ಭುವನೇಶ್ವರಿ ಜ್ಯೋತಿಯಾತ್ರೆಯ ಮೂಲಕ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ
ನಗರದ ರೋಣ ರಸ್ತೆಯಲ್ಲಿರುವ ಎಪಿಎಂಸಿ ಗಣಪತಿ ದೇವಸ್ಥಾನದಿಂದ ಪ್ರಾರಂಭಗೊಂಡ ಭುವನೇಶ್ವರಿ ತಾಯಿಯ ಜ್ಯೋತಿ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡುತ್ತ. ಜನೇವರಿ 19, 20 ಮತ್ತು 21ರಂದು. ಮೂರು ದಿನಗಳ ಕಾಲ ನಡೆಯುವ ಗದಗ ಜಿಲ್ಲಾ 10 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇಂದು ಅಧಿಕೃತ ಚಾಲನೆ ನೀಡಲಾಗಿದೆ.
Janadhwani News Gajendrgad:ಗಜೇಂದ್ರಗಡ : ಈ ಭಾಗದ ಕನ್ನಡ ಮನಸುಗಳ ಅಭಿಪ್ರಾಯದ ಮೇರೆಗೆ. ಕೋಟೆನಾಡು ಗಜೇಂದ್ರಗಡದಲ್ಲಿ ಗದಗ ಜಿಲ್ಲಾಮಟ್ಟದ 10ನೇ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ. ಕನ್ನಡ ಸಾಹಿತ್ಯ ಪರಿಷತ ಜಿಲ್ಲಾ ಘಟಕ ಮತ್ತು ಜಿಲ್ಲಾಡಳಿತ ಸೇರಿದಂತೆ ಸ್ಥಳೀಯ ಆಡಳಿತ ವರ್ಗ ಸಹಕಾರದಲ್ಲಿ ಬಹಳಷ್ಟು ಅಚ್ಚುಕಟ್ಟಾಗಿ ಸಮ್ಮೇಳನ ನಡೆಸಲು ಸಿದ್ಧತೆ ಕೈಗೊಳ್ಳಲಾಗಿದೆ ಎಂದು ರೋಣ ಮತಕ್ಷೇತ್ರದ ಶಾಸಕ ಜಿ.ಎಸ್.ಪಾಟೀಲ್ ಎಂದು ಹೇಳಿದ್ರು.
ಅವರು ನಗರದ ರೋಣ ರಸ್ತೆಯಲ್ಲಿರುವ ಎಪಿಎಂಸಿ ಗಣಪತಿ ದೇವಸ್ಥಾನದಿಂದ ಪ್ರಾರಂಭಗೊಂಡ ಭುವನೇಶ್ವರಿ ತಾಯಿಯ ಜ್ಯೋತಿ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡುತ್ತ. ಜನೇವರಿ 19, 20 ಮತ್ತು 21ರಂದು. ಮೂರು ದಿನಗಳ ಕಾಲ ನಡೆಯುವ ಗದಗ ಜಿಲ್ಲಾ 10 ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇಂದು ಅಧಿಕೃತ ಚಾಲನೆ ನೀಡಲಾಗಿದೆ. ಸಮ್ಮೇಳನ ಯಶಸ್ವಿಗೆ ಎಲ್ಲರ ಸಹಕಾರ ಅಗತ್ಯ ಎಂದರು.
ಈ ಸಂದರ್ಭದಲ್ಲಿ ಕಸಾಪ ಜಿಲ್ಲಾಧ್ಯಕ್ಷ ವಿವೇಕಾನಂದಗೌಡ ಪಾಟೀಲ್, ಗಜೇಂದ್ರಗಡ ತಾಲೂಕಾಧ್ಯಕ್ಷ ಅಮರೇಶ ಗಾಣಿಗೇರ,ರೋಣ ತಾಲೂಕಾಧ್ಯಕ್ಷ ರಮಾಕಾಂತ ಕಮತಗಿ, ಸಿದ್ದಣ್ಣ ಬಂಡಿ, ಪುರಸಭೆ ಅಧ್ಯಕ್ಷ ಸುಭಾಸ್ ಮ್ಯಾಗೇರಿ, ಶ್ರೀಧರ ಬಿದರಳ್ಳಿ, ಸ್ಥಾಯಿ ಕಮೀಟಿ ಚೆರ್ಮನ್ ಮುದಿಯಪ್ಪ ಮುಧೋಳ್, ಎಚ್. ಎಸ್. ಸೋಂಪುರ,ಶ್ರೀಮತಿ ಮಂಜುಳಾ ರೇವಡಿ, ಶ್ರೀಮತಿ ಕಸ್ತೂರಮ್ಮ ಹಿರೇಮಠ,ಶ್ರೀಮತಿ ಬಿ.ಟಿ. ಹೊಸಮನಿ,ಪ್ರಬಣ್ಣ ಚವಡಿ, ಸುಭಾನಸಾಬ್ ಆರಗಿದ್ದಿ, ವೀರಣ್ಣ ಶಟ್ಟರ, ಗಣೇಶ ಗುಗುಲೋತ್ತರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.