ಗದಗತಾಲೂಕುಧಾರವಾಡಬಿಸಿನೆಸ್ ಕನೆಕ್ಟ್ರಾಜ್ಯ ಸುದ್ದಿರಾಷ್ಟೀಯ ಸುದ್ದಿಲೇಖನವಿಡಿಯೋಗಳುಶಿವಮೊಗ್ಗಸಿಂಧನೂರುಸೋಶಿಯಲ್ ಮೀಡಿಯಾ ಅಪ್ಡೇಟ್ಸ್ಸ್ಥಳೀಯ ಸುದ್ದಿಗಳು

ಶಾಲಾ ಕೊಠಡಿ ನಿರ್ಮಾಣಕ್ಕೆ ಶಾಸಕರಿಂದ ಭೂಮಿ ಪೂಜೆ.

Share News

ಶಾಲಾ ಕೊಠಡಿ ನಿರ್ಮಾಣಕ್ಕೆ ಶಾಸಕರಿಂದ ಭೂಮಿ ಪೂಜೆ.

ಜನಧ್ವನಿ ಕನ್ನಡ ಸುದ್ದಿಮೂಲ

ಗಜೇಂದ್ರಗಡ:

ಇಂದಿನ ಕಾಲದಲ್ಲಿ ಖಾಸಗಿ ಶಾಲೆಗಳಿಗೆ ಶೆಡ್ಡು ಹೊಡೆಯುವಂತಹ ಸವಾಲು ಸರ್ಕಾರ ಮುಂದಿದ್ದು, ಖಾಸಗಿ ಶಾಲೆಗಳಿಗಿಂತ ಸರ್ಕಾರ ಶಾಲೆಯ ಮಕ್ಕಳ ಸರ್ವಾಂಗಿಣ
ಅಭಿವೃದ್ಧಿಗಾಗಿ ಮಕ್ಕಳ ಗುಣ ಮಟ್ಟದ ಶಿಕ್ಷಣಕ್ಕೆ ನಾವೆಲ್ಲರೂ ಹೆಚ್ಚಿನ ಆದ್ಯತೆ ನೀಡಬೇಕು ಅದಕ್ಕೆ ಬೇಕಾಗುವ ಉತ್ತಮ ಸೌಲಭ್ಯಗಳನ್ನು ಒದಗಿಸುವಲ್ಲಿ ನಾವೆಲ್ಲರೂ ಸೇರಿ ಪ್ರಯತ್ನಿಸಿ ಸರ್ಕಾರದ ವಿಶೇಷ ಅನುದಾನ ತಂದು ಗುಣಮಟ್ಟದ ಶಿಕ್ಷಣದ ಜೊತೆಗೆ ಉತ್ತಮ ಗುಣಮಟ್ಟದ ಕೊಠಡಿಗಳಲ್ಲಿ ಮಕ್ಕಳು ಓದುವಂತಾಗಬೇಕು ಎಂದು ಶಾಸಕ ಜಿ ಎಸ್ ಪಾಟೀಲ್ ಹೇಳಿದರು.

ಗಜೇಂದ್ರಗಡ ತಾಲ್ಲೂಕಿನ ಸೂಡಿ ಗ್ರಾಮದ ‘ಕಸ್ತೂರಬಾ ಗಾಂಧಿ ಬಾಲಿಕಾ ಸನಿವಾಸ’ ವಿದ್ಯಾಲಯ ಶಾಲೆಯ ಆವರಣದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಒಂದು ಕೋಟಿ ಎಂಟು ಲಕ್ಷ ವೆಚ್ಚದ ನೂತನ ಶಾಲಾ ಕೊಠಡಿ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಗ್ರಾಮೀಣ ಪ್ರದೇಶದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವಲ್ಲಿ ಶಿಕ್ಷಕರು ಶ್ರಮಿಸಬೇಕು. ಸಮಾಜದಲ್ಲಿ ಶಿಕ್ಷಕರ ಮೇಲೆ ದೊಡ್ಡ ಜವಾಬ್ದಾರಿ ಇದೆ. ದೇಶದ ಏಳಿಗೆಗಾಗಿ ಶಿಕ್ಷಕರು ಮಕ್ಕಳಲ್ಲಿ ಶಿಸ್ತು ಬೆಳಸಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಡಿಡಿಪಿಐ. ಆರ್.ಎಸ್ ಬುರಡಿ
ಬಿಇಓ ಆರ್.ಎನ್.ಹುರಳಿ, ತಾಂಪಂ ಇಓ ಬಸವರಾಜ ಬಡಿಗೇರ, ಪ್ರಬಾರಿ ಸಿ.ಆರ್‌.ಪಿ. ಪ್ರಕಾಶ ಅಂಬೋರೆ,
ಖಾದರಬಿ ಯಮನೂರಸಾಬ ಮುಜಾವರ,
ವೀರಣ್ಣ ಶೆಟ್ಟರ, ವಿ.ಬಿ.ಸೊಮನಕಟ್ಟಿಮಠ, ಮಂಜುಳಾ ರೇವಡಿ, ಶರೀಫ್ ಡಾಲಾಯತ, ಶಿವಕುಮಾರ ಪಟ್ಟಣಶೆಟ್ಟರ, ಹುಸೇನಸಾಬ ಬೆಳ್ಳಟ್ಟಿ, ಮಲ್ಲಯ್ಯ ಮಲ್ಲಕಸಮುದ್ರಮಠ, ರಾಘವೇಂದ್ರ ಕುಲಕರ್ಣಿ, ಅಬ್ದುಲಸಾಬ ಇಟಗಿ, ಶ್ರೀಕಾಂತ ಬಾರಕೇರ, ಬಸವರಾಜ ಶಿರೋಳ,ನುರೊಂದಪ್ಪ ಕೊಳ್ಳೂರ, ಶಂಕರಯ್ಯ ಮಠದ, ವೀರಣ್ಣ ಪಟ್ಟಶೆಟ್ಟರ, ನಿಂಗಪ್ಪ ಕಾಂಶಪ್ಪನವರ, ಬಿರಾದಾರ, ಅನೇಕರು ಇದ್ದರು.

ವರದಿ: ಕಿರಣ ನಿಡಗುಂದಿ.


Share News

Related Articles

Leave a Reply

Your email address will not be published. Required fields are marked *

Back to top button