ರೋಣ ಕ್ಷೇತ್ರ ಜನ ತಲೆ ತಗ್ಗಿಸುವಂತೆ ಮಾಡಿದ ಮಾಜಿ ಶಾಸಕರ ನಡೆ
ರೋಣ ಕ್ಷೇತ್ರ ಜನ ತಲೆ ತಗ್ಗಿಸುವಂತೆ ಮಾಡಿದ ಮಾಜಿ ಶಾಸಕರ ನಡೆ
ತಹಶಿಲ್ದಾರರ ರು ಮಾಜಿ
ಶಾಸಕ ಕಳಕಪ್ಪ ಬಂಡಿ ಅವರ ಮನೆಯ ಆಳಲ್ಲ. ಗೌರವಾನ್ವಿತ ದಂಡಧಿಕಾರಿಗಳಿಗೆ ಘನತೆ, ಗೌರವ ಇರುತ್ತದೆ. ಜನರ ಎದರು ಬಾಯಿಗೆ ಬಂದತೆ ಬೈದರೆ ದೊಡ್ಡತನ ಎಂದು ಅರಿತಿರುವದು ಮೂರ್ಖತನ ಪರಮಾವಧಿ. ತಮ್ಮ ಅಧಿಕಾರ ಅವಧಿಯಲ್ಲಿ ಆಡಳಿತ ವ್ಯವಸ್ಥೆ ದುರ್ಬಳಿಕೆ ಮಾಡಿ ಕೊಂಡಿರುವದು ಸಾಕಷ್ಟು ಧಾಖಲೆಗಳಿವೆ. ಶೀಘ್ರ ದಲ್ಲಿ ಒಂದೊಂದಾಗಿ ಬಿಡುಗಡೆ ಖಚಿತ.
ಸಿದ್ದಪ್ಪ ಬಂಡಿ. ಕಾಂಗ್ರೆಸ್ ಮುಖಂಡ.
…………………..
ರೋಣ ಕ್ಷೇತ್ರ ಜನ ತಲೆ ತಗ್ಗಿಸುವಂತೆ ಮಾಡಿದ ಮಾಜಿ ಶಾಸಕರ ನಡೆ
ಗಜೇಂದ್ರಗಡ ಜನಧ್ವನಿ ಕನ್ನಡ ::
ತಹಶಿಲ್ದಾರರ ಜತೆ ಅಸಭ್ಯವರ್ತನೆ, ಅಸಂವಿಧಾನಿಕ ಹೇಳಿಕ ನೀಡುವ ಮೂಲಕ ಅಶಾಂತಿ ವಾತಾವರಣ ನಿರ್ಮಿಸಲು ಯತ್ನಿಸುತ್ತಿರುವ ಮಾಜಿ ಶಾಸಕ ಕಳಕಪ್ಪ ಬಂಡಿ ಬೇಷರತ್ತ ಕ್ಷಮೆಯಾಚಿಸಬೇಕಿದೆ. ಡಿಸಿ, ಎಸ್ಪಿ ಅವರು ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗಬೇಕು ಎಂದು ಕಾಂಗ್ರೆಸ್ ಆಗ್ರಹಿಸಿತು.
.
ಗುರುವಾರ ಪ್ರವಾಸಿ ಮಂದಿರದಲ್ಲಿ ಸುದ್ದಿಗೊಷ್ಠಿಯಲ್ಲಿ ಕಾಂಗ್ರೆಸ್ ಮುಖಡರಾದ ಸಿದ್ದಪ್ಪ ಬಂಡಿ, ಪುರಸಭೆ ಸದಸ್ಯ ರಾಜು ಸಾಂಗ್ಲಿಕರ್, ವಿಪಕ್ಷ ನಾಯಕ ಮುರ್ತುಜಾ ಡಾಲಾಯತ್ ಮಾತನಾಡಿ, ತಹಶಿಲ್ದಾರರ ಅವಮಾನಿಸಿದ ಘಟನೆ ಖಂಡಿಸಿ ಜಿಲ್ಲೇಯ ಎಲ್ಲ ಇಲಾಖೆ ನೌಕರರು ಸ್ವಯಂ ಪ್ರತಿ ಭಟನೆ ನಡೆಸಿದರೆ ಅದನ್ನು ಕಾಂಗ್ರೆಸ್ ಮಾಡಿಸಿದೆ ಎಂದು ಆರೋಪಿಸಿರುವ ಮಾಜಿ ಶಾಸಕರು, ರೋಣ ಕ್ಷೇತ್ರ ಜನ ತಲೆ ತಗ್ಗಿಸುವಂತೆ ಪದೇ ಪದೇ ದುಕೃತ್ಯದಲ್ಲಿ ತೊಡಗಿದ್ದಾರೆ. ಜನರ, ಕ್ಷೇತ್ರ ಪ್ರಗತಿ ಕುರಿತು ಮಾತನಾಡದ ಮಾಜಿ ಶಾಸಕರು ಜನರ ಮಾನ ಹರಾಜು ಹಾಕಿರುವ ಬಗೆಗೆ ಪುರಾವೆಗಳಿವೆ ಎಂದು ಆಕ್ರೊಶ ವ್ಯಕ್ತ ಪಡಿಸದರು.
ದರ್ಪ, ದಬ್ಬಳಿಕೆ ಮೂಲಕ ಅಕಾರಿಗಳಿಗೆ ಬಾಯಿಗೆ ಬಂದತೆ ಬೈದು, ಹೆದರಿಸಿ, ಬೆದರಿಸಿ ತೇಜೊವಧೆ ಮಾಡಿರುವ ಮಾಜಿ ಶಾಸಕರು ತಮ್ಮ ಅಧಿಕಾರ ಅವಧಿಯಲ್ಲಿ ಇವರ ಕಿರಕುಳಕ್ಕೆ ಬೇಸತ್ತ ನೌಕರಿ ಮಾಡಲು ಇಲ್ಲಿಗೆ ಬರುತ್ತಿದ್ದಿಲ್ಲ. ಈಗ ಅದೇ ದುರ್ನಡತೆ ಮಾಜಿ ಶಾಸಕರು ಮುಂದು ವರೆಸಿದ್ದಾರೆ. ಇದನ್ನು ಜನ ಸಹಿಸುವದಿಲ್ಲಾ. ಅವರನ್ನು ರಸ್ತೆಯಲ್ಲಿ ನಿಲ್ಲಿಸಿ ಪ್ರಶ್ನೇಸುವ ಕಾಲ ದೂರವಿಲ್ಲಾ ಎಂದರು.
ಎಪಿಎಮ್‌ಸಿ ಎದುರಿನ ಜಾಗದಲ್ಲಿ ತಮ್ಮ ಮಗನ ವಿವಾಹಕ್ಕಾಗಿ ಪುರಸಭೆ ಹನ್ನೊಂದು ಲಕ್ಷ ಹಣ ದುರ್ಬಳಿಕೆ ಮಾಡಿರುವ ಮಾಜಿ ಸಚಿವರು, ಪೌರ ನೌಕಕರ ಮೇಲೆ ದಬ್ಬಾಳಿಕೆ ಮಾಡಿದ್ದಾರೆ. ತಹಸೀಲ್ದಾರ ಮರ್ಯಾದೆ ತೆಗೆಯುವದು ಮಾಜಿ ಶಾಸಕರಿಗೆ ಹೆಮ್ಮೆಯ ವಿಷಯ.
ಪಕ್ಷಾತಿತ ಪ್ರತಿಭಟನೆ ಎಚ್ಚರಿಕೆ
ಅಧಿಕಾರಿಗಳಿಗೆ ತೊಂದರೆ ಕೊಟ್ಟಿರುವ ಮಾಜಿ ಶಾಸಕ ಕಳಕಪ್ಪ ಬಂಡಿ ಬೇಷರತ್ತ ಕ್ಷಮೆಯಾಚಿಸದಿದ್ದರೆ ಗಜೇಂದ್ರಗಡ, ಸುತ್ತಲಿನ ಗ್ರಾಮಗಳ ಸಂಘ, ಸಂಸ್ಥೆಗಳು, ಕನ್ನಡ ಪರ ಹೋರಾಟಗಾರರು ಒಗ್ಗೂಡಿ ಪ್ರತಿಭಟನೆ ನಡೆಸಲಿದ್ದೆವೆ ಎಂದು ಎಚ್ಚರಿಸಿದರು.
ಪುರಸಭೆ ಅಧ್ಯಕ್ಷ ಸುಭಾಸ ಮ್ಯಾಗೇರಿ, ಸ್ಥಾಯಿ ಸಮಿತಿ ಚೆರಮನ್ ಮುದಿಯಪ್ಪ ಮುಧೊಳ, ಬಸವರಾಜ ಶೀಲವಂತರ್, ವೆಂಕಟೇಶ ಮುದ್ಗಲ್, ಬಸ ವರಾಜ ಹೂಗಾರ, ಉಮೇಶ ರಾಟೋಡ, ರಾಮಚಂದ್ರ ಹುದ್ದಾರ, ನ್ಯಾಯವಾದಿ ರಫಿಕ್ ತೊರಗಲ್, ಶರಣಪ್ಪ ಉಪ್ಪಿನಬೆಟಗೇರಿ,ಸಿದ್ದಪ್ಪ ಚೊಳಿನ, ಶರಣಪ್ಪ ಮಾಳಗಿ, ಸಿದ್ದು ಗೊಂಗಡಶೆಟ್ಟಮಠ, ಬಸವರಾಜ ಮಾಳೋತ್ತರ, ರಾಜೂರ ಸುರೇಶಗೌಡ ಪಾಟೀಲ, ರಾಜು ಹಿರೇಮಠ, ಬಸವರಾಜ ಹೂಗಾರ ಇನ್ನಿತರು ಇದ್ದರು.
***”