
ಎಲ್ಲಿಬೇಕಾದಲ್ಲಿ ಹೋಗಬ್ಯಾಡ್ರಿ ಇಲ್ಲೇ ಏನಾದರೂ ಮಾಡೋಣ : ಶಾಸಕ ಜಿ.ಎಸ್.ಪಾಟೀಲ.
ಎಲ್ಲಿಬೇಕಾದಲ್ಲಿ ಹೋಗಬ್ಯಾಡ್ರಿ ಇಲ್ಲೇ ಏನಾದರೂ ಮಾಡೋಣ : ಶಾಸಕ ಜಿ.ಎಸ್.ಪಾಟೀಲ.
ಬೀದಿಬದಿ ವ್ಯಾಪಾರಿಗಳ ಮನವಿ ಸ್ವೀಕರಿಸಿ ಸಮಾಧಾನ ಹೇಳಿದ ಶಾಸಕರು.
ಜನಧ್ವನಿ ಕನ್ನಡ ಡಿಜಿಟಲ್ ವೆಬ್ ಪೋರ್ಟಲ್ :
ಗಜೇಂದ್ರಗಡ:
ನಗರದಲ್ಲಿನ ಬೀದಿಬದಿ ವ್ಯಾಪರಿಗಳ ಸ್ಥಳಾಂತರ ವಿಚಾರ ನಗರದಲ್ಲಿ ಪಿಸು ಪಿಸು ಮಾತಿಗೆ, ಚರ್ಚಗೆ ಗ್ರಾಸವಾಗುತ್ತಿದೆ.
ಗಜೇಂದ್ರಗಡ ಬಸ್ ನಿಲ್ದಾಣ, ಕುಷ್ಟಗಿ ಮತ್ತು ರೋಣ ರಸ್ತೆಯಲ್ಲಿ ಬೀದಿ ಬದಿ ವ್ಯಾಪಾರ ಮಾಡುತ್ತಿದ್ದ ಗೂಡಂಗಡಿಗಳನ್ನು ಪುರಸಭೆ ತೆರವು ಮಾಡಿದ್ದು, ವ್ಯಾಪಾರಿಗಳ ಬದುಕು ದುಸ್ಥರವಾಗಿದ್ದು, ಸಮಸ್ಯೆ ಪರಿಹರಿಸಬೇಕೆಂದು ಕರ್ನಾಟಕ ಬೀದಿ ಬದಿ ವ್ಯಾಪಾರಿ ಸಂಘಟನೆಗಳ ಒಕ್ಕೂಟ (ರಿ)ಗಜೇಂದ್ರಗಡ ತಾಲೂಕ ಘಟಕ ಶಾಖೆಯ ಪದಾಧಿಕಾರಿಗಳು ಮಂಗಳವಾರ ಶಾಸಕ ಜಿ.ಎಸ್.ಪಾಟೀಲ ಅವರಿಗೆ ಮನವಿ ಸಲ್ಲಿಸಿದರು.
ಕಳೆದ ಕೆಲ ವರ್ಷಗಳಿಂದ ರಸ್ತೆಯ ಬೀದಿ ಬದಿಯಲ್ಲಿ ವ್ಯಾಪಾರ ವಹಿವಾಟು ನಡೆಸಿಕೊಂಡು ಬದುಕನ್ನು ಕಟ್ಟಿಕೊಳ್ಳುತ್ತಿದ್ದೇವೆ. ವ್ಯಾಪಾರ ನಂಬಿ ವಿವಿಧ ಸ್ವಸಹಾಯ ಗುಂಪುಗಳಲ್ಲಿ ಹಾಗೂ ಬಡ್ಡಿ ಸಾಲ ಮಾಡಿ ಹೂವು, ಹಣ್ಣು, ತರಕಾರಿ, ಎಳನೀರು ಹಾಗೂ ಎಗ್ಗ ರೈಸ್ ಅಂಗಡಿಗಳನ್ನು ನಡಸಿಕೊಂಡು ತುತ್ತು ಅನ್ನಕ್ಕೆ ದಾರಿ ಮಾಡಿಕೊಂಡಿದ್ದೇವೆ. ಈಗ ಪುರಸಭೆ ಹಾಗೂ ತಹಸೀಲ್ದಾರ್ ಕಚೇರಿಯಿಂದ ಯಾವುದೇ ನೋಟಿಸ್ ನೀಡದೆ ಅಂಗಡಿಗಳನ್ನು ತೆರವುಗೊಳಿಸಿದೆ ಎಂದು ಶಾಸಕರ ಎದುರು ಅಳಲು ತೋಡಿಕೊಂಡರು.
ಬಳಿಕ ಶಾಸಕ ಜಿ.ಎಸ್.ಪಾಟೀಲ ಮನವಿ ಸ್ವೀಕರಿಸಿ ” ಎಲ್ಲಬೇಕಾದಲ್ಲಿ ಓಡ್ಯಾಡ ಬ್ಯಾಡ್ರಿ” ಓಡ್ಯಾಡಿದ್ರ ಕೆಲಸ ಆಗಲ್ಲ. ಏನಾದರೂ ಮಾಡೋಣ ಸಮಾಧಾನ ಇರ್ರೀ” ಎಂದು ಇಚೆಗೆ ಸಂಸದ ಬಸವರಾಜ ಬೊಮ್ಮಾಯಿಗೆ ಸಮಸ್ಯೆ ಕುರಿತು ಮನವಿ ಸಲ್ಲಿಸಿದ ಬೀದಿ ಬದಿ ವ್ಯಾಪಾರಿಗಳ ಪದಾಧಿಕಾರಿಗಳಿಗೆ ಪರೋಕ್ಷವಾಗಿ ಟಾಂಗ್ ನೀಡಿದರು.
ಈ ವೇಳೆ ಜನಧ್ವನಿ ಕನ್ನಡ ಡಿಜಿಟಲ್ ಪೋರ್ಟಲ್ ಗೆ ಪ್ರತಿಕ್ರಿಯೆ ನೀಡಿದ ಭಾಷಾಸಾಬ ಕರ್ನಾಚಿ, ಗಜೇಂದ್ರಗಡ ನಗರವು ತುಂಬಾ ವೇಗವಾಗಿ ಬೆಳೆಯುವ ನಗರವಾಗಿದೆ. ಇಲ್ಲಿ ಸಾವಿರಾರು ಕುಟುಂಬಗಳು ಬೀದಿ ಬದಿ ವ್ಯಾಪಾರದ ಮೇಲೆ ಅವಲಂಬಿತರಾಗಿರುತ್ತಾರೆ. ಅನೀರಿಕ್ಷಿತವಾಗಿ ದಿನಾಂಕ : 12/08/2024 ರ ಸೋಮವಾರ ದಿವಸ ಗಜೇಂದ್ರಗಡದ ದುರ್ಗಾ ಸರ್ಕಲನಿಂದ ಕೆ.ಕೆ. ಸರ್ಕಲವರೆಗೆ ಬೀದಿ ಬದಿ ವ್ಯಾಪಾರಸ್ಥರ ತೆರವು ಕಾರ್ಯವು ಸ್ಥಳೀಯ ಪುರಸಭೆ ಮತ್ತು ಪೋಲೀಸ ಇಲಾಖೆಯ ನೇತ್ರತ್ವದಲ್ಲಿ ನಡೆಯಿತು. ಗಜೇಂದ್ರಗಡದಲ್ಲಿ ಪಟ್ಟಣ ವ್ಯಾಪಾರ ಸಮೀತಿ (ಟಿ.ವಿ.ಸಿ) ಯಲ್ಲಿ ಯಾವುದೇ ರೀತಿಯ ಚರ್ಚೆ ಮಾಡದೆ, ಠರಾವು ಪಾಸ ಮಾಡದೆ ಮತ್ತು ಯಾವುದೇ ನೋಟೀಸ್ ನೀಡದೆ ತೆರವುಗೊಳಿಸಿರುತ್ತಾರೆ. ತರಕಾರಿ ಮಾರಕಟ್ಟೆಯನ್ನು ರೋಣ ರಸ್ತೆಯಲ್ಲಿರುವ ಬಯಲು ಜಾಗೆಯಲ್ಲಿ ವರ್ಗಾಯಿಸಿದ್ದಾರೆ. ಅಲ್ಲಿ ಯಾವುದೇ ರೀತಿಯ ಮೂಲಭೂತ ಸೌಕರ್ಯಗಳು ಇರುವುದಿಲ್ಲಾ, ಮಳೆ ಮತ್ತು ಬಿಸಿಲಿನಲ್ಲಿ ಕುಳಿತು ವ್ಯಾಪಾರ ಮಾಡುವಂತಾಗಿದೆ. ಇದರಿಂದ ಹಾವು ಕಾ ವ್ಯಾಪಾರಸ್ಥರಿಗೆ ತೊಂದರೆಯಾಗಿತ್ತಿದೆ. ಇದರಿಂದಾಗಿ ಸಾವಾರು ಬೀದಿ ಬದಿ ವ್ಯಾಪಾರಸ್ಥರ ಕುಟುಂಬಗಳ ಬದಕು ಬೀದಿಗೆ ಬಂದಂತಾಗಿದೆ. ಇದೇ ವ್ಯಾಪಾರ ನಂಬಿ ಸ್ವ-ಸಹಾಯ ಗುಂಪುಗಳಲ್ಲಿ, ಫೈನಾನ್ನಗಳಲ್ಲಿ ಮತ್ತು ಬ್ಯಾಂಕನಲ್ಲಿ ಸಾಲ ಮಾಡಿ ಜೀವನ ಸಾಗುಸುತ್ತಿರುವ ನಮಗೆ ತುಂಬಾಹೊರೆಯಾಗಿದೆ. ಜೀವನ ನಡೆಸಲು ತುಂಬ ಕಷ್ಟಕರವಾಗಿದೆ ಆದಕಾರಣ ದಯಾಮಣಿಯಾದ ತಾವುಗಳು ನಮಗೆ ಬೀದಿ ಬದಿಯಲ್ಲಿ ವ್ಯಾಪಾರ ಮಾಡಲು ಅನಕೂಲ ಮಾಡಿಕೊಡಬೇಕು ಅದರಂತೆಯೇ ರಸ್ತೆಯ ಮಧ್ಯದಲ್ಲಿ ಅಥವಾ ಸಂಚಾರಕ್ಕೆ ತೊಂದರೆ ಹಾಗೂ ಸಾರ್ವಜನಿಕರಿಗೆ ತೊಂದರೆ ಮಾಡಿದವರ ಮೇಲೆ ನಿರ್ದಾಕ್ಷಣೆಯಾಗಿ ಕ್ರಮ ಕೈಗೊಳ್ಳಬೇಕು ಹಾಗೂ ಎಲ್ಲಾ ಬೀದಿ ಬದಿ ವ್ಯಾಪಾರಸ್ಥರ ಈ ಮನವಿಯನ್ನು ಪುರಸ್ಕರಿಸಿ ಬೀದಿ ಬದಿ ವ್ಯಾಪಾರಸ್ಥರ ದಿನ ನಿತ್ಯದ ಜೀವನ ಸಾಗಿಸಲು ಅನುವು ಮಾಡಿಕೊಡಬೇಕೆಂದು ಶಾಸಕರಿಗೆ ಮನವಿ ನೀಡಿದೆ ಎಂದು ಹೇಳಿದರು.
ಮನವಿ ವೇಳೆ ಚಂದ್ರ ಶೇಖರ ರಾಠೋಡ, ರಾಜು ಮಾಂಡ್ರೆ, ಹುಲ್ಲಪ್ಪ ತಳವಾರ, ಮಾರುತಿ ಅಜ್ಮಿರ, ಮಂಜುನಾಥ ವಡ್ಡರ, ರಾಜೇಸಾಬ ಕಟ್ಟಿಮನಿ, ಕವಿತಾ ಹೆಬ್ಬಾಳ, ಮಂಜುಳಾ ಪಮ್ಮಾರ ಇತರರು ಇದ್ದರು.