ರಾಜ್ಯಮಟ್ಟದ ಯುವಚೇತನ ವ್ಯಕ್ತಿತ್ವ ವಿಕಸನ ಪರೀಕ್ಷೆಯಲ್ಲಿ ಗಜೇಂದ್ರಗಡದ ಬಿ.ಎಸ್.ಎಸ್. ಕಾಲೇಜಿನ ವಿದ್ಯಾರ್ಥಿನಿಗೆ ಪ್ರಥಮ ಸ್ಥಾನ.
ರಾಜ್ಯಮಟ್ಟದ ಯುವಚೇತನ ವ್ಯಕ್ತಿತ್ವ ವಿಕಸನ ಪರೀಕ್ಷೆಯಲ್ಲಿ ಗಜೇಂದ್ರಗಡದ ಬಿ.ಎಸ್.ಎಸ್. ಕಾಲೇಜಿನ ವಿದ್ಯಾರ್ಥಿನಿಗೆ ಪ್ರಥಮ ಸ್ಥಾನ.
ಗಜೇಂದ್ರಗಡ:
ನಗರದ ಶ್ರೀ ಬೆನಕಪ್ಪ ಶಂಕ್ರಪ್ಪ ಸಿಂಹಾಸನದ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ ಕನ್ಯಾಕುಮಾರಿಯಲ್ಲಿರುವ ವಿವೇಕಾನಂದ ಕೇಂದ್ರದವರು ನಡೆಸಿದ ರಾಜ್ಯಮಟ್ಟದ ಯುವಚೇತನ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದ ಪ್ರಥಮ ವರ್ಷದ ಕಲಾ ವಿಭಾಗದ ವಿದ್ಯಾರ್ಥಿನಿ ಕುಮಾರಿ ಭಾಗ್ಯ ಗೌಡ್ರ ಇವರಿಗೆ ವಿವೇಕಾನಂದ ಕೇಂದ್ರದ ಕಾರ್ಯಕರ್ತರಾದ ಶ್ರೀ ಅರವಿಂದ ಅವರು ಪ್ರಶಸ್ತಿ ಪತ್ರ ಮತ್ತು ರೂ. ೫೦೦೦ ಗಳ ಬಹುಮಾನವನ್ನು ಚೆಕ್ ರೂಪದಲ್ಲಿ ವಿತರಿಸಿದರು.
ರಾಜ್ಯದ ಒಟ್ಟು ೩೮ ಕಾಲೇಜುಗಳ ೩೦೦೦ ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಪರೀಕ್ಷೆಯಲ್ಲಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ Iಕಿಂಅ ಸಂಚಾಲಕರಾದ ಶ್ರೀಮತಿ ಸರಸ್ವತಿ, ಸಾಂಸ್ಕೃತಿಕ ವಿಭಾಗದ ಸಂಚಾಲಕರಾದ ಶ್ರೀ ಸಿದ್ದೇಶ, ಕನ್ನಡ ವಿಭಾಗದ ಮುಖ್ಯಸ್ಥರಾದ ಶ್ರೀಮತಿ ಜೀವಿತ ಹಾಗೂ ಉಪನ್ಯಾಸಕರಾದ ಡಾ. ಮಂಜುನಾಥ ಸುಣಗಾರ್ ಮತ್ತು ಯಮನಪ್ಪ ಮೇಗೂರು ಹಾಗೂ ಆಂಗ್ಲ ವಿಭಾಗದ ಉಪನ್ಯಾಸಕರಾದ ಶ್ರೀ ಶರಣಪ್ಪ ರೋಣದ ಹಾಜರಿದ್ದರು.