ಸ್ವಚ್ಛತೆಯೇ ಸೇವೆ ಅಭಿಯಾನಕ್ಕೆ ಚಾಲನೆ.
ಆರೋಗ್ಯಯುತ ಸಮಾಜಕ್ಕೆ ಕೈಜೋಡಿಸಿ: ತಾ.ಪಂ. ಇಒ ಬಸವರಾಜ ಬಡಿಗೇರ್
ಗಜೇಂದ್ರಗಡ:
ಪ್ರತಿಯೊಬ್ಬರೂ ವೈಯಕ್ತಿಕ ಸ್ವಚ್ಛತೆ ಹಾಗೂ ಮನೆಯ ಸುತ್ತಲಿನ ಪರಿಸರವನ್ನು ಸ್ವಚ್ಛವಾಗಿಟ್ಟುಕೊಳ್ಳುವುದರೊಂದಿಗೆ ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಟ್ಟುಕೊಂಡರೆ ಆರೋಗ್ಯಯುತ ಸಮಾಜ ನಿರ್ಮಾಣವಾಗುತ್ತದೆ ಎಂದು ಮಾನ್ಯ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಬಸವರಾಜ ಬಡಿಗೇರ್ ಹೇಳಿದರು.
ತಾಲೂಕಿನ ಶಾಂತಗೇರಿ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸ್ವಚ್ಛತೆಯೇ ಸೇವೆ- 2024ರ ಜಾಗೃತಿ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮ ಪಂಚಾಯತಿಯಿಂದ ಗ್ರಾಮದ ಸ್ವಚ್ಛಗೊಳಿಸುತ್ತಾರೆ. ಅವರೊಂದಿಗೆ ನೀವು ಕೈಜೋಡಿಸಿದರೆ ಗ್ರಾಮ ಸ್ವಚ್ಛತೆಯಾಗಿರುತ್ತದೆ. ಜೊತೆಗೆ ರೋಗಗಳಿಂದ ಮುಕ್ತವಾಗಿರಬಹುದು ಎಂದು ತಿಳಿಸಿದರು.
ಸಾರ್ವಜನಿಕರು ಕಸವನ್ನು ಎಲ್ಲೆಂದರಲ್ಲಿ ಬಿಸಾಡಬೇಡಿ. ಒಂದು ಸಂಗ್ರಹವಾಗಿ ಹಾಕಿ ಪಂಚಾಯತಿಯಿಂದ ಕಸವನ್ನು ತೆಗೆದುಕೊಂಡು ಹೋಗಲಾಗುತ್ತದೆ. ಸಾರ್ವಜನಿಕ ಸ್ಥಳಗಳಲ್ಲಿ ಕಸವನ್ನು ಸಂಗ್ರಹಿಸುವ ಮೂಲಕ ಗ್ರಾಮದ ಸ್ವಚ್ಛತೆಗೆ ಗ್ರಾಮ ಪಂಚಾಯತಿ ಶ್ರಮಿಸುತ್ತಿದೆ. ಅವರೊಂದಿಗೆ ಜನರು ಸಹಕರಿಸಿ ಕೈಜೋಡಿಸಿದಾಗ ಸುಂದರ ಗ್ರಾಮವನ್ನಾಗಿಸಬಹುದು. ಗ್ರಾಮ ಸ್ವಚ್ಛತೆಗೆ ಆದ್ಯತೆ ನೀಡಿದಾಗ ಮಾತ್ರ ಗಾಂಧಿಜೀಯವರ ಕಂಡ ಕನಸು ನನಸಾಗಿಸಲು ಸಾಧ್ಯ ಎಂದರು.
ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲಕ್ಷ್ಮೀಬಾಯಿ ಭೀಮಪ್ಪ ಲಮಾಣಿ ಅಧ್ಯಕ್ಷತೆ ವಹಿಸಿದ್ದರು.
ಈ ಸಂದರ್ಭದಲ್ಲಿ ಗ್ರಾ.ಪ.ಉಪಾಧ್ಯಕ್ಷರಾದ ಅನುಸೂಯಾ ಪರಸಪ್ಪ ಶಿಗ್ಲಿ, ಸದಸ್ಯರಾದ ಶಂಕ್ರಪ್ಪ ಹಟ್ಟಿಮನಿ, ಭೀಮಪ್ಪ ಲಮಾಣಿ, ಹನುಮಂತ ಹುಲ್ಲೂರು, ಮೀನಾಕ್ಷಿ ಪತ್ತಾರ, ಜಯಶ್ರೀ ನಿಂಗಪ್ಪ ಜಾಲಿಹಾಳ, ಉತ್ತಪ್ಪ ಮಾದರ, ನೀಲವ್ವ ಶಿವಪ್ಪ ಪರಮಟ್ಟಿ, ಚಂದ್ರಶೇಖರ ನಾಗನೂರು, ಚಂದ್ರಶೇಖರ ಜಾಲಿಹಾಳ, ಯಲ್ಲವ್ವ ಮಾದರ, ನಿರ್ಮಾಲಾ ರಾಠೋಡ, ಕಲವ್ವ ಮಾದರ, ಪಡಿಯಪ್ಪ ಹುಲ್ಲಣ್ಣನವರ, ಮಲ್ಲಿಕಾರ್ಜುನ ತಿ ಹಿರೇಉಪ್ಪಾರ, ಹನುಮಪ್ಪ ಮಾದರ, ಪಡಿಯಪ್ಪ ಕುಂಕದ, ಶರಣಮ್ಮ ಗಡ್ಡಿ, ಭೀಮಾಭಿಂಕಾ ಉಸಲಕೊಪ್ಪ, ಪಿಡಿಒ ಎಸ್.ಕೆ. ಕವಡೆಲಿ, ತಾ.ಪಂ. ಸಿಬ್ಬಂದಿಗಳು, ನರೇಗಾ ಸಿಬ್ಬಂದಿಗಳು, ಗ್ರಾ.ಪಂ. ಸಿಬ್ಬಂದಿಗಳು, ಆರೋಗ್ಯ ಇಲಾಖೆ ಸಿಬ್ಬಂದಿಗಳು, ಅಂಗನವಾಡಿ, ಆಶಾ ಕಾರ್ಯಕರ್ತೆಯರು ಇದ್ದರು.