ಪತ್ರಕರ್ತರ ಕಾರ್ಯ ಸವಾಲಿನದ್ದು : ಅಧ್ಯಕ್ಷರ ಅಭಿಮತ.
ಗಜೇಂದ್ರಗಡ:
ಪತ್ರಿಕೊದ್ಯಮದಲ್ಲಿ ಕಾರ್ಯ ನಿರ್ವಹಿಸುವ ಪತ್ರಕರ್ತರ ಜೀವನ ಸವಾಲಿನದ್ದು ಆಗಿರುತ್ತದೆ ಎಂದು Àದಗ ಜಿಲ್ಲಾ ಕಸಾಪ ಅಧ್ಯಕ್ಷ ವಿವೇಕಾನಂದಗೌಡ ಪಾಟೀಲ ಅಭಿಮತ ವ್ಯಕ್ತಪಡಿಸಿದರು.
ನಗರದ ವಾಣಿಪೇಟೆಯಲ್ಲಿನ ಗವಿಮಠದಲ್ಲಿ ಕಸಾಪ ವತಿಯಿಂದ ಪತ್ರಿಕಾ ದಿನಾಚರಣೆಯ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಭಾಗಿಯಾಘಿ ಮಾತನಾಡಿದರು.
ಪತ್ರಿಕೆಗಳು ಜನ ಪತ್ರಿಕೆಗಳು ಜನಸಾಮಾನ್ಯರ ವಿಶ್ವಾಸರ್ಹತೆಗಳನ್ನು ಹೊಂದಿವೆ.ಪತ್ರಿಕೆಯ ಬರವಣಿಗೆಯೂ ಕೂಡಾ ಒಂದು ಸಾಹಿತ್ಯದ ಭಾಗವಾಗಿದ್ದು ಇವುಗಳನ್ನು ಸಾಮಾನ್ಯ ಜನ ಇಷ್ಟ ಪಟ್ಟು ಓದುವ ಒಂದು ಪರಂಪರೆ ಇಂದಿನ ವರೆಗೂ ಮುಂದುವರೆದು ಬಂದಿದ್ದು ಪತ್ರಿಕಾ ವಿಶ್ವಾರ್ಹತೆಗೆ ಕೈಗನ್ನಡಿಯಾಗಿದೆ ಎಂದರು.
ಹಿರಿಯ ಸಾಹಿತಿ ಬಿ.ಎ.ಕೆಂಚರೆಡ್ಡಿ ಮಾತನಾಡಿ ಪತ್ರಿಕೆಗಳು ಈ ಹಿಂದೆ ಸಾಹಿತಿಕವಾಗಿ ಜನರ ಚಿಂತನೆ ಓರೆ ಹಚ್ಚುವ ಒಂದು ಮಾಧ್ಯಮವಾಗಿ ಇದ್ದವು, ಆದರೆ ಪ್ರಸ್ತುತ ವಿದ್ಯಮಾನಗಳನ್ನು ಗಮನಿಸಿದಾಗ ಪತ್ರಿಕೆಗಳು ಉಧ್ಯಮಗಳಾಗಿ ಮಾರ್ಪಾಟ್ಟಿವೆ ಎಂದರು.
ಬಳಿಕ ಕಸಾಪ ತಾಲೂಕಾ ಅಧ್ಯಕ್ಷ ಅಮರೇಶ ಗಾಣಗೇರ ಮಾತನಾಡಿ ಸಮಾಜದ ಅಂಕುಡೊAಕುಗಳನ್ನು ನಿಷ್ಪಕ್ಷಪಾತವಾಗಿ ಹಾಗೂ ಸಮಾಜಮುಖಿಯಾಗಿ ಮುದ್ರಣ, ಡಿಜಿಟಲ್ ಮಾಧ್ಯಮದ ಮೂಲಕ ತ್ವರಿತಗತಿಯಲ್ಲಿ ಜನರಿಗೆ ತಲುಪಿಸುತ್ತಿರುವ ಕಾರ್ಯ ಶ್ಲಾಘನೀಯ ಕಾರ್ಯ ಎಂದರು.
ಕಸಾಪ ವತಿಯಿಂದ ನಗರದಲ್ಲಿನ ಮುದ್ರಣ ಹಾಗೂ ದೃಶ್ಯ ಮಾಧ್ಯಮದ ಪತ್ರಕರ್ತರಿಗೆ ಸನ್ಮಾನಿಸಲಾಯಿತು. ಇನ್ನೂ ಇದೇ ಸಂದರ್ಭದಲ್ಲಿ ಹಿರಿಯ ರೇಖಾ ಚಿತ್ರ ಕಲಾವಿದ ಪುಂಡಲಿಕ ಕಲ್ಲಿಂಗನೂರ, ಹಿರಿಯ ಪತ್ರಕರ್ತರಾದ ರಾಘವೇಂದ್ರ ಕುಲಕರ್ಣಿ, ಡಿ.ಜಿ.ಮೋಮಿನ, ಶ್ರೀಶೈಲ ಕುಂಬಾರ, ಸೀತಲ ಓಲೇಕಾರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಡಾ.ಅರ್ಜುನ ಗೊಳಸಂಗಿ, ಶಿವಾನಂದ ಗಿಡ್ನಂದಿ, ಪತ್ರಕರ್ತ ಶಿವಕುಮಾರ ಶಶಿಮಠ, ಬಿ.ಟಿ.ಹೊಸಮನಿ, ಗ್ರಂಥಪಾಲಕ ಸುರೇಶ ಪತ್ತಾರ, ಅರಂವಿದ ಕವಡಿಮಟ್ಟಿ, ರಾಘವೇಂದ್ರ ಮ್ಯಾಕಲ್, ಎಸ್,ಎಸ್,ಡೊಳ್ಳಿನ, ಬಿ.ವ್ಹಿ.ಮನವಳ್ಳಿ,ಎಸ್,ಎಸ್, ನರೇಗಲ್,ನಾಗರಾಜ ಬುಟ್ಟಾ, ಶ್ರೀನಿವಾಸ ನಿಲ್ಲೂರ,ಗಣೇಶ ರಾಠೋಡ,ಚಂದ್ರು ರಾಠೋಡ,ಸಂಗಮೇಶ ಬಾಗೂರ,ಬಸವರಾಜ ಕೊಟಗಿ,ಡಾ.ಮಹಾಂತೇಶ ಅಂಗಡಿ,ಎಸ್,ಎನ್,ಬಡಿಗೇರ,ಲಲಿತಾ ಪವಾರ,ಲ್ಷಿö್ಮ ಶಾಬಾದಿ,ಆರ್.ಎಸ್.ಇಟಗಿ,ಶರಣಮ್ಮ ಅಂಗಡಿ,ನೇತ್ರಾವತಿ ಹೊಸಂಗಡಿ,ಭುವನೇಶ್ವರಿ ಅಂಗಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.