರಾರು ಭಕ್ತರು ಮಡಿ ಪಂಚೆ ಧರಿಸಿ ತಲೆಯ ಮೇಲೆ ಜ್ಯೋತಿ ಹೊತ್ತ ಭಕ್ತರ ಕುಣಿತ ನೋಡುಗರ ಕಣ್ಮನ ಸೆಳೆಯಿತು. ಅನೇಕ ಮಹಿಳೆಯರು ಆರತಿ ಹಿಡಿದ್ದು ಮೆರವಣಿಗೆಯಲ್ಲಿ ಭಾಗಿಯಾಗಿದ್ದರು.

ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ಆಂದ್ರಪ್ರದೇಶದ ಹಾಗೂ ರಾಜ್ಯದ ಮಾನವಿ, ಇಲಕಲ್, ಗದಗ ಬೆಟಗೇರಿ, ಸುರಪೂರ ಹೀಗೆ ಬೇರೆ ಬೇರೆ ಊರುಗಳಿಂದ ಭಕ್ತರು ಆಗಮಿಸಿ ಚೌಡೇಶ್ವರಿ ದೇವಿಯ ಜ್ಯೋತಿ ಉತ್ಸವದಲ್ಲಿ ಭಾಗಿಯಾಗಿ ಅಮ್ಮನವರ ದರ್ಶನ ಪಡೆದು ಪುನೀತರಾದರು.

ದೇವಾಲಯದಲ್ಲಿ ಅಗ್ನಿ ಪ್ರವೇಶ:

ಚೌಡೇಶ್ವರಿ ಅಮ್ಮನವರ ಪಂಚ ಜ್ಯೋತಿಗಳು ನಗರದಲ್ಲಿ ಸಂಚರಿಸಿ ದೇವಾಲಯದ ಆವರಣದಲ್ಲಿ ಅಗ್ನಿ ಕುಂಡ ಹಾಯುವುದನ್ನು ನೋಡಲು ಭಕ್ತ ಸಾಗರವೇ ಹರಿದು ಬಂದಿದ್ದು ವಿಶೇಷ.
ಪಂಚ ಜ್ಯೋತಿಗಳು ದೇವಾಲಯದ ಪ್ರದಕ್ಷಿಣೆ ಬಳಿಕ ಅಗ್ನಿ ಕುಂಡ ಹಾಯ್ದು, ದೇವಿಗೆ ವಿಶೇಷ ಪೂಜೆ, ಮಹಾ ಮಂಳಾರತಿಯ ಬಳಿಕ ಕಾರ್ಯಕ್ರಮ ಸಮಾಪ್ತಿಯ ಹಂತ ತಲುಪಿತು.

ಕಾರ್ಯಕ್ರಮದಲ್ಲಿ ನಗರದ ತೋಗಟವೀರ ಕ್ಷತ್ರಿಯ ಸಮಾಜದ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು, ಚೌಡೇಶ್ವರಿ ದೇವಿಯ ಮಹಿಳಾ ಮಂಡಳದವರು, ಯುವಕ ಮಿತ್ರರು ಸೇರಿದಂತೆ ನೂರಾರು ಭಕ್ತ ವೃಂದದವರು ಪಾಲ್ಗೊಂಡಿದ್ದರು


Share News

Related Articles

Leave a Reply

Your email address will not be published. Required fields are marked *

Back to top button