ಉಪಯುಕ್ತ ಮಾಹಿತಿಗಳುಅಂತಾರಾಷ್ಟ್ರೀಯಉಡುಪಿಕನಕಗಿರಿಕುಕನೂರುಕುಷ್ಟಗಿಕೊಪ್ಪಳಗಂಗಾವತಿಗದಗಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುಧಾರವಾಡಬಿಸಿನೆಸ್ ಕನೆಕ್ಟ್ರಾಜ್ಯ ಸುದ್ದಿರಾಷ್ಟೀಯ ಸುದ್ದಿಲೇಖನವಿಡಿಯೋಗಳುಶಿವಮೊಗ್ಗಸಿಂಧನೂರುಸೋಶಿಯಲ್ ಮೀಡಿಯಾ ಅಪ್ಡೇಟ್ಸ್ಸ್ಥಳೀಯ ಸುದ್ದಿಗಳು

ಶಾಸಕ ಜಿ.ಎಸ್.ಪಾಟೀಲ ಹೇಳಿಕೆ ಖಂಡನೀಯ : ಮಕ್ತುಂಸಾಬ ಮುಧೋಳ

Share News

ಶಾಸಕ ಜಿ.ಎಸ್.ಪಾಟೀಲ ಹೇಳಿಕೆ ಖಂಡನೀಯ : ಮಕ್ತುಂಸಾಬ ಮುಧೋಳ.

ಗಜೇಂದ್ರಗಡ:

ಇತ್ತಿಚಿಗೆ ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯನವರ ವಿರುದ್ಧ ರಾಜ್ಯಪಾಲರು ನೀಡಿದ ಪ್ರಾಸಿಕ್ಯೂಷನ್ ವಿಚಾರವೂ ದಿನದಿಂದ ದಿನಕ್ಕೆ ತಾರಕ್ಕೆ ಏರುತ್ತಿದೆ.

ಈ ಹಿನ್ನಲೆಯಲ್ಲಿ ಮಂಗಳವಾರ ಕೋಟೆನಾಡು ಗಜೇಂದ್ರಗಡ ಪಟ್ಟಣದಲ್ಲಿ ಅಹಿಂದ ನಾಯಕರು ಹೋರಾಟ ಹಮ್ಮಿಕೊಂಡಿದ್ದು, ಬಹಿರಂಗ ಸಭೆಯನ್ನು ಕೂಡಾ ನಡೆಸಲಾಗಿತ್ತು.

ಬಹಿರಂಗ ಸಭೆಯಲ್ಲಿ ರೋಣ  ಶಾಸಕ ಜಿ.ಎಸ್.ಪಾಟೀಲರು ಸಿಎಂ ರಾಜಿನಾಮೆಗೆ ಪಟ್ಟು ಹಿಡಿದರೆ ಪ್ರಧಾನಿ ನರೇಂದ್ರ ಮೋದಿ ಮನೆಗೆ ಬಾಂಗ್ಲಾದೇಶದಂತೆ ಮುತ್ತಿಗೆ ಹಾಕಬೇಕಾಗುತ್ತದೆ ಎನ್ನುವು ಮಾತುಗಳು ಈಗ ವಿಪಕ್ಷಗಳಿಗೆ ಅದು ಅಸ್ತ್ರವಾಗಿದೆ‌.

ಈ ಕುರಿತಂತೆ ಗದಗ ಜಿಲ್ಲಾ ಜೆಡಿಎಸ್ ಪಕ್ಷದ ಅಧ್ಯಕ್ಷರಾದ ಮಕ್ತುಂಸಾಬ ಮುಧೋಳ ಅವರು ತಮ್ಮ ಕಛೇರಿಯಲ್ಲಿ ಸುದ್ದಿಗೊಷ್ಠಿ ನಡೆಸಿ ಮಾತನಾಡಿ

 

ರೋಣ ಮತಕ್ಷೇತ್ರವೂ ಶಾಂತಿ ಸೌಹಾರ್ದ ಕ್ಷೇತ್ರವಾಗಿದೆ. ಆದರೆ ಇಂತಹ ಕ್ಷೇತ್ರದಿಂದ ಆಯ್ಕೆಯಾದ ಶಾಸಕ ಜಿ.ಎಸ್.ಪಾಟೀಲರು ವಿವಾದಾತ್ಮಕ ಹೇಳಿಕೆ ನೀಡಿದ್ದು, ಒಂದು ರೀತಿ ದೇಶದಲ್ಲಿ ಅಶಾಂತಿ ವಾತಾವರಣ ನೀಡುವಂತೆ ಹೇಳಿಕೆಯು ಖಂಡನೀಯ, ಅನಂತರ ಕಾಂಗ್ರೆಸ್ ಪಕ್ಷ ಹಗರಣಗಳ ಗೂಡು ಆಗಿದೆ. ಅಂತಹ ಗೂಡಿನಲ್ಲಿನ ಶಾಸಕರು ಮತ್ತೊಬ್ಬರ ಬಗ್ಗೆ ಇಂತಹ ಶಬ್ದಗಳನ್ನು ಬಳಸಿರುವುದು ನೋಡಿದರೆ ಹಾಸ್ಯಾಸ್ಪದ ಎನ್ನಿಸುತ್ತದೆ.

ಮುಂದುವರೆದು ಇವರು ಗದಗ ಜಿಲ್ಲೆಯ ಕಾಂಗ್ರೆಸ್  ಹಿರಿಯ ನಾಯಕರು ಹಾಗೂ ಅಧ್ಯಕ್ಷರು ಇವರ ಈ ಹೇಳಿಕೆಯು ರಾಜ್ಯದಲ್ಲಿ ದಂಗೆಯನ್ನು ಎಬ್ಬಿಸುವ ಹೂನ್ನಾರವಾಗಿದೆ ಇದನ್ನು ಈ ಕೂಡಲೇ ವಾಪಸ್ ಪಡೆಯಬೇಕು ಇಲ್ಲವಾದಲ್ಲಿ ಪಕ್ಷದ ವತಿಯಿಂದ ಹೋರಾಟ ನಡೆಸಲಾಗುತ್ತದೆ ಎಂದರು.


Share News

Related Articles

Leave a Reply

Your email address will not be published. Required fields are marked *

Back to top button