ಕುಷ್ಟಗಿಆರೋಗ್ಯ ಇಲಾಖೆಗದಗಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುಧಾರವಾಡಬಿಸಿನೆಸ್ ಕನೆಕ್ಟ್ರಾಜ್ಯ ಸುದ್ದಿರಾಷ್ಟೀಯ ಸುದ್ದಿಲೇಖನವಿಡಿಯೋಗಳುಶಿವಮೊಗ್ಗಸಿಂಧನೂರುಸೋಶಿಯಲ್ ಮೀಡಿಯಾ ಅಪ್ಡೇಟ್ಸ್ಸ್ಥಳೀಯ ಸುದ್ದಿಗಳು

ಕೋಟೆನಾಡಿನಲ್ಲಿನ ದಂಪತಿಗಳಿAದ ಮಾದರಿ ವಾರ್ಷಿಕೋತ್ಸವ ಆಚರಣೆ.

Share News

ಜೋಪಡಿಯ ಮಕ್ಕಳಿಗೆ ಪುಸ್ತಕ ನೀಡಿ ಸಾರ್ಥಕತೆ ಮರೆದ ಶಿಕ್ಷಕ.
ಕೋಟೆನಾಡಿನಲ್ಲಿನ ದಂಪತಿಗಳಿAದ ಮಾದರಿ ವಾರ್ಷಿಕೋತ್ಸವ ಆಚರಣೆ.

ಗಜೇಂದ್ರಗಡ:

ಮದುವೆ ವಾರ್ಷಿಕೋತ್ಸವ ಎಂದರೆ ದಂಪತಿ ಸೇರಿಕೊಂಡು ದೇವಸ್ಥಾನಕ್ಕೆ ಹೋಗುವುದು, ಕುಟುಂಬದವರೊAದಿಗೆ ಸಂಭ್ರಮ ಆಚರಿಸುವುದು, ಕೇಕ್ ಕತ್ತರಿಸಿ ವಿವಾಹ ವಾರ್ಷಿಕೋತ್ಸವ ಅಚರಣೆ ಮಾಡುವುದು ಸಾಮಾನ್ಯ. ಆದರೆ ಇಲ್ಲೊಂದು ದಂಪತಿ ಬಡವರು,ಜೋಪಡಿ ವಾಸದಲ್ಲಿನ ಮಕ್ಕಳ ಜೊತೆ ವಾರ್ಷಿಕೊತ್ಸವ ಆಚರಣೆ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗುವ ರೀತಿಯಲ್ಲಿ ವಿವಾಹ ವಾರ್ಷಿಕೋತ್ಸವ ಆಚರಣೆ ಮಾಡಿಕೊಂಡಿದ್ದಾರೆ.

 

ನಗರದ ಪ್ರತಿಷ್ಠಿತ ಮನೆತನವಾದ ಒಂಟಿ ಮನೆತನದಲ್ಲಿ ಜನಿಸಿದ ಅಬ್ದುಲರಜಾಕ ಒಂಟಿ ಹಾಗೂ ಅಪ್ಸರಾಬಾನು ಒಂಟಿ ತಮ್ಮ ೧೯ ನೇ ವಾರ್ಷಿಕೊತ್ಸವನ್ನು ಬಡ ಮಕ್ಕಳಗೆ ಉಚಿತ ನೋಟಬುಕ್ಕ,ಉಪಹಾರ,ಶೈಕ್ಷಣಿಕ ಸಾಮಾಗ್ರಿ ನೀಡುವ ಮೂಲಕ ಆಚರಣೆ ಮಾಡಿಕೊಂಡಿರುವ ಇವರು ವೃತ್ತಿಯಲ್ಲಿ ಶಿಕ್ಷಕರಾಗಿ ಶೈಕ್ಷಣಿಕ ರಂಗದಲ್ಲಿ ಅನೇಕ ಸಾಧಕರ ಬೆನ್ನುಲುಬು ಆಗಿ, ಶಿಕ್ಷಣ ಕ್ಷೇತ್ರದ ಅನೇಕ ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿ ಇಂತಹ ಅದೇಷ್ಟೋ ಬಡ ವಿಧ್ಯಾರ್ಥಿಗಳ ಬಾಳಿಗೆ ಬೆಳಕಾಗಿದ್ದಾರೆ.

 

ಆಚರಣೆಗಳು ವಿಭಿನ್ನ, ಮಾದರಿ;
ಹುಟ್ಟುಹಬ್ಬ, ವಾರ್ಷಿಕೊತ್ಸವಗಳು ಪ್ರಸ್ತುತ ದಿನಮಾನಗಳಲ್ಲಿ ಮೋಜು ಮಸ್ತಿಗಾಗಿ ಒಂದು ಕಾರಣವಾಗಿ ಬಿಟ್ಟಿವೆ. ಆದರೆ ಎ.ಕೆ.ಒಂಟಿ ಗುರುಗಳು ಅವರ ಹುಟ್ಟುಹಬ್ಬವಾಗಲಿ, ವಾರ್ಷಿಕೊತ್ಸವಗಳು ಆಚರಣೆಗಳು ಕೇವಲ ಮನೆಯಲ್ಲಿ, ಸ್ನೇಹಿತರ ಜೊತೆಗೂಡಿ ಕೇಕ್ ಕತ್ತರಿಸಿ ಆಚರಣೆ ಮಾಡದೆ. ಜೋಪಡಿ ವಾಸಿಗಳಾಗಿ ನಗರದಲ್ಲಿ ವಾಸವಾದ ಮುಗ್ದ ಮಕ್ಕಳಿಗೆ ಶೈಕ್ಷಣಿಕ ಸಾಮಾಗ್ರಿಗಳನ್ನು ನೀಡುವ ಮೂಲಕ ಆಚರಿಸಿದ್ದು ಮುಂದಿನ ದಿನಮಾನಗಳಲ್ಲಿ ಇಂತಹ ಮಾದರಿ ಆಚರಣೆ ಮಾಡಿದರೆ ಅದೆಷ್ಟೋ ಬಡ ಮಕ್ಕಳಿಗೆ ಓದಲು ಪ್ರೋತ್ಸಾಹ ನೀಡಿದಂತಾಗುತ್ತದೆ.

 

ಬಾಕ್ಸ೧:

ಸ್ವಾಮಿ ವಿವೇಕಾನಂದ ಪಾಠಶಾಲೆಯನ್ನು ಸು.೨ ವರ್ಷಗಳಿಂದ ನಡೆಸುತ್ತಾ ಅಲೆಮಾರಿ ಜೀವನ ಸಾಗಿಸುವ ಬಡ ಮಕ್ಕಳಿಗೆ ಉಚಿತವಾಗಿ ಶಿಕ್ಷಣ ನೀಡುತ್ತಾ ಬಂದಿದ್ದೇನೆ. ಅನೇಕ ದಾನಿಗಳಿಂದ ಬಡ ಮಕ್ಕಳಿಗೆ ಪುಸ್ತಕಗಳು, ನೋಟಬುಕ್ಕಗಳು ವಿತರಣೆ ಮಾಡಲಾಗಿತ್ತು. ಆದರೆ ಎ.ಕೆ.ಒಂಟಿ ಗುರುಗಳು ಶಿಕ್ಷಣ ನೀಡುತ್ತಿರುವುದನ್ನು ಗಮನಿಸಿ ಮಕ್ಕಳಿಗೆ ಬೇಕಾದ ಶೈಕ್ಷಣಿಕ ಸಾಮಾಗ್ರಿಗಳನ್ನು ನೀಡಿದ್ದು ಮಕ್ಕಳ ಬಾಳಿಗೆ ಬೆಳಕಾಗಿದೆ ಎಂದು ಉಪನ್ಯಾಸಕರಾದ ವಿನಾಯಕ ಜಾಧವ ತಮ್ಮ ಅಭಿಪ್ರಾಯ ಹೇಳಿದ್ದರು.

ಬಾಕ್ಸ.೨

ನಾವೂ ಎಲ್ಲರೂ ಬಡವರು, ಅಲೆಮಾರಿ ಜೀವನವನ್ನು ಸಾಗಿಸುತ್ತಾ ಬಂದಿದ್ದೇವೆ. ನಮ್ಮ ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ನಾವೆಲ್ಲಾ ವಿಫಲರಾಗಿದ್ದಾರೆ. ಆದರೆ ಗಜೇಂದ್ರಗಡಕ್ಕೆ ಬಂದ ನಂತರ ನಮ್ಮ ಮಕ್ಕಳಿಗೆ ಶಿಕ್ಷಣಕ್ಕೆ ನಗರದಲ್ಲಿನ ಜನತೆಯು ಬಹಳಷ್ಟೂ ಅನೂಕೂಲ ಮಾಡಿದ್ದಾರೆ ಅದಕ್ಕೆ ನಮ್ಮ ಜೋಪಡಿಯಲ್ಲಿನ ಜನರು ನಗರದ ಜನತೆಗೆ ಅಭಿನಂಧನೆ ಸಲ್ಲಿಸುತ್ತೇವೆ ಎನ್ನುತಾರೆ ಜೋಪಡಿ ನಿವಾಸಿ ಶರಣಪ್ಪ ನಾಗರಾಳ.

ಬಾಕ್ಸ ೩


ನಮ್ಮ ಮನೆತನವೂ ವ್ಯಾಪರ ಮಾಡುತ್ತಾ ಬಂದಿದೆ. ಆದರೆ ನಾನು ವೃತ್ತಿಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಾ ಬಂದಿದ್ದೇನೆ. ನನ್ನ ಸೇವಾವಧಿಯಲ್ಲಿ ಅನೇಕ ಬಡ ಮಕ್ಕಳಿಗೆ ಉಚಿತ ಶಿಕ್ಷಣವನ್ನು ನೀಡಿದ್ದೇನೆ. ಓದುವ ಹಂಬಲವಿದ್ದ ಬಡ ಮಕ್ಕಳಿಗೆ ಶೈಕ್ಷಣಿಕವಾಗಿ ನನ್ನಿಂದ ಕೈಲಾದಷ್ಟು ಸಹಾಯ ಮಾಡಿದ್ದೇನೆ. ನನ್ನ ಹುಟ್ಟುಹಬ್ಬ, ವಾರ್ಷಿಕೋತ್ಸವವೂ ಇಂತಹ ಕಾರ್ಯಕ್ರಮಗಳನ್ನು ಎಲೆ ಮರೆಕಾಯಿಯಂತೆ ಮಾಡುತ್ತಾ ಬಂದಿದ್ದೇವೆ,ಈ ಬಾರಿ ಜೋಪಡಿಯಲ್ಲಿನ ಮಕ್ಕಳಿಗೆ ಶೈಕ್ಷಣಿಕ ಸಾಮಾಗ್ರಿಗಳನ್ನು ನೀಡಿದ್ದೇನೆ. ಇಂತಹ ಸಮಾಜ ಸೇವೆ ಮಾಡಲು ದಿ.ಈಶ್ವರಪ್ಪ ರೇವಡಿ ಗುರುಗಳು ಸ್ಪೂರ್ತಿಯಾಗಿದ್ದಾರೆ ಎನ್ನುತ್ತಾರೆ ಶಿಕ್ಷಕ ಎ.ಕೆ.ಒಂಟಿ ಗುರುಗಳು.


Share News

Related Articles

Leave a Reply

Your email address will not be published. Required fields are marked *

Back to top button