ಗದಗಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುರಾಜ್ಯ ಸುದ್ದಿರಾಷ್ಟೀಯ ಸುದ್ದಿಲೇಖನವಿಡಿಯೋಗಳುಶಿವಮೊಗ್ಗಸಿಂಧನೂರುಸೋಶಿಯಲ್ ಮೀಡಿಯಾ ಅಪ್ಡೇಟ್ಸ್ಸ್ಥಳೀಯ ಸುದ್ದಿಗಳು

ರಾಷ್ಟ್ರೀಯ ಹೆದ್ದಾರಿ ಬೈಪಾಸ್‌ ರಸ್ತೆಗೆ ರೈತರ ವಿರೋಧ

Share News

ರಾಷ್ಟ್ರೀಯ ಹೆದ್ದಾರಿ ಬೈಪಾಸ್‌ ರಸ್ತೆಗೆ ರೈತರ ವಿರೋಧ

ಸಚಿವ ಸತೀಶ ಜಾರಕಿಹೊಳಿ ಹಾಗೂ ಎಚ್.‌ ಕೆ. ಪಾಟೀಲರಿಗೆ ಮನವಿ

ಗಜೇಂದ್ರಗಡ:

ಭಾನಾಪುರ ದಿಂದ ಗದ್ದನಕೇರಿ ಕ್ರಸ್‌ ವರೆಗೆ ನಿರ್ಮಾಣವಾಗುತ್ತಿರುವ ರಾಷ್ಟ್ರೀಯ ಹೆದ್ದಾರಿಗೆ ಸಂಬಂಧಿಸಿದಂತೆ ಗಜೇಂದ್ರಗಡ-ರಾಜೂರ ನಡುವೆ ಹಾಯ್ದು ಹೋಗುವ ದ್ವಿಪಥ ರಾಷ್ಟ್ರೀಯ ಹೆದ್ದಾರಿಯ ಸರ್ವೇಕಾರ್ಯ ಮಾಡಿರುವುದು ಸರಿಯಾಗಿಲ್ಲ ಹಾಗೂ ಇದರಿಂದ ಅನ್ಯಾಯವಾಗಿದೆ ಎಂದು ವಿರೋಧವ್ಯಕ್ತ ಪಡಿಸಿರುವ ರೈತರು ಗದಗ ನಗರದಲ್ಲಿ ಸಚಿವರಾದ ಸತೀಶ ಜಾರಕಿಹೊಳಿ, ಎಚ್.‌ ಕೆ. ಪಾಟೀಲ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ರಾಷ್ಟ್ರೀಯ ಹೆದ್ದಾರಿಯ ದ್ವಿಪಥ ರಸ್ತೆ ಹಾಯ್ದು ಹೋಗುವ ರಾಜೂರ, ಉಣಚಗೇರಿ, ಪುರ್ತಗೇರಿ ಗ್ರಾಮಗಳ ಸರಹದ್ದಿನ ಹೊಲಗಳ ವ್ಯಾಪ್ತಿಯಲ್ಲಿ ಸರ್ವೇಕಾರ್ಯ ಮಾಡಲಾಗಿದೆ. ಆದರೆ ಇಲ್ಲಿನ ಭೂಮಿಗಳು ನಿರಾವರಿ ಭೂಮಿಗಳಾಗಿವೆ. ಇವೆಲ್ಲವೂ ಫಲವತ್ತಾದ ಮಣ್ಣಿನ ಭೂಮಿಗಳಾಗಿವೆ ಇವುಗಳ ಮೇಲೆ ರೈತರು, ಅವರ ಕುಟುಂಬಸ್ಥರ ಜೀವನ ಅವಲಂಭನೆಯಾಗಿದೆ. ಸರ್ವೇಕಾರ್ಯ ಮಾಡಿರುವುದರಿಂದ ರಾಜೂರ, ಉಣಚಗೇರಿ, ಪುರ್ತಗೇರಿ ಗ್ರಾಮಗಳ ರೈತರಿಗೆ ತೊಂದರೆ ಆಗಲಿದೆ. ಈ ಮಾರ್ಗದಲ್ಲಿ ಬರುವ ಶಾಲಾ ಮಕ್ಕಳಿಗೂ ತೊಂದರೆ ಆಗಲಿದೆ. ಚಿಕ್ಕ ಚಿಕ್ಕ ನೀರಾವರಿ ಜಮೀನು ಹೊಂದಿರುವ ರೈತರು ಹೈನುಗಾರಿಕೆ, ತೋಟಗಾರಿಕೆ ಜೀವನದಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಈ ರಸ್ತೆಯಿಂದ ರೈತರ ಬದುಕು ಬೀದಗೆ ಬರಲಿದೆ. ಆದ್ದರಿಂದ ಒಣ ಬೇಸಾಯದ ಜಮೀನುಗಳಲ್ಲಿ ಸರ್ವೇಕಾರ್ಯ ಮಾಡಿದರೆ ಅನಕೂಲವಾಗಲಿದೆ.
2022-23ರ ಅಲೈನ್ಸಮೆಂಟ್‌ ಅಪ್ಸನ್ಸ್‌ ನಕಾಶೆಯಲ್ಲಿ ತೋರಿಸಿರುವ ಕೆಂಪು, ಹಸಿರು ಗೆರೆಯಲ್ಲಿ ತೋರಿಸಿರುವಂತೆ ಆಯ್ಕೆ ಮಾಡಿದರೆ ರೈತರಿಗೆ ಅನಕೂಲವಾಗಲಿದೆ ಜೊತೆಗೆ ಅಪಘಾತಗಳನ್ನು ತಡೆಯಬಹುದು. ಈ ಹಿಂದಿನ ಸಂಸದರು, ಜಿಲ್ಲಾಧಿಕಾರಿಗಳಿ, ರಾಷ್ಟ್ರೀಯ ಹೆದ್ದಾರಿ ಧಾರವಾಡ, ಉಪವಿಭಾಗ ಯಲಬುರ್ಗಾ ಸೇರಿದಂತೆ ಸಂಬಂಧಿಸಿದ ಅಧಿಕಾರಿಗಳಿಗೆ, ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಲಾಗಿದೆ ಎಂದು ರೈತರು ಸಚಿವರ ಮುಂದೆ ಅಳಲು ತೋಡಿಕೊಂಡರು.
ಈ ವೇಳೆ ಯಶರಾಜ್ ಘೋರ್ಪಡೆ, ಬಸವರಾಜ ಪಾಟೀಲ, ರಮೇಶ ಗುಳ್ಳಿ, ಲಿಂಗರಾಜ ಮುಗನೂರ, ಮಹ್ಮದ್ ಯೂಸೂಫ್ ಕಟ್ಟಿಮನಿ, ದಶರಥ ಬೋಯ್ಟೆ, ಉಣಚಗೇರಿ, ಗಜೇಂದ್ರಗಡ, ಪುರ್ತಗೇರಿ ರಾಜೂರು ರೈತರು ಉಪಸ್ಥಿತರಿದ್ದರು.

9ಗಜೇಂದ್ರಗಡ1: ಗಜೇಂದ್ರಗಡ ಸಮೀಪದ ರಾಜೂರ, ಉಣಚಗೇರಿ, ಪುರ್ತಗೇರಿ ಗ್ರಾಮಗಳ ಸರಹದ್ದಿನ ಹೊಲಗಳ ರೈತರು ರಾಷ್ಟ್ರೀಯ ಹೆದ್ದಾರಿಯ ದ್ವಿಪಥ ರಸ್ತೆ ಹಾಯ್ದು ಹೋಗುವ ಸರ್ವೇಯನ್ನು ವಿರೋಧಿಸಿ ಸಚಿವ ಸತೀಶ ಜಾರಕಿಹೊಳಿಯವರಿಗೆ ಮನವಿ ನೀಡಿದರು

9ಗಜೇಂದ್ರಗಡ2: ಗಜೇಂದ್ರಗಡ ಸಮೀಪದ ರಾಜೂರ, ಉಣಚಗೇರಿ, ಪುರ್ತಗೇರಿ ಗ್ರಾಮಗಳ ಸರಹದ್ದಿನ ಹೊಲಗಳ ರೈತರು ರಾಷ್ಟ್ರೀಯ ಹೆದ್ದಾರಿಯ ದ್ವಿಪಥ ರಸ್ತೆ ಹಾಯ್ದು ಹೋಗುವ ಸರ್ವೇಯನ್ನು ವಿರೋಧಿಸಿ ಸಚಿವ ಎಚ್.‌ ಕೆ. ಪಾಟೀಲರಿಗೆ ಮನವಿ ನೀಡಲಾಯಿತು

ವರದಿ: ಮುಸ್ತಾಕ ಉಟಗೂರ — ಗದಗ.


Share News

Related Articles

Leave a Reply

Your email address will not be published. Required fields are marked *

Back to top button