ಕುಡಿತ ಬೇಡ ಎಂದು ಹೇಳಿದಕ್ಕೆ ತಾಯಿಯನ್ನೇ ಕೊಂದ ಪಾಪಿ.
ಶಿವದಾರದಿಂದ ಉಸಿರುಗಟ್ಟಿಸಿ ಹೆತ್ತ ತಾಯಿಯನ್ನು ಕೊಂದ ಪಾಪಿ ಮಗ.
ಕುಡಿತ ಬೇಡ ಎಂದು ಹೇಳಿದಕ್ಕೆ ತಾಯಿಯನ್ನೇ ಕೊಂದ ಪಾಪಿ.
ಬುದ್ಧಿ ಹೇಳಿದ್ದಕ್ಕೆ ತಾಯಿಯನ್ನೇ ಕೊಂದ ಮಗ
ಗದಗ:
‘ಕುಡಿದು ಗಲಾಟೆ ಮಾಡಬೇಡ’ ಎಂದು ಬುದ್ಧಿವಾದ ಹೇಳಿದ್ದಕ್ಕೆ ಮಗ ತಾಯಿಯನ್ನೇ ಕೊಂದ ಘಟನೆ ನಗರದ ದಾಸರ ಓಣಿಯಲ್ಲಿ ನಡೆದಿದೆ.
ಶಾರದಮ್ಮ ಕೊಟ್ರೇಶ ಅಂಗಡಿ (85) ಕೊಲೆಯಾದವರು.
ಸಿದ್ಧಲಿಂಗಪ್ಪ ಕೊಟ್ರೇಶ ಅಂಗಡಿ (49) ಕೊಲೆ ಆರೋಪಿ.
ಆರೋಪಿ ಸಿದ್ಧಲಿಂಗಪ್ಪ ಮಂಗಳವಾರ ರಾತ್ರಿ ಕುಡಿದು ಓಣಿಯ ಜನರ ಜತೆಗೆ ಜಗಳವಾಡಿಕೊಂಡಿದ್ದ. ಈ ವೇಳೆ ತಾಯಿ ಶಾರದಮ್ಮ ಅವರು ಮಗನ ತಲೆ ಸರಿ ಇಲ್ಲ ಬಿಟ್ಟುಬಿಡಿ ಎಂದು ಜನರಲ್ಲಿ ಬೇಡಿಕೊಂಡಿದ್ದರು. ಇದರಿಂದ ಕುದ್ದು ಹೋಗಿದ್ದ ಸಿದ್ಧಲಿಂಗಪ್ಪ ಮನೆಗೆ ಹೋಗಿ ತಾಯಿಯ ಜತೆಗೆ ಜಗಳವಾಡಿದ್ದ. ರಾತ್ರಿ ಮಲಗಿದ್ದ ವೇಳೆ ಶಿವದಾರದಿಂದ ಉಸಿರುಗಟ್ಟಿಸಿ, ನಂತರ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ, ಡಿವೈಎಸ್‌ಪಿ ಇನಾಮ್‌ದಾರ ಬುಧವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದರು. ಗದಗ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.