ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸರ್ಕಾರಿ ಕಾಲೇಜುಗಳು ವರದಾನ : ಜಿ.ಎಸ್.ಪಾಟೀಲ.
ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸರ್ಕಾರಿ ಕಾಲೇಜುಗಳು ವರದಾನ : ಜಿ.ಎಸ್.ಪಾಟೀಲ.
ಕಾಲೇಜಿನ ಅಭಿವೃದ್ದಿಗೆ ೨೫ ಲಕ್ಷ ನೀಡುವ ಭರವಸೆ.
ಗಜೇಂದ್ರಗಡ:
ಸರ್ಕಾರವೂ ಯಾವೂದೇ ಬಡವ, ಗ್ರಾಮೀಣ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆAಬ ಎನ್ನುವ ಉದ್ದೇಶದಿಂದ ಶೈಕ್ಷಣಿಕವಾಗಿ ನಾನಾ ಯೋಜನೆಗಳು, ಶಾಲಾ ಕಾಲೇಜುಗಳನ್ನು ನಿರ್ಮಿಸಿದ್ದಾರೆ. ಅಂತಹ ಕಾಲೇಜಿನ ಪೈಕಿ ಈ ಕಾಲೇಜು ಒಂದಾಗಿದ್ದು. ಇನ್ನೂ ನ್ಯಾಕ ಕಮಿಟಿಯವರು ನೀಡಿರುವ ಬಿ++ ಶ್ರೇಣಿಯನ್ನು ಪಡೆದ ಈ ಕಾಲೇಜಿಗೆ ಮೊದಲಿಗೆ ಅಭಿನಂದನೆ ಸಲ್ಲಿಸುತ್ತೇನೆ ಹಾಗೇಯೇ ಈ ಕಾಲೇಜಿನ ಅಭಿವೃದ್ದಿಗೆ ಶ್ರಮಿಸುತ್ತೇನೆ ಎಂದು ಖನಿಜ ಅಭಿವೃದ್ದಿ ನಿಗಮದ ಅಧ್ಯಕ್ಷರು ರೋಣ ಶಾಸಕ ಜಿ.ಎಸ.ಪಾಟೀಲ ಹೇಳಿದರು.
ನಗರದ ಬಿ.ಎಸ್.ಎಸ್.ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ೨೦೨೪ನೇ ಸಾಲಿನ ಸಾಂಸ್ಕೃತಿಕ, ಕ್ರೀಢಾ, ಎನ್.ಎಸ್.ಎಸ್., ಯುವ ರೇಡಕ್ರಾಸ ಹಾಗೂ ವಿವಿಧ ಚಟುವಟಿಕೆಗಳ ಸಮಾರೋಪ ಸಮಾರಂಭ ಮತ್ತು ಬಿಎ,ಬಿಕಾಂ,ಬಿಎಸ್ಸಿ ಅಂತಿಮ ವರ್ಗಗಳ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅಂತಿಮ ವರ್ಷದ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಈ ನಾಡಿಗೆ, ಕಾಲೇಜಿಗೆ, ತಂದೆ ತಾಯಂದಿರಿಗೆ ಕೀರ್ತಿ ತರುವ ಹಾಗೇ ವಿದ್ಯಾಬ್ಯಾಸ ಮಾಡಬೇಕು. ಮುಂದಿನ ನಿರ್ಧಾರವನ್ನು ಗಟ್ಟಿಗೊಳಿಸುವ ಉದ್ದೇಶದಿಂದ ನಮ್ಮ ತಂದೆಯವ ಹೆಸರಿನಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ತಯಾರಿಯ ಬಗ್ಗೆ ಉಚಿತ ತರಬೇತಿ ಆರಂಭವಾಗಿದ್ದು ಈಗಾಗಲೇ ನಾಡಿನ ಪ್ರಖ್ಯಾತ ತಜ್ಞರಿಂದ ಭೋಧನೆ ಕಾರ್ಯ ನಡೆಯುತ್ತಿದ್ದು, ಮುಂದೆಯೂ ಸಹ ಇಂತಹ ಕಾರ್ಯಗಳು ನಡೆಯಲಿವೆ. ಯವಾಗ ಸರ್ಕಾರವೂ ಪರೀಕ್ಷೆಗಳಿಗೆ ಅನುಮತಿ ನೀಡುವ ಸಂದರ್ಭದಲ್ಲಿಯೂ ಇಂತಹ ಪರೀಕ್ಷಾ ಪೂರ್ವ ತಯಾರಿ ತರಬೇತಿ ಆಯೋಜಿಸುವ ವಿಚಾಯ ಹೊಂದಿದ್ದೇನೆ. ಇದರ ಸದುಪಯೋಗ ಪಡೆದುಕೊಳ್ಳಿ ಎಂದರು.
ಬಳಿಕ ಕಾಲೇಜಿಗೆ ಬೇಕಾದ ಅಗತ್ಯ ಸಲಕರಣೆಗಳು, ಸಾಮಾಗ್ರಿಗಳು, ಕಂಪೌಡ ಇನ್ನಿತರ ಪರಿಕರಗಳ ಬಗ್ಗೆ ಕಾಲೇಜಿನ ಅಭಿವೃದ್ದಿ ಮಂಡಳಿ ಮನವಿ ನೀಡಿದ್ದರು. ತಕ್ಷಣವೇ ಅಲ್ಲಿಯೇ ಅಧ್ಯಕ್ಷತೆ ಭಾಷಣದಲ್ಲಿ ೨೫ ಲಕ್ಷಗಳನ್ನು ನೀಡುವ ಭರವಸೆಯನ್ನು ಖನಿಜ ನಿಗಮದ ಅಧ್ಯಕ್ಷರು ರೋಣ ಶಾಸಕ ಜಿ.ಎಸ.ಪಾಟೀಲ ಅಭಯ ಹಸ್ತವನ್ನು ನೀಡಿದರು. ವಿವಿಧ ಸಾಂಘಿಕ ಚಟುವಟಿಕೆಗಳಲ್ಲಿ ವಿಜೇತರಾದವರಿಗೆ ಸಾಂಕೇತಿಕವಾಗಿ ಪ್ರಶಸ್ತಿ ವಿತರಣೆ ಮಾಡಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ.ಬಿ.ಬಿ.ಪೋಲಿಸಪಾಟೀಲ,ಪ್ರಾಚಾರ್ಯರಾದ ಮಹೇಂದ್ರ ಜಿ. ಮಾತನಾಡಿದರು. ಬಳಿಕ ಕಾಲೇಜಿನ ಉಪನ್ಯಾಸಕ ಬಳಗದವರಿಗೆ ಸನ್ಮಾನ ನಡೆಯಿತು.
ಕಾರ್ಯಕ್ರಮದಲ್ಲಿ ಕಾಲೇಜಿನ ಅಭಿವೃದ್ದಿ ಮಂಡಳಿಯ ಸದಸ್ಯರಾದ ಶಿವರಾಜ ಘೋರ್ಪಡೆ, ಸಿದ್ದಣ್ಣ ಬಂಡಿ, ಎಫ್.ಎಸ್.ಕರಿದುರಗನವರ, ಶರಣಪ್ಪ ರಡ್ಡೇರ, ಬಿ.ಎಮ್.ಬಡಿಗೇರ,ಅzಶೋಕ ಬಾಗಮಾರ,ಅಜಿತ ವಂದಕುದರಿ,ಸುಭಾನ ಆರಗಿದ್ದಿ,ಮಹೇಶ ಕೊಟಗಿ, ಸುರೇಂದ್ರಸಾ ರಾಯಬಾಗಿ,ಶಿವಕುಮಾರ ಚವ್ಹಾಣ, ರಫೀಕ ತೊರಗಲ್,ಚಂಬಣ್ಣ ಚವಡಿ,ಯಲ್ಲಪ್ಪ ಬಂಕದ,ರಾಜೂ ಸಾಮಘ್ಲೀಕರ,ಎ.ಡಿ.ಕೋಲಕಾರ,ಹಸನಸಾಬ ತಟಗಾರ,ಪ್ರಕಾಶ ದಿವಾಣದ,ದಾದು ಹಣಗಿ,ಬಸವರಾಜ ಹೂಗಾರ,ಅರಿಹಂತ ಬಾಗಮಾರ, ಸಿದ್ದು ಗೊಂಗಡಶೆಟ್ಟಿಮಠ,ಉಮೇಶ ರಾಠೋಡ,ಶ್ರೀಧರ ಗಂಜಿಗೌಡ್ರ ಸೇರಿದಂತೆ ಅನೇಕರು ಇದ್ದರು.