ಸ್ಥಳೀಯ ಸುದ್ದಿಗಳುಆರೋಗ್ಯ ಇಲಾಖೆಕುಕನೂರುಕುಷ್ಟಗಿಕೊಪ್ಪಳಗಂಗಾವತಿಗದಗಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುಧಾರವಾಡಬಿಸಿನೆಸ್ ಕನೆಕ್ಟ್ರಾಜ್ಯ ಸುದ್ದಿರಾಷ್ಟೀಯ ಸುದ್ದಿಲೇಖನವಿಡಿಯೋಗಳುಶಿವಮೊಗ್ಗಸಿಂಧನೂರುಸೋಶಿಯಲ್ ಮೀಡಿಯಾ ಅಪ್ಡೇಟ್ಸ್

ಪಿಯು ಹಂತದ ಮಕ್ಕಳು ಚಂಚಲತೆಯನ್ನು ತಡೆದು ಶಿಕ್ಷಣಕ್ಕೆ ಮಹತ್ವ ನೀಡಬೇಕು : ಮುಪ್ಪಿನ ಬಸವಲಿಂಗ ಶ್ರೀಗಳು ಸಲಹೆ.

Share News

ಪಿಯು ಹಂತದ ಮಕ್ಕಳು ಚಂಚಲತೆಯನ್ನು ತಡೆದು ಶಿಕ್ಷಣಕ್ಕೆ ಮಹತ್ವ ನೀಡಬೇಕು : ಮುಪ್ಪಿನ ಬಸವಲಿಂಗ ಶ್ರೀಗಳು ಸಲಹೆ.

ಗಜೇಂದ್ರಗಡ::

ಎಸ್.ಎಸ್.ಎಲ್.ಸಿ.ಯಲ್ಲಿ ತೇರ್ಗಡೆ ಹೊಂದಿದ ನಂತರ ವಿದ್ಯಾರ್ಥಿಗಳಲ್ಲಿ ತುಂಟತನ, ಹುಚ್ಚುಕೊಡಿಯ ವಯಸ್ಸು ಇದ್ದಾಗ ವಿದ್ಯಾರ್ಥಿಗಳು ಶೈಕ್ಷಣಿಕ ಹಂತದಲ್ಲಿನ ಜೀವನ ಸಾಧನೆಯ ಕನಸು ಕಾಣಬೇಕು ಬದಲಾಗಿ ಜೀವನ ಹಾಳು ಮಾಡುವ ಕನಸುಗಳು ಅಲ್ಲ ಎಂದು ನರೇಗಲ್ ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿಯ ಅಧ್ಯಕ್ಷರಾದ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ಹೇಳಿದರು.

 

ನಗರ ಸಮೀಪದ ಪುರ್ತಗೇರಿ ವೃತ್ತದ ಬಳಿಯ ಎಸ್.ಎ.ಪಿ.ಯು ಕಾಲೇಜಿನ ವಾಣಿಜ್ಯ, ವಿಜ್ಞಾನ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ನಡೆದ ಪ್ರಸಕ್ತ ಸಾಲಿನ ವಿವಿಧ ಸಾಂಘಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರಥಮ ವರ್ಷದ ಪಿಯುಸಿ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದ ಸಾನಿಧ್ಯ ವಹಿಸಿ ಆರ್ಶಿವಚನ ನೀಡಿದರು.

ವಿದ್ಯಾರ್ಥಿ ದೆಸೆಯಲ್ಲಿನ ಮಕ್ಕಳು ಸಾಧನೆ ಮಾಡಿದವರ ಕಥೆಗಳನ್ನು ಕೇಳಬೇಕು ಹಾಗೂ ಅಂತಹ ಕನಸುಗಳನ್ನು ಕಾಣಬೇಕೇ ವಿನಃ ಸೋತವರ, ಜೀವನದ ಮೋಜು ಮಸ್ತಿಗಳ ಕನಸು ಅಲ್ಲ, ವಿಧ್ಯಾರ್ಥಿಗಳು ಸಂಸ್ಕಾರ ಅತ್ಯವಶ್ಯಕವಾಗಿ ಕಲಿಯಬೇಕಾಗಿದೆ, ನಡೆ, ನುಡಿಯಿಂದ ಕೂಡಿದ ಕನಸುಗಳನ್ನು ಸಾಕಾರಗೊಳಿಸಬೇಕಿರುವುದು ಅತಿಅವಶ್ಯವಾಗಿದೆ. ಗ್ರಾಮೀಣ ಭಾಗದಲ್ಲಿನ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡಲು ಹಾಲಕೇರಿಯ ಶ್ರೀಗಳು ೧೯೧೯ ರಲ್ಲಿಯೇ ಶೈಕ್ಷಣಿಕ ಕ್ರಾಂತಿಯನ್ನು ಹುಟ್ಟುಹಾಕಿದ್ದು ಪ್ರಸ್ತುತ ದೊಡ್ಡ ದೈತ್ಯ ಹೆಮ್ಮರವಾಗಿದೆ. ಇದು ಜಿಲ್ಲೆಯಲ್ಲಿಯೇ ಅತ್ಯುತ್ತಮ ಕಾಲೇಜು ಆಗಿ ಹೊರ ಹೊಮ್ಮುವ ಮೂಲಕ ಮಠದ ಹಿರಿಯ ಗುರುಗಳಿಗೆ ಹರಿದು ಬರುತ್ತಿದ್ದ ದಾನದಲಿ ಉಚಿತವಾಗಿ ಶಿಕ್ಷಣ ನೀಡಲಾಗಿತ್ತು, ಆದರೆ ಕಾಲ ಬದಲಾದಂತೆ ಕಾಲಕ್ಕೆ ತಕ್ಕಂತೆ ಕಡಿಮೆ ಫೀ ದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡಿ ಶಿಕ್ಷಕರ ಗೌರವ ಧನ (ಪಗಾರ)ನೀಡಲಾಗುತ್ತಿದೆ ಎಂದರು

ಕಾರ್ಯಕ್ರಮವನ್ನು ಗದಗ ಜಿಲ್ಲಾ ಶಾಲಾ ಶಿಕ್ಷಣ ಇಲಾಖೆಯ (ಪಿಯು) ಉಪನಿರ್ದೇಶಕ ಜಿ.ಎನ್.ಕುರ್ತಕೋಟಿ ಉದ್ಘಾಟಿಸಿ ಮಾತನಾಡಿದರು ಗದಗ ಜಿಲ್ಲೆಯಲ್ಲಿ ನೆರಗಲ್ ಹಾಗೂ ಗಜೇಂದ್ರಗಡ ಶ್ರೀ ಅನ್ನದಾನೇಶ್ವರ ಪಿಯು ಕಾಲೇಜಿನವರು ಉತ್ತಮ ಫಲಿತಾಂಶ ನೀಡುವ ಮೂಲಕ ಗದಗ ಜಿಲ್ಲೆಯ ಹಿರಿಮೆಯನ್ನು ಹೆಚ್ಚಿಸಿದ್ದಾರೆ ವಿದ್ಯಾರ್ಥಿಗಳು ತಮ್ಮ ತಂದೆ ತಾಯಿಗಳ ಜಿಲ್ಲೆಯ ಊರಿನ ಹಾಗೂ ಶೈಕ್ಷಣಿಕ ವ್ಯಾಸಂಗ ಮಾಡಿದ ಸಂಸ್ಥೆಯ ಹೆಸರನ್ನು ಉತ್ತುಂಗಕ್ಕೆ ಒಯ್ಯಬೇಕು ಎಂದು ಸಲಹೆ ನೀಡಿದರು.

ಪ್ರಾಸ್ತಾವಿಕವಾಗಿ ಎಸ್.ಎ.ಪಿ.ಯು.ಕಾಲೇಜಿನ ಪ್ರಾಚಾರ್ಯ ವಸಂತರಾವ ಗಾರಗಿ ಮಾತನಾಡಿ

ಎಸ್‌.ಎಸ್‌.ಎಲ್.ಸಿ ಪೂರೈಸಿದ ವಿಧ್ಯಾರ್ಥಿಗಳು ಪ್ರಸ್ತುತ ವರ್ಷದಲ್ಲಿ ಪ್ರಥಮ ಪಿಯುಸಿಗೆ ೩೧೪ ವಿಧ್ಯಾರ್ಥಿಗಳು ಪ್ರವೇಶಗಳನ್ನು ಪಡೆದಿದ್ದಾರೆ. ಕಳೆದ ವರ್ಷದಲ್ಲಿ ಫಲಿಂತಾಶದಲ್ಲಿ ತಾಲೂಕಿಗೆ ಪ್ರಥಮ ಸ್ಥಾನದಲ್ಲಿದೆ. ಶ್ರೀಗಳು ವಿಧ್ಯಾಭ್ಯಾಸಕ್ಕೆ ಹೆಚ್ಚಿನ ಕಾಳಜಿಯನ್ನು ತೋರುತ್ತಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ನಮ್ಮ ಕಾಲೇಜಿನ ವಿಧ್ಯಾರ್ಥಿಗಳು ಪ್ರತಿಭೆಯನ್ನು ಹೊರ ತರಲು ಅವಿರತ ಶ್ರಮಪಡಲು ಕಾಲೇಜು ಶ್ರಮಿಸುತ್ತಿದೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿ.ವಿ. ವಸ್ರ್ತದ ವಹಿಸಿದರು.ಇದೇ ವೇಳೆ ಮಂಜುನಾಥ ಮೆಲ್ಮನಿ ಅಗ್ನಿ ಸ್ಪರ್ಶದ ಪೂರ್ವ ಮತ್ತು ನಂತರದ ಸೂಕ್ತಕ್ರಮಗಳು ಬಗ್ಗೆ ವಿಶೇಷ ಉಪನ್ಯಾಸ ನೀಡಿದರು.ಕಾಲೇಜಿನಲ್ಲಿ ಅಳವಡಿಸಲಾದ ಅಗ್ನಿ ನಂದಿಸುವ ಉಪಕರಣದ ಉದ್ಘಾಟನೆಯನ್ನು ಹಾಗೂ ರೋಣ ಅಗ್ನಿ ಶಾಮಕ ದಳದ ಸಿಬ್ಬಂದಿಯವರಿಂದ ಅಗ್ನಿಸ್ಪರ್ಶದ ಪೂರ್ವ ಹಾಗೂ ನಂತರದ‌ ಕ್ರಮಗಳ ಕುರಿತು ಪ್ರಾತ್ಯಕ್ಷಿಕೆ ನಡೆಯಿತು.

ಕಳೆದ ಬಾರಿ ದ್ವಿತೀಯ ಪಿಯು ಫಲಿತಾಂಶದಲ್ಲಿ ಸಾಧನೆ ಮಾಡಿದ ವಿಧ್ಯಾರ್ಥಿಗಳನ್ನು, ಶೇ.೧೦೦% ಫಲಿತಾಂಶ ನೀಡಿದ ಉಪನ್ಯಾಸಕರಾದ ಚಂದ್ರು ರಾಠೋಡ, ಸಂಗೀತಾ ನಾಲತವಾಡ, ಪ್ರೀತಿ ಹೊಂಬಾಳೆ ರಿಗೆ ಸನ್ಮಾನ‌ ನಡೆಸಲಾಯಿತು.

ಕಾರ್ಯಕ್ರಮದಲ್ಲಿ ಎನ್.ಆರ್. ಗೌಡರ, ಎಸ್.ಎಸ್.ಪಟ್ಟೇದ, ಸದಾಶಿವ ಕರಡಿ, ಶಿವಾನಂದ ಮಠದ, ಎಂ.ಪಿ.ಪಾಟೀಲ, ಪಿ.ಎನ್.ಚವಡಿ, ಬಿ.ಎಸ್.ಹಿರೇಮಠ, ಮಂಜುನಾಥ ಕಾಡದ, ವಸಂತರಾವ ಗಾರಗಿ, ವಿ.ವಿ.ಸೂಡಿ, ಲೊಕಪ್ಪಜ್ಜ ಮೆಣಸಗಿ, ಚಂದ್ರು ರಾಠೋಡ ಸೇರಿದಂತೆ ಕಾಲೇಜಿನ ಸಿಬ್ಬಂದಿಗಳು ಹಾಗೂ ವಿಧ್ಯಾರ್ಥಿಗಳು ಇದ್ದರು.


Share News

Related Articles

Leave a Reply

Your email address will not be published. Required fields are marked *

Back to top button