ರಾಜ್ಯ ಸುದ್ದಿಗದಗಜಿಲ್ಲಾ ಸುದ್ದಿಸ್ಥಳೀಯ ಸುದ್ದಿಗಳು

ಗ್ಯಾರಂಟಿ ಯೋಜನೆಗಳ ತಾಲೂಕ ಮಟ್ಟದ ಪ್ರಗತಿ ಪರಿಶೀಲನಾ ಸಭೆ

ಅಗತ್ಯ ಮಾಹಿತಿಯೊಂದಿಗೆ ಸಭೆಗೆ ಹಾಜರಾಗಿ ಅಧಿಕಾರಿಗಳಿಗೆ ಮಾನ್ಯ ಶಾಸಕರಾದ ಜಿ.ಎಸ್. ಪಾಟೀಲ್ ಅವರಿಂದ ಖಡಕ್ ಸೂಚನೆ

Share News

janadhwani news : ಗಜೇಂದ್ರಗಡ: ಅಧಿಕಾರಿಗಳು ಕಾಟಚಾರಕ್ಕೆ ಸಭೆಗೆ ಹಾಜರಾಗದೇ ಗ್ಯಾರಂಟಿ ಯೋಜನೆಗಳ ಸಂಪೂರ್ಣ ಮಾಹಿತಿಯೊಂದಿಗೆ ಸಭೆಗೆ ಹಾಜರಾಗಬೇಕು ಎಂದು ಶಾಸಕ ಜಿ.ಎಸ್. ಪಾಟೀಲ ಅವರು ಗ್ಯಾರಂಟಿ ಯೋಜನೆಯ 5 ಇಲಾಖೆ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಪಟ್ಟಣದ ತಾಲೂಕ ಪಂಚಾಯತ ಚಿಂತನ ಸಂಭಾಂಗಣದಲ್ಲಿ ಗುರುವಾರ ನಡೆದ ತಾಲೂಕ ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾನತನಾಡಿದ ಅವರು, ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳಾದ 5 ಗ್ಯಾರಂಟಿ ಯೋಜನೆಗಳನ್ನು ಪ್ರತಿ ಮನೆ ಮನೆಗೆ ಮುಟ್ಟಿಸಬೇಕು. ಅರ್ಹರಿರುವ ಯಾರೊಬ್ಬರು ಯೋಜನೆಯಿಂದ ವಂಚಿತರಾಗಬಾರದು ಆ ನಿಟ್ಟಿನಲ್ಲಿ ಅಧಿಕಾರಿಗಳು ಸದಸ್ಯರು ಒಗ್ಗೂಡಿಸಿಕೊಂಡು ಕೆಲಸ ಮಾಡಬೇಕು ಎಂದರು.
ಅನ್ಯಭಾಗ್ಯ ಯೋಜನೆಯಲ್ಲಿ ಸರಿಯಾಗಿ ಫಲಾನುಭವಿಗಳಿಗೆ ಅಕ್ಕಿ (ರೇಷನ್) ಸಿಗುತ್ತಿಲ್ಲ. ಇದರ ಬಗ್ಗೆ ಸದಸ್ಯರು ಮಾಡಿದ ಆರೋಪವನ್ನು ಗಂಭೀರವಾಗಿ ಪರಿಗಣಿಸಿದ ಶಾಸಕರು, ಆಧಾರ್ ಲಿಂಕ್, ಎನ್.ಪಿಎಸ್. ಮ್ಯಾಪಿಂಗ್ ಎ.ಎ.ವಾಯ್ 1, 6 ತಿಂಗಳಿಂದ ಪಡಿತರ ಪಡೆಯದೇ ಇರುವ ಕಾರ್ಡುದಾರರ ಬಗ್ಗೆ ಮಾಹಿತಿ ಪಡೆದುಕೊಂಡರು. ನಂತರ ಅನ್ನಭಾಗ್ಯ ಯೋಜನೆಯ ಅಧಿಕಾರಿಗೆ ಅನ್ನಭಾಗ್ಯ ಯೋಜನೆಯ ಫಲಾನುಭವಿಗಳ ಗುರುತಿಸಿ ಸೌಲಭ್ಯಗಳನ್ನು ಕಲ್ಪಿಸಬೇಕು. ಆ ನಿಟ್ಟಿನಲ್ಲಿ ಆಯಾ ಗ್ರಾಮದ ಲಿಸ್ಟ್ ನ್ನು ಗ್ಯಾರಂಟಿ ಕಮೀಟಿ ಸದಸ್ಯರಿಗೆ ನೀಡಿ ಅವರು ಫಲಾನುಭವಿಗಳನ್ನು ಗುರುತಿಸಿ ಸರಿಪಡಿಸುತ್ತಾರೆ ಎಂದು ಆಹಾರ ಇಲಾಖೆ ಅಧಿಕಾರಿಗೆ ತಿಳಿಸಿದರು.
ಗೃಹಜ್ಯೋತಿ ಯೋಜನೆ: ದೇವಸ್ಥಾನಗಳು, ಮಸೀದಿ, ಶಾಲಾ –ಕಾಲೇಜುಗಳಿಗೆ ವಿದ್ಯುತ್ ಪೂರೈಸುವ ಬಗ್ಗೆ ಕಳೆದೆರಡು ಸಭೆಯಲ್ಲಿ ತಿಳಿಸಿದರೂ ಇದುವರೆಗೂ ಯಾವುದೇ ಕ್ರಮಕೈಗೊಂಡಿಲ್ಲ ಎಂದು ಸದಸ್ಯರಾದ ನಿಂಗಪ್ಪ ಹಂಡಿ, ಇಮಾಮ್ ಸಾಬ ಭಾಗವಾನ ಆರೋಪಿಸಿದರು
ಇದಕ್ಕೆ ಪ್ರತಿಕ್ರಿಯಿಸಿದ ಹೆಸ್ಕಾಂ ಅಂಭಿಯಂತರರು ಮಾತನಾಡಿ, ದೇವಸ್ಥಾನ, ಮಸೀಧಿ ಸರ್ಕಾರಿ ಕಟ್ಟಡಗಳಿಗೆ ಅನುಮೋಧನೆ ಸರ್ಕಾರಕ್ಕೆ ವರದಿ ಕಳಿಸಲಾಗಿದೆ, ಅಲ್ಲಿಂದ ನಿರ್ದೇಶನ ದೊರೆತ ನಂತರ ಅಗತ್ಯು ಕ್ರಮವಹಿಸಲಾಗುವುದು ಎಂದರು. ಇದಕ್ಕೆ ಪೂರಕವಾಗಿ ಮಾನ್ಯ ಶಾಸಕರು ಬಿದ್ದ ಮನೆಗಳ ವಿದ್ಯುತ್ ತೆಗೆದು ಹಾಕಿ ಅರ್ಹರಿಗೆ ಗೃಹಜ್ಯೋತಿ ತಲುಪಿಸಿ ಎಂದರು.
ಗೃಹಲಕ್ಷ್ಮೀ ಯೋಜನೆ: ಗೃಹಲಕ್ಷ್ಮೀ ಯೋಜನೆಯೂ ತಾಲೂಕಿನಲ್ಲಿ 26791 ಫಲಾನುಭವಿಗಳು ಇದ್ದು, ಅದರಲ್ಲಿ 26659 ಯೋಜನೆಯ ನೋಂದಣಿ ಮಾಡಿಕೊಂಡಿರುತ್ತಾರೆ. ಇನ್ನೂ 152 ಅರ್ಜಿಗಳು ಬಾಕಿ ಉಳಿದಿವೆ ಇದರಲ್ಲಿ ಇ-ಕೆವೈಸಿ ಐಟಿ/ಜಿಎಸ್ ಟಿ ಸೇರಿ ಇತರೆ ಸಮಸ್ಯೆಗಳು ಇವೆ ಎಂದು ಮಾಹಿತಿ ನೀಡುತ್ತಿದ್ದಂತೆ ಸದಸ್ಯರು ಕಳೆದ ಸಭೆಯಲ್ಲಿ 52 ಬಾಕಿವೆ ಎಂದು ತಿಳಿಸಿದ್ದಿರಿ ಇದರ ಬಗ್ಗೆ ಮಾಹಿತಿ ಕೊಡಿ ಜೊತೆಗೆ ಅಂಗನವಾಡಿ ಕಾರ್ಯಕರ್ತೆಯರು ಗೃಹಲಕ್ಷ್ಮೀ ಯೋಜನೆಯ ಬಗ್ಗೆ ನಮ್ಮ ವ್ಯಾಪ್ತಿಯ ಬಗ್ಗೆ ಮಾಹಿತಿ ಕೇಳಿದರೆ ಸರ್ವೆ ಮಾಡಲು ತಿಳಿಸಿದರೆ ಯಾರೊಬ್ಬರು ಸರಿಯಾಗಿ ಮಾಹಿತಿ ನೀಡುತ್ತಿಲ್ಲ ಮತ್ತು ಸ್ಪಂಧಿಸುತ್ತಿಲ್ಲ ಎಂದು ಆರೋಪಿಸಿದರು.
ಇದಕ್ಕೆ ಮಾನ್ಯ ಶಾಸಕರು ಮಾತನಾಡಿ, ಹಿಂದಿನ ಸಭೆಯ ಚರ್ಚಿಸಿದ ವಿಷಯಗಳ ಮಾಹಿತಿ ಕೊಡಿ ಎಂದು ಅಧಿಕಾರಿಗೆ ತಾಕೀತು ಮಾಡಿದರು. ನಂತರ ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮೇಲ್ವಿಚಾರಕರು ಮತ್ತು ಗ್ಯಾರಂಟಿ ಸಮಿತಿ ಸದಸ್ಯರು ಅಂಗನವಾಡಿ ಕಾರ್ಯಕರ್ತೆಯರು ಸೇರಿ ಸಮನ್ವಯ ಸಭೆ ನಡೆಸಿ ಸಮಸ್ಯೆಗಳನ್ನು ಇತ್ಯಾರ್ಥ ಪಡಿಸಲು ಸೂಚಿಸಿದರು.
ಯುವನಿಧಿ ಯೋಜನೆ: ಯುವನಿಧಿ ಫಲಾನುಭವಿಗಳು ತಾಲೂಕಿನಲ್ಲಿ 379 ಇದ್ದು, ಅದರಲ್ಲಿ ಪದವಿ ಅಭ್ಯರ್ಥಿಗಳು 231, ಡಿಪಲ್ಓಮಾ ಅಭ್ಯರ್ಥಿಗಳು 4 ಒಟ್ಟು ಸೇರಿ 235 ಫಲಾನೂಭವಿಗಳು ಯೋಜನೆಯ ಲಾಭ ಪಡೆಯುತ್ತಿದ್ದಾರೆ ಎಂದರು.
ಅನ್ನಭಾಗ್ಯ ಯೋಜನೆ: ಅನ್ನಭಾಗ್ಯ ಯೋಜನೆಯಲ್ಲಿ ತಾಲೂಕಿನಲ್ಲಿ 26546 ಫಲಾನುಭವಿಗಳು ಇದ್ದು, ಅದರಲ್ಲಿ 23661 ಡಿಬಿಟಿ ಮೂಲಕ ಹಣ ಸಂದಾಯವಾಗುತ್ತಿದೆ ಎನ್ನುತ್ತಿದ್ದಂತೆ ಸದಸ್ಯರು ಮಧ್ಯೆ ಪ್ರವೇಶಿಸಿ ಹೊಸ ರೇಷನ್ ಕಾರ್ಡ್ ಪಡೆಯಲು 500 ರಿಂದ 1000 ರೂ ಹಣ ಪಡೆಯುತ್ತಿರುವ ಬಗ್ಗೆ ಹಿಂದಿನ ಸಭೆಯಲ್ಲಿ ಆರೋಪಿಸಲಾಗಿತ್ತು ಇದರ ಬಗ್ಗೆ ಏನು ಕ್ರಮ ಕೈಗೊಂಡಿದ್ದೀರಿ ಎಂದು ಪ್ರಶ್ನಿಸಿದರು.

ಪ್ರತಿ ಗ್ರಾಮದಲ್ಲಿ ರೇಷನ್ ಕೊಡುವಾಗ ತಂಬು ತೆಗೆದುಕೊಳ್ಳುತ್ತಾರೆ ಅದಕ್ಕೆ ತಕ್ಕಂತೆ ರೇಷನ್ (ಅಕ್ಕಿ) ವಿತರಣೆಯಾಗುತ್ತಿಲ್ಲ, ಕನಿಷ್ಠ 20-25 ಕುಂಟುಬಗಳಿಗೆ ರೇಷನ್ ಸಿಗುತ್ತಿಲ್ಲ ಎಂದು ನಿಂಗಪ್ಪ ಹಂಡಿ, ಶರಣಪ್ಪ ಪೂಜಾರ, ಯಲ್ಲಪ್ಪ ತಳವಾರ ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿ ಮಾತನಾಡಿದ ಶಾಸಕರು, ಅನ್ನಭಾಗ್ಯ ಯೋಜನೆಯ ಬಗ್ಗೆ ಸರಿಯಾದ ಮಾಹಿತಿ ತೆಗೆದುಕೊಂಡು ಬನ್ನಿ, ಸಭೆಗೆ ಬರಬೇಕಾದರೆ ಕಾಟಚಾರಕ್ಕೆ ಬರಬೇಡಿ ಪರಿಪೂರ್ಣ ಮಾಹಿತಿಯೊಂದಿಗೆ ಸಭೆಗೆ ಹಾಜರಾಗಬೇಕು ಎಂದು ಎಚ್ಚರಿಕೆ ನೀಡಿದರು.
ಅನ್ನಭ್ಯಾಗ ಯೋಜನೆಗೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿಗಳಿಗೆ ದೂರವಾಣಿಯ ಮೂಲಕ ಕರೆ ಮಾಡಿ ಅನ್ನಭಾಗ್ಯ ಯೋಜನೆಯ ತಾಲೂಕಿನಲ್ಲಿ ಬಹಳಷ್ಟು ಸಮಸ್ಯೆಗಳು ಇವೆ. ಇದರ ಬಗ್ಗೆ ಗಮನ ಹರಿಸಿ ಫಲಾನುಭವಿಗಳಿಗೆ ತಲುಪಿಸಲು ಕ್ರಮವಹಿಸಲು ಸೂಚಿಸಿದರು. ಪ್ರತಿ ಸಭೆಯ ಕುರಿತು ಅನುಪಾಲನಾ ವರದಿ ಉಪವಿಭಾಗ ಅಧಿಕಾರಿಗಳಿಗೆ ಮಾಹಿತಿ ಹಾಕಿ ಎಂದು ತಾ.ಪಂ. ಇಒ ಅವರಿಗೆ ಸೂಚಿಸಿದರು.
ಶಕ್ತಿ ಯೋಜನೆ: ಕಳೆದ ಸಭೆಯಲ್ಲಿ ಗೌಡಗೇರಿ, ಕುಂಟೋಜಿ ಮಾಟರಂಗಿ ಬಸ್ ಬಿಡಲು ಚರ್ಚಿಸಲಾಗಿತ್ತು ಅದರಂತೆ ಬಸ್ ಬಿಡುವ ವ್ಯವಸ್ಥೆ ಮಾಡಲಾಗಿದೆ. ಇನ್ನೂ ಗಜೇಂದ್ರಗಡ ದಿಂಧ ಬಾದಾಮಿ ಬಸ್ ಗಳನ್ನು ಲಕ್ಕಲಕಟ್ಟಿ, ನಾಗೇಂಧ್ರಗಡ, ರುದ್ರಾಪೂರು ಮಾರ್ಗವಾಗಿ ಬಿಡಲು ತಿಳಿಸಲಾಗಿತ್ತು.

ಗಜೇಂದ್ರಗಡದಿಂದ ಬಾದಾಮಿಗೆ ಹೋಗುವ ಬಸ್ ಗಳು ಕಡಿಮೆ ಇರುವ ಕಾರಣ ಇಲ್ಲಿಂದಲೆ ಬಸ್ ಪುಲ್ ಆಗಿ ಹೋಗುವುದರಿಂದ ಬಸ್ ಬಿಡಲು ಆಗುತ್ತಿಲ್ಲ. ಬಸ್ ಗಳು ಕೊರತೆಯಿಂದ ಹೆಚ್ಚುವರಿ ಬಸ್ ಬಿಡಲು ಪತ್ರ ಬರೆದಿದ್ದೇವೆ ಎಂದರು.

ಗ್ಯಾರಂಟಿ ಕಮೀಟಿ ಜಿಲ್ಲಾಧ್ಯಕ್ಷರಾದ ಬಿ.ಬಿ. ಅಸೂಟಿ ಮಾತನಾಡಿ, ಗ್ಯಾರಂಟಿ ಯೋಜನೆಗಳ ಕುರಿತು ಪ್ರತಿ ಗ್ರಾಮವಾರು ಸ್ಥಳೀಯ ಮಟ್ಟದಲ್ಲಿ ಸಾರ್ವಜನಿಕರೊಂದಿಗೆ ಸಂವಾದ ಕಾರ್ಯಕ್ರಮ ಏರ್ಪಡಿಸಿ ಜನರಿಂದ ಗ್ಯಾರಂಟಿ ಯೋಜನೆಗಳ ಬಗ್ಗೆ ಮಾಹಿತಿ ಪಡೆಯೋಣ ಅದನ್ನು ಗಜೇಂದ್ರಗಡ ತಾಲೂಕಿನಿಂದಲೇ ಪ್ರಾರಂಭಿಸೋಣ ಎಂದರು.
ಗ್ಯಾರಂಟಿ ಕಮೀಟಿ ತಾಲೂಕಾಧ್ಯಕ್ಷರಾದ ಶರಣಪ್ಪ ಬೆಟಗೇರಿ ಮಾತನಾಡಿ, ತಾಲೂಕಿನಲ್ಲಿ ಗ್ಯಾರಂಟಿ ಯೋಜನೆಗಳು ಉತ್ತಮ ಪ್ರಗತಿ ಸಾಧಿಸಿದಾಗ್ಗ್ಯೂ ಕೂಡ ಗೃಹಲಕ್ಷ್ಮೀ, ಅನ್ನಭಾಗ್ಯ ಯೋಜನೆಗಳ ಕುರಿತಂತೆ ಬಹಳಷ್ಟು ಜನರಿಗೆ ಹಣ ಜಮಾ ಆಗಿರದ ಬಗ್ಗೆ ಬಹಳಷ್ಟು ದೂರುಗಳು ಬಂದಿವೆ. ಅನ್ನಭಾಗ್ಯ ಮತ್ತು ಗೃಹಲಕ್ಷ್ಮೀ ಯೋಜನೆಗಳು ಅವಿನಾಭಾವ ಸಂಬಂಧವಿದೆ. ಈ ಯೋಜನೆಗಳ ಅಧಿಕಾರಿಗಳು ಇಬ್ಬರು ಹೊಂದಾಣಿಕೆ ಮಾಡಿಕೊಂಡು ಯೋಜನೆಗಳ ಮಾಹಿತಿಯನ್ನು ಜನರಿಗೆ ತಲುಪಿಸಬೇಕು. ಗ್ಯಾರಂಟಿ ಯೋಜನೆಗಳಲ್ಲಿ ಯಾವುದೇ ಹಸ್ತಕ್ಷೇಪವಿಲ್ಲದೆ. ಪ್ರತಿ ಎರಡು ತಿಂಗಳಿಗೊಮ್ಮೆ ಸಭೆಯನ್ನು ಕಡ್ಡಾಯವಾಗಿ ಕರೆಯುತ್ತೇವೆ. ಅಧಿಕಾರಿಗಳು ಸಭೆಗೆ ಬರುವಾಗ ಸರಿಯಾಗಿ ಮಾಹಿತಿ ತರಬೇಕು. ಸಭೆ ಮುಗಿತು ಎಂದು ಕೈಡುವ ಮಾತಿಲ್ಲ. ಎಲ್ಲಾ ಸದಸ್ಯರು ನಿಮ್ಮಗಳ ಜೊತೆಗೆ ನಾವು ಕೈಜೋಡಿಸುತ್ತೇವೆ. ಎಲ್ಲರೂ ಸೇರಿ ಯೋಜನೆಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡೋಣ ಎಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಗದಗ ತಾಲೂಕ ಗ್ಯಾರಂಟಿ ಕಮೀಟಿ ಅಧ್ಯಕ್ಷ ಅಶೋಕ ಮಂದಾಲಿ, ಸದಸ್ಯರಾದ ಇಮಾಮಸಾಬ ಬಾಗವಾನ, ಶರಣಪ್ಪ ಪೂಜಾರ, ಶರಣಯ್ಯ ಕಾರಡಗಿಮಠ, ಭೀಮಪ್ಪ ಮೇಟಿ, ಅಲ್ಲಾಸಾಬ ಮುಜಾವರ, ಪ್ರೇಮಾ ಇಟಗಿ, ರಾಜೇಶ್ವರಿ ಕಾಲವಾಡಗಿಮಠ, ಯಮನೂರಪ್ಪ ತಳವಾರ, ಬಸವರಾಜ ಬಿದರೂರ, ಸದಾಶಿವ ಆಚಲಕರ, ಶರಣಪ್ಪ ಸಜ್ಜನ್, ಯಲ್ಲಪ್ಪ ತಳವಾರ, ನಿಂಗಪ್ಪ ಹಂಡಿ, ಗ್ಯಾರಂಟಿ ಯೋಜನೆಯ ಐದು ಇಲಾಖೆ ಅಧಿಕಾರಿಗಳು ಹಾಜರಿದ್ದರು.


Share News

Related Articles

Leave a Reply

Your email address will not be published. Required fields are marked *

Back to top button