
ತುಳಜಾಭವಾನಿ ಶಾಲೆಯಲ್ಲಿ ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮ.
ತುಳಜಾಭವಾನಿ ಶಾಲೆಯಲ್ಲಿ ಮಕ್ಕಳಿಗೆ ಅಕ್ಷರಭ್ಯಾಸ.
ಜನಧ್ವನಿ ಡಿಜಿಟಲ್ ಕನ್ನಡ ನ್ಯೂಸ್ :
ಗಜೇಂದ್ರಗಡ
:
ಗಜೇಂದ್ರಗಡ ನಗರದ ತುಳಜಾಭವಾನಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ನರ್ಸರಿ, ಎಲ್.ಕೆ.ಜಿ. ಯು.ಕೆ.ಜಿ ಮಕ್ಕಳಿಗೆ ಅಕ್ಷರಾಭ್ಯಾಸ ಕಾರ್ಯಕ್ರಮ ಗುರುವಾರ ನಡೆಯಿತು.
ಕಾರ್ಯಕ್ರಮವನ್ನು ಕಾಲಕಾಲೇಶ್ವರ ದೇವಾಲಯದ ಅರ್ಚಕರಾದ ಡಾ.ರಾಜಣ್ಣ ಗೂರೂಜಿ ಮಕ್ಕಳಿಗೆ ಅಕ್ಷರಾಭ್ಯಾಸದ ವಿಧಿವಿಧಾನವನ್ನು ನೆರವೆರಿಸಿಕೊಟ್ಟರು ಬಳಿಕ ಮಾತನಾಡಿ ಆದಿ ಅನಾಧಿಕಾಲದಿಂದಲೂ ಈ ಸಂಪ್ರದಾಯವೂ ನಡೆಯುತ್ತಾ ಬಂದಿದೆ.ಆದೆರೆ ಈ ಭಾಗದಲ್ಲಿ ಇಂತಹ ಕಾರ್ಯಕ್ರಮಗಳು ಬಳಹ ವಿರಳ ಅದಕ್ಕಾಗಿ ಈ ಶಾಲೆಯ ಕಾರ್ಯವೂ ನಿಜಕ್ಕೂ ಶ್ಲಾಘನೀಯ ಎಂದರು.
ಬಳಿಕ ಸಮಾಜ ಸೇವಕ ಶಶಿಧರ ಹೂಗಾರ ಮಾತನಾಡಿ ಬೆಳೆಯುವ ಸಿರಿ ಮೊಳಕೆಯಲ್ಲಿ ಕಾಣು ಎನ್ನುವಂತೆ ಮುದು ಮಕ್ಕಳು ತಮ್ಮ ಶೈಕ್ಷಣಿಕ ಜೀವನ ಪ್ರಾರಂಭದ ಮೊದಲು ಇಂತಹ ಧಾರ್ಮಿಕ ಕಾರ್ಯಗಳ ಮೂಲಕ ಮಾಡಿದಾಗ ಮಕ್ಕಳು ಉನ್ನತ ಸ್ಥಾನಕ್ಕೆ ಏರಲು ಇಂತಹ ಕಾರ್ಯಕ್ರಮಗಳು ಸಾಕ್ಷಿಯಾಗಿವೆ ಎಂದರು.
ಬಳಿಕ ಸಂಸ್ಥೆಯ ಸಂಸ್ಥಾಪಕರಾದ ಲಾಲಪ್ಪ ರಾಠೋಡ ಮಾತನಾಡಿ ಗ್ರಾಮೀಣ ಭಾಗದ ಮಕ್ಕಳಿಗೆ ಉತ್ತಮ ಜ್ಷಾನ ನೀಡುವ ಉದ್ದೇಶದಿಂದ ಸಂಸ್ಥೆಯನ್ನು ಪ್ರಾರಂಭಿಸಿದ್ದೇವು, ಆದರೆ ಇಲ್ಲಿನ ಎಲ್ಲಾ ಸಿಬ್ಬಂದಿಗಳ ಸಹಕಾರದಿಂದ ಇಂದು ಹೆಮ್ಮರವಾಗಿ ಬೆಳೆದಿದೆ, ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಇಂತಹ ಕಾರ್ಯಕ್ರಮಗಳು ಸಮಾಜಕ್ಕೆ ಮಾದರಿಯಾಗಿವೆ ಎಂದರು.
ಇನ್ನೂ ಕಾರ್ಯಕ್ರಮದಲ್ಲಿ ಸರ್ವೋದಯ ಮಹಿಳಾ ಕಾಲೇಜಿನ ಸಂಸ್ಥಾಪಕರಾದ ಲೋಕಪ್ಪ ರಾಠೋಡ,ಶಾಲೆಯ ಅಧ್ಯಕ್ಷರು ವೆಣ್ಣುಬಾಯಿ ರಾಠೋಡ, ಬಿ.ಎಮ್.ತುಗ್ಗಲದ್ದಿನಿ,ಮಹಾಂತೇಶ ಪೂಜಾರ, ವಾ.ಎಲ್, ನಧಾಫ್, ಮುಖ್ಯ ಶಿಕ್ಷಕರು ರೇಖಾ ಮಾನೆ, ಹಿರಿಯ ಶಿಕ್ಷಕಿ ಮಂಜುಳಾ ಭಜೇಂತ್ರಿ, ಸಾವಿತ್ರಿ ಹಿರೇಮನಿ, ಸುನೀತಾ ಹವಾಲ್ದಾರ, ಉಮಾ ಯಂಕಚಿ, ಸರಸ್ವತಿ ರಾಠೋಡ, ಸುಮಂಗಲಾ ಗೊರವವರ, ವಿಜಯಲಕ್ಷ್ಮಿ ತಾಸೀನ, ವಿದ್ಯಾ ದಾಸರ ಸೇರಿದಂತೆ ಅನೇಕರು ಇದ್ದರು.