ರಾಜ್ಯ ಸುದ್ದಿಗದಗಜಿಲ್ಲಾ ಸುದ್ದಿಸ್ಥಳೀಯ ಸುದ್ದಿಗಳು
ಅನ್ನದಾನೇಶ್ವರ ಶಾಖಾಮಠದಲ್ಲಿ ಕಾರ್ತಿಕೋತ್ಸವ
ಪಟ್ಟಣದ 13 ನೇ ವಾರ್ಡಿನಲ್ಲಿರುವ ಶ್ರೀ ಅನ್ನದಾನೇಶ್ವರ ಶಾಖಾಮಠದಲ್ಲಿ ಸೋಮವಾರ ವಿಜೃಂಭಣೆಯಿಂದ ಕಾರ್ತಿಕೋತ್ಸವ ಜರುಗಿತು.
Janadhwani News Gajendegad : ಗಜೇಂದ್ರಗಡ:ಪಟ್ಟಣದ 13 ನೇ ವಾರ್ಡಿನಲ್ಲಿರುವ ಶ್ರೀ ಅನ್ನದಾನೇಶ್ವರ ಶಾಖಾಮಠದಲ್ಲಿ ಸೋಮವಾರ ವಿಜೃಂಭಣೆಯಿಂದ ಕಾರ್ತಿಕೋತ್ಸವ ಜರುಗಿತು.
ಇಂದು ಸಂಜೆ ಜರುಗಿದ ಕಾರ್ತಿಕೋತ್ಸವಕ್ಕೆ ಗರಗನಾಗಲಾಪುರ ಕುರುಗೋಡದ ಶ್ರೀ ನಿರಂಜನ ಪ್ರಭು ಸ್ವಾಮೀಜಿಗಳು ಚಾಲನೆ ನೀಡಿ ಆಶೀರ್ವಚನ ನೀಡಿ, ದೇವಸ್ಥಾನ ಮತ್ತು ಮಠ ಮಂದಿರಗಳಲ್ಲಿ ದೀಪ ಹಚ್ಚುವುದು ಅಜ್ಞಾನ ಮತ್ತು ಮೂಢನಂಬಿಕೆಯನ್ನು ಹೋಗಲಾಡಿಸಿ ಜ್ಞಾನದ ಬೆಳಕನ್ನು ಬೆಳಕಿಸುವುದು ಕಾರ್ತಿಕೋತ್ಸವ ಹಬ್ಬವಾಗಿದೆ ಎಂದರು.
ಪುರಸಭೆ ಸದಸ್ಯ ಮುರ್ತುಜಾ ಡಾಲಾಯತ ಮಾತನಾಡಿದರು. ಬಸವರಾಜ ಚನ್ನಿ, ಶರಣಪ್ಪ ಸಂಕನೂರ, ನಾಗಪ್ಪ ಕುಂಬಾರ, ಶೇಖಪ್ಪ ಕುಂಬಾರ, ಶಿವಯ್ಯ ಚಕ್ಕಡಿಮಠ, ನಾಗಯ್ಯ ಗೋಂಗಡಶೆಟ್ಟಿಮಠ, ಶಿವಕುಮಾರ ಶಶಿಮಠ ಸಂಗಯ್ಯ ಸರಗಣಾಚಾರಿಮಠ, ಕಳಕಪ್ಪ ಗುಡ್ಡದ ಇತರರು ಇದ್ದರು.