ಗಜೇಂದ್ರಡದ ಅನ್ನದಾನೇಶ್ವರ ಪಿಯು ಕಾಲೇಜಿನಲ್ಲಿ ಗುರುಕೃಪಾ ಕಾರ್ಯಕ್ರಮ
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬಿಳ್ಕೋಡುವ ಸಮಾರಂಭ ಜ. 29ಕ್ಕೆ
ಗಜೇಂದ್ರಗಡ: ನಗರದ ಪುರ್ತಗೇರಿ ಕ್ರಾಸ್ ಬಳಿ ಇರುವ ಶ್ರೀ ಅನ್ನದಾನೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ 2024-25ನೇ ಸಾಲಿನ ವಿವಿಧ ಸಾಂಘಿಕ ಚಟುವಟಿಕೆಗಳ ಸಮಾರೋಪ ಸಮಾರಂಭ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಬಿಳ್ಕೋಡುವ ಗುರುಕೃಪಾ-2025 ಸಮಾರಂಭವು ಜನವರಿ 29 ರಂದು ಸಂಜೆ 3:30 ಗಂಟೆಗೆ ಕಾಲೇಜಿನ ಆವರಣದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಸಾನಿಧ್ಯವನ್ನು ಅನ್ನದಾನ ವಿಜಯ ವಿದ್ಯಾ ಪ್ರಸಾರಕ ಸಮಿತಿಯ ಅಧ್ಯಕ್ಷರಾದ ಮುಪ್ಪಿನ ಬಸವಲಿಂಗ ಮಹಾಸ್ವಾಮಿಗಳು ವಹಿಸಲಿದ್ದಾರೆ. ಗದಗ ಜಿಲ್ಲಾ ಅಗ್ನಿಶಾಮಕ ದಳದ ಅಧಿಕಾರಿ ವಿ. ಎಸ್. ಟಕ್ಕೆಕರ ಉದ್ಘಾಟಿಸಲಿದ್ದಾರೆ. ಕಾಲೇಜಿನ ಚೇರಮನ್ನರಾದ ವಿ. ವಿ. ವಸ್ತ್ರದ ಅಧ್ಯಕ್ಷತೆ ವಹಿಸಲಿದ್ದಾರೆ. ಬೆಳಗಾವಿಯ ಸಾಹಿತಿ ಡಾ. ರಾಜಶೇಖರ ಬಿರಾದಾರ ವಿಶೇಷ ಉಪನ್ಯಾಸ ನೀಡಲಿದ್ದಾರೆ. ಮುಖ್ಯಾತಿಥಿಗಳಾಗಿ ಗದಗ ಜಿಲ್ಲಾ ಶಾಲಾಶಿಕ್ಷಣ ಇಲಾಖೆಯ(ಪದವಿ ಪೂರ್ವ) ಉಪನಿರ್ದೇಶಕರಾದ ಸಿದ್ದಲಿಂಗ ಬಂಡು ಮಸನಾಯಕ, ಎಸ್‌ಎವಿವಿಪಿ ಸಮಿತಿಯ ಪ್ರಧಾನ ಕಾರ್ಯದರ್ಶಿ ರವೀಂದ್ರನಾಥ ದೊಡ್ಡಮೇಟಿ, ಆಡಳಿತಾಧಿಕಾರಿ ಎನ್. ಆರ್. ಗೌಡರ, ಶೈಕ್ಷಣಿಕ ಸಲಹೆಗಾರರಾದ ಬಿ. ಎಸ್. ಗೌಡರ, ಶಿವಾನಂದ ಮಠದ, ಆಡಳಿತ ಮಂಡಳಿ ಸದಸ್ಯರಾದ ಡಾ. ಬಿ. ವಿ. ಕಂಬಳ್ಯಾಳ, ಸದಾಶಿವ ಕರಡಿ, ಮುದಕಪ್ಪ ತೊಂಡಿಹಾಳ, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷರಾದ ಸಿದ್ದಣ್ಣ ಜಿ. ಬಂಡಿ, ಎಸ್.ಎ. ಐಟಿಐ ಕಾಲೇಜಿನ ಚೇರಮನ್ನರಾದ ಎಸ್. ಸಿ. ಚಕ್ಕಡಿಮಠ, ಪ್ರಾಚಾರ್ಯ ಎ. ಪಿ. ಗಾಣಗೇರ, ಕುಮಾರೇಶ್ವರ ವಾಣಿಜ್ಯ ಪದವಿ ಕಾಲೇಜಿನ ಚೇರಮನ್ನರಾದ ಎಸ್. ಎಸ್. ಪಟ್ಟೇದ, ಆಡಳಿತ ಮಂಡಳಿ ಸದಸ್ಯ ಎಂ. ಬಿ. ಪಾಟೀಲ, ಪ್ರಾಚಾರ್ಯ ಬಿ. ಎಸ್. ಹಿರೇಮಠ, ನರೇಗಲ್ ಎಸ್. ಎ. ಪಿಯು ಕಾಲೇಜಿನ ಚೇರಮನ್ನರಾದ ಎಂ. ಜಿ. ಸೋಮನಕಟ್ಟಿ, ಕಿವುಡ ಮಕ್ಕಳ ವಸತಿಯುತ ಶಾಲೆಯ ಚೇರಮನ್ನರಾದ ಎಸ್. ಕೆ. ರೇವಡಿ, ಅನ್ನದಾನೇಶ್ವರ ಆಂಗ್ಲ ಮಾಧ್ಯಮ ಶಾಲೆಯ ಚೇರಮನ್ನರಾದ ಪಿ. ಎನ್. ಚವಡಿ, ಪ್ರಾಚಾರ್ಯ ಮಂಜುನಾಥ ಕಾಡದ ಪಾಲ್ಗೊಳ್ಳಲಿದ್ದಾರೆ ಎಂದು ಪಿಯು ಕಾಲೇಜಿನ ಪ್ರಾಚಾರ್ಯ ವಸಂತರಾವ್ ಗಾರಗಿ ಪ್ರಕಟಣೆಯಲ್ಲಿ ತಿಳಿಸಿದರು.