ರಾಜ್ಯ ಸುದ್ದಿಅಂತಾರಾಷ್ಟ್ರೀಯಉದ್ಯೋಗ ವಾರ್ತೆಗಳುಉಪಯುಕ್ತ ಮಾಹಿತಿಗಳುಟ್ರೆಂಡಿಂಗ್ ಸುದ್ದಿಗಳುರಾಷ್ಟೀಯ ಸುದ್ದಿಸ್ಥಳೀಯ ಸುದ್ದಿಗಳು

ಸರ್ಕಾರಿ ಬಿಸಿಎ ಕಾಲೇಜಿಗೆ ಉತ್ತಮ ಫಲಿತಾಂಶ

ಬಿಸಿಎ 2ನೇ ಸೆಮಿಸ್ಟರ್‌ ಫಲಿತಾಂಶ ಶೇ 87.096 ರಷ್ಟು ದಾಖಲು

Share News

Janadhwani News Naregal ನರೇಗಲ್:‌ ಪಟ್ಟಣದ ಮರಿಯಪ್ಪ ಬಾಳಪ್ಪ ಕಳಕೊಣ್ಣವರ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಬ್ಯಾಚುಲರ್‌ ಆಫ್‌ ಕಂಪ್ಯೂಟರ್‌ ಅಪ್ಲಿಕೇಷನ್‌ (ಬಿಸಿಎ) ವಿಭಾಗದ 2ನೇ ಸೆಮಿಸ್ಟರ್‌ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ದಾಖಲಿಸಿದ್ದರೆ. ಪರೀಕ್ಷೆಗೆ ಹಾಜರಾಗಿದ್ದ 31 ವಿದ್ಯಾರ್ಥಿಗಳಲ್ಲಿ ಕೇವಲ 4 ವಿದ್ಯಾರ್ಥಿಗಳು ಮಾತ್ರ ಫೇಲ್ ಆಗಿದ್ದು ಶೇ 87.096 ರಷ್ಟು ಫಲಿತಾಂಶವನ್ನು ದಾಖಲಿಸಿದ್ದಾರೆ. ಇದರಲ್ಲಿ 750ಕ್ಕೆ ಅಂಕಿತಾ ಬೆನಹಾಳ 647 ಅಂಕಗಳನ್ನು ಪಡೆದು ಪ್ರಥಮ, ವೈಷ್ಣವಿ ಪಾಟೀಲ 645 ಅಂಕಗಳನ್ನು ಪಡೆದು ದ್ವಿತೀಯ, ಲಕ್ಷ್ಮೀದೇವಿ ದೊಡ್ಡಮನಿ 644 ಅಂಕಗಳನ್ನು ಪಡೆದು ತೃತೀಯ ಹಾಗೂ ಅನು ಮಂಡ್ರೆ ಮತ್ತು ಸಹನಾ ಕವಡಿಮಟ್ಟಿ ಇಬ್ಬರೂ 641 ಅಂಕಗಳನ್ನು ಪಡೆದು ಚತುರ್ಥ ಸ್ಥಾನಗಳನ್ನು ಪಡೆದಿದ್ದಾರೆ. ಒಟ್ಟು ಹತ್ತು ವಿದ್ಯಾರ್ಥಿಗಳು 600ಕ್ಕೂ ಹೆಚ್ಚಿನ ಅಂಕಗಳನ್ನು ಪಡೆದಿದ್ದಾರೆ.ಉಳಿದೆಲ್ಲಾ ವಿದ್ಯಾರ್ಥಿಗಳು 500ಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದು ಸರ್ಕಾರಿ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಧಾರವಾಡ ನಗರದಲ್ಲಿರುವ ಕರ್ನಾಟಕ ವಿಶ್ವವಿದ್ಯಾಲಯದ ಅಡಿಯಲ್ಲಿ ಬರುವ ಗ್ರಾಮೀಣ ಭಾಗದ ಕಾಲೇಜಿನಲ್ಲಿ ಅತ್ಯಂತ ಉತ್ಸುಕತೆಯಿಂದ ಓದುವ ಮೂಲಕ ಬಿಸಿಎ ಎರಡನೇ ಸೆಮಿಸ್ಟರ್‌ನಲ್ಲಿ ಉತ್ತಮ ಫಲಿತಾಂಶ ನೀಡಿದ ವಿದ್ಯಾರ್ಥಿಗಳಿಗೆ ಕಾಲೇಜಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅಭಿನಂದಸಲಾಯಿತು.

ಈ ವೇಳೆ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಪ್ರಾಂಶುಪಾಲ ಎಸ್.‌ ಎಲ್.‌ ಗುಳೆದಗುಡ್ಡ, ಗದಗ ಜಿಲ್ಲೆಯಲ್ಲಿ ಬಿಸಿಎ ಕೋರ್ಸ್‌ ಹೊಂದಿರುವ ಏಕೈಕ ಸರ್ಕಾರಿ ಪದವಿ ಕಾಲೇಜು ಎಂಬ ಹೆಗ್ಗಳಿಕೆಯನ್ನು ಪಡೆದಿದೆ. ಅಷ್ಟೇ ಅಲ್ಲದೆ ಅಖಿಲ ಭಾರತೀಯ ತಾಂತ್ರಿಕ ಶಿಕ್ಷಣ ಪರಿಷತ್‍ನಿಂದ (ಎಐಸಿಟಿಇ) ಮಾನ್ಯತೆ ಪಡೆದಿರುವುದು ಏಕೈಕ ಕಾಲೇಜ್‌ ಎಂಬ ಹೆಮ್ಮೆಯನ್ನು ಸಹ ಹೊಂದಿದೆ ಎಂದರು. ನಮ್ಮ ಕಾಲೇಜಿನ ವಿದ್ಯಾರ್ಥಿಗಳು ಉಪನ್ಯಾಸಕರ ಪರಿಶ್ರಮದಲ್ಲಿ ಹಾಗೂ ಅವರ ಸೂಕ್ತ ಮಾರ್ಗದರ್ಶನದಲ್ಲಿ ವರ್ಷದಿಂದ ವರ್ಷಕ್ಕೆ ಉತ್ತಮ ಫಲಿತಾಂಶ ದಾಖಲಿಸುತ್ತಿದ್ದಾರೆ. ಯಾವುದೇ ಖಾಸಗಿ ಕಾಲೇಜಿಗೆ ಕಡಿಮೆ ಇಲ್ಲವೆಂಬಂತೆ ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಿ ಸಾಧನೆಗಳನ್ನು ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಈಗಿನ ತಂತ್ರಜ್ಞಾನಕ್ಕೆ ಜಗತ್ತಿಗೆ ತಕ್ಕಂತೆ ವಿದ್ಯಾರ್ಥಿಗಳ ಸ್ಕಿಲ್‌ ಡೆವೆಲಪ್‌ಮೆಂಟ್‌, ವಿಶೇಷ ತರಬೇತಿ ಶಿಬಿರಗಳು, ಕಾರ್ಯಾಗಾರಗಳನ್ನು ಆಯೋಜನೆ ಮಾಡುವ ಮೂಲಕ ಬಿಸಿಎ ವಿದ್ಯಾರ್ಥಿಗಳಿಗೆ ಅತ್ಯಾಧುನಿಕ ತರಬೇತಿಗಳನ್ನು ನೀಡಲಾಗುವುದು. ಅಷ್ಟೇ ಅಲ್ಲದೆ ಉದ್ಯೋಗ ಆಧಾರಿತ ತರಬೇತಿಗಳನ್ನು ಸಹ ನೀಡಲಾಗುತ್ತದೆ ಎಂದು ಹೇಳಿದರು.

ಈ ವೇಳೆ ಬಿಸಿಎ ವಿಭಾಗದ ಎಚ್‌ಒಡಿ ಶಶಿಕಲಾ ವಿ. ಎಸ್‌, ವಿರುಪಾಕ್ಷಪ್ಪ ಸಂಗನಾಳ, ಬಸವರಾಜ ಮಡಿವಾಳರ, ಚಂದ್ರು ಎಂ. ರಾಥೋಡ್‌ ಇದ್ದರು.

ನರೇಗಲ್ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಬಿಸಿಎ ವಿಭಾಗದ 2ನೇ ಸೆಮಿಸ್ಟರ್‌ ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ದಾಖಲಿಸಿದ ಕಾರಣ ಅಭಿನಂದಿಸಲಾಯಿತು.


Share News

Related Articles

Leave a Reply

Your email address will not be published. Required fields are marked *

Back to top button