ಗದಗಅಂತಾರಾಷ್ಟ್ರೀಯಅಪಘಾತಆತ್ಮಹತ್ಯೆಉಡುಪಿಉದ್ಯೋಗ ವಾರ್ತೆಗಳುಉಪಯುಕ್ತ ಮಾಹಿತಿಗಳುಚಿರತೆ ದಾಳಿಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುಡಿವೋರ್ಸ್ತಾಲೂಕುಬಾಗಲಕೋಟೆರಾಜ್ಯ ಸುದ್ದಿಸೋಶಿಯಲ್ ಮೀಡಿಯಾ ಅಪ್ಡೇಟ್ಸ್ಸ್ಥಳೀಯ ಸುದ್ದಿಗಳು

Hiking to Mantralaya :ಪಾದಯಾತ್ರೆಯಿಂದ ಬಾಂಧವ್ಯ ಗಟ್ಟಿ

ಗುರು ರಾಘವೇಂದ್ರರ ಪೂಜೆ, ಅನ್ನಸಂತರ್ಪಣೆ ಕಾರ್ಯಕ್ರಮ

Share News

ಜನಧ್ವನಿ ಸುದ್ದಿ ನರೇಗಲ್:‌ ಪ್ರತಿವರ್ಷ ಹಮ್ಮಿಕೊಳ್ಳುವ ಪಾದಯಾತ್ರೆ ಕಾರ್ಯಕ್ರಮಗಳಿಂದ ಪಾಲ್ಗೊಳ್ಳುವ ಕುಟುಂಬಗಳ ನಡುವೆ ಬಾಂಧವ್ಯ ಗಟ್ಟಿಯಾಗುತ್ತಿದೆ ಅಷ್ಟೇ ಅಲ್ಲದೆ ದೈಹಿಕ, ಮಾನಸಿಕ ಸಧೃಡತೆಗೂ ಸಾಕ್ಷಿಯಾಗಿದೆ ಎಂದು ಪಾದಯಾತ್ರೆಯ ಉಸ್ತುವಾರಿ ಪರಶುರಾಮ ಮಣ್ಣೊಡ್ಡರ ಹೇಳಿದರು.

ನರೇಗಲ್ ಪಟ್ಟಣದ ರಾಘವೇಂದ್ರ ಮಂತ್ರಾಲಯ ಪಾದಯಾತ್ರೆ ಮಂಡಳಿ ವತಿಯಿಂದ 18ನೇ ವರ್ಷದ ಯಶಸ್ವಿ ಪಾದಯಾತ್ರೆಯ ಅಂಗವಾಗಿ ಶನಿವಾರ ಹಮ್ಮಿಕೊಳ್ಳಲಾಗಿದ್ದ ಮಂತ್ರಾಲಯದ ಗುರು ರಾಘವೇಂದ್ರರ ಪೂಜೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

18ನೇ ವರ್ಷದ ಪಾದಾಯತ್ರೆಯನ್ನು ಜನವರಿ 16ಕ್ಕೆ ಆರಂಭಿಸಿ ಜನವರಿ 22ಕ್ಕೆ ತಲುಪಿದ್ದೇವೆ ನಂತರ ಅಲ್ಲಿಂದ ಬಂದು ಪಟ್ಟಣದಲ್ಲಿ ದೊಡ್ಡ ಪ್ರಮಾಣದ ಪೂಜೆ ಹಾಗೂ ಅನ್ನಸಂತರ್ಪಣೆ ಆಯೋಜನೆ ಮಾಡಿದೇವು. ಮಂತ್ರಾಲಯಕ್ಕೆ ಹೋಗಲು ಆಗದೇ ಇರುವ ಭಕ್ತರಿಗೆ ಅನ್ನಸಂತರ್ಪಣೆಯ ಮೂಲಕ ಪ್ರಸಾದ ವ್ಯವಸ್ಥೆ ಮಾಡಲಾಯಿತು ಎಂದು ಮಾಹಿತಿ ನೀಡಿದರು.

ಟೈಲ್ಸ್‌ ಮೇಸ್ತ್ರಿ ರವಿ ಮಣ್ಣೊಡ್ಡರ ಮಾತನಾಡಿ, ಪಾದಯಾತ್ರೆ ಸಮೀಪಿಸುತ್ತಿದ್ದಂತೆ ದುಡಿಯಲು ಬೇರೆ ಕಡೆಗೆ ಹೋಗುವ ಯುವಕರು ಮರಳಿ ಊರಿಗೆ ಬರುತ್ತಾರೆ. ಇದರಿಂದಾಗಿ ವರ್ಷದಿಂದ ವರ್ಷಕ್ಕೆ ಯಾತ್ರಿಗಳ ಸಂಖ್ಯೆ ಹೆಚ್ಚಾಗುತ್ತಿದೆ ಎಂದರು.

ಈ ವೇಳೆ ಪ್ರಮೋದ್ ರಾಯಬಾಗಿ, ಪರಸುರಾಮ ಮಣ್ಣೊಡ್ಡರ, ಕಿರಣ ನಿಡಗುಂದಿ, ಮಂಜುನಾಥ ನಿಲುಗಲ್, ಪ್ರಮೋದ ರಾಯಬಾಗಿ, ಹನಮಂತ ಬಾರಕೇರ, ದುರಗಪ್ಪ ಗಡಾದ, ಪ್ರಶಾಂತ ಹನಮಸಾಗರ, ಸುನೀಲ್ ಇಟಗಿ, ಮಹೇಶ ಮಣ್ಣೊಡ್ಡರ, ಸುರೇಶ ಕಟ್ಟಿಮನಿ, ಹನಮಂತ ಬಿಸನಳ್ಳಿ, ಸುದೀಪ ಬಿಸನಳ್ಳಿ, ದೇವಪ್ಪ ಬಾರಕೇರ, ರಾಘವೇಂದ್ರ ಬಂಡಿವಡ್ಡರ, ಕಿರಣ ಮಣ್ಣೊಡ್ಡರ, ಗಿರೀಶ್ ಕರಮುಡಿ, ಕಾರ್ತಿಕ ಇಟಗಿ, ಈರಪ್ಪ ಮಣ್ಣೊಡ್ಡರ, ರಾಜು ಇಟಗಿ, ಹನಮಂತ ಬಂಡಿವಡ್ಡರ, ರಾಹುಲ್ ಮಣ್ಣೊಡ್ಡರ ಇದ್ದರು.

ನರೇಗಲ್ ಪಟ್ಟಣದ ರಾಘವೇಂದ್ರ ಮಂತ್ರಾಲಯ ಪಾದಯಾತ್ರೆ ಮಂಡಳಿ ವತಿಯಿಂದ 18ನೇ ವರ್ಷದ ಯಶಸ್ವಿ ಪಾದಯಾತ್ರೆಯ ಅಂಗವಾಗಿ ಗುರು ರಾಘವೇಂದ್ರರ ಪೂಜೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು…


Share News

Related Articles

Leave a Reply

Your email address will not be published. Required fields are marked *

Back to top button