ಭಾವೈಕ್ಯ ನಗರಿಯಲ್ಲಿ ಭಾವೈಕ್ಯದ ಸಂಕೇತ ಮೊಹರಂ ಆಚರಣೆ.
ಕೋಟೆನಾಡು ಗಜೇಂದ್ರಗಡ ನಗರದ ರಾಜವಾಡೆಯ ಮುಂಭಾಗದಲ್ಲಿ ನೆರೆದ ಅಲೈ ದೇವರುಗಳು
ಗಜೇಂದ್ರಗಡ::
ಮೊಹರಂ ಧರ್ಮ, ಜಾತಿಯ ಹಂಗಿಲ್ಲದ ಹಬ್ಬವಾಗಿದೆ. ಇದು ಎಲ್ಲರೂ ಭಾವೈಕ್ಯತೆ ಹಾಗೂ ಶ್ರದ್ಧಾ-ಭಕ್ತಿಯಿಂದ ಆಚರಿಸುವ ಹಬ್ಬವಾಗಿದೆ.
ಕೋಟೆನಾಡು, ಭಾವೈಕೆ ನಗರಿ ಖ್ಯಾತಿಯ ಗಜೇಂದ್ರಗಡ ಪಟ್ಟಣದಲ್ಲಿನ ರಾಜವಾಡೆಯ ಮುಂಭಾಗದಲ್ಲಿ ನಗರದಲ್ಲಿನ ಅಲೈದೇವರುಗಳು ಪಾರಂಪರಿಕವಾಗಿ ಬಂದ ಆಚರಣೆಯನ್ನು ಪಾಲಿಸುತ್ತಾ ಬಂದಿದ್ದು ಕಂಡು ಬಂದಿದೆ.
ರಾಜಮನೆತನದ ವಂಶಸ್ಥರಾದ ಯಶರಾಜ್ ಘೋರ್ಪಡೆ (ಧನಿಯರು) ಮಾತನಾಡಿ ಹುತಾತ್ಮರನ್ನು ನೆನೆಯುವ ಉದ್ದೇಶದಿಂದ ವಿಶ್ವಾದಾದ್ಯಂತ ಮೊಹರಂ ಹಬ್ಬವನ್ನು ಜಾತಿ ಭೇದವಿಲ್ಲದೇ ಶೋಕದ ಮೂಲಕ ಆಚರಿಸಲಾಗುತ್ತದೆ.
ಮೊಹರಂ ಸರ್ವ ಧರ್ಮೀಯರು ಆಚರಿಸುವ ವೈಶಿಷ್ಟ್ಯಪೂರ್ಣ ಹಬ್ಬವಾಗಿದೆ. ಅದಕ್ಕಾಗಿ ಈ ಹಬ್ಬವನ್ನು ಅಲಾಯಿ ಹಬ್ಬ ಅಂತಲೂ ಹೆಸರು. ನಮ್ಮ ವಂಸ ಪಾರಂಪರಿಕವಾಗಿ ನಗರದಲ್ಲಿನ ಎಲ್ಲಾ ಅಲೈ ದೇವರುಗಳು ವಾಡೆಯ ಬಯಲು ಜಾಗೆಯಲ್ಲಿ ಬಂದು ದೇಶದ ಜನತೆಗೆ ಒಳ್ಳೆಯದು ಆಗಲಿ, ಸುಖ ಶಾಂತಿ ನೆಮ್ಮದಿ ನೆಲೆಸಲಿ ಎಂದು ಅಂದಿನ ಕಾಲದಿಂದಲೂ ನಮ್ಮ ವಂಶಸ್ಥರು ಪಾತೆ( ಲೋಬಾನ ಹಾಕಿ) ಪ್ರಾರ್ಥನೆ ಮಾಡುತ್ತೇವೆ. ಬಳಿಕ ನಮ್ಮ ವಂಶದವರಿಂದ ಎಲ್ಲಾ ಮಸೀದಿಯವರಿಗೆ ಇನಾಮ್ ನೀಡುವುದು ವಾಡಿಕೆಯಾಗಿದೆ. ಅದರಂತೆ ನಗರದಲ್ಲಿನ ಜನರು ಸೇರಿ ಈ ಹಬ್ಬವನ್ನು ಆಚರಣೆ ಮಾಡುತ್ತೇವೆ ಎಂದರು.
ಬಳಿಕ ಪುರಸಭೆ ಸದಸ್ಯರಾದ ರಾಜೂ ಸಾಂಗ್ಲೀಕರ ಮಾತನಾಡಿ ಐದು ದಿನಗಳ ಕಾಲ ನಡೆಯುವ ಮೊಹರಂ ಹಬ್ಬದಲ್ಲಿ ಸಂದಲ ರಾತ್ರಿ, ಕತಲ್ ರಾತ್ರಿಗಳಲ್ಲಿ ಅಲೈ ದೇವರ ಸವಾರಿ ಹಾಗೂ ಪವಾಡಗಳು ನಡೆಯುತ್ತವೆ. ಕೊನೆಯ ದಿನ ಎಲ್ಲ ದೇವರುಗಳು ರಾಜವಾಡೆಯ ಮುಂಭಾಗದಲ್ಲಿ ಭೇಟಿ ಕೊಟ್ಟು ಹೊಳೆಗೆ ಹೋಗುತ್ತವೆ. ಇದು ಪಾರಂಪರಿಕವಾದ ಪದ್ದತಿಯಾಗಿದೆ ಎಂದರು.
ರಾಜವಾಡೆಯಿಂದ ನೇಮಿಸಿದ ಧನರಾಜ ಶಿಂದೆಯಿಂದ ಮೂರು ಬಾರಿ ಕರಣಿಯನ್ನು ಊದುವುದು ವಾಡಿಕೆ. ಮೊದಲನೇ ಬಾರಿಗೆ ಎಲ್ಲಾ ಮಸೀದಿಯ ದೇವರುಗಳು ಅವರ ಜಾಗದಲ್ಲಿ ನಿಲ್ಲುಲು ಸೂಚಿಸುತ್ತದೆ, ಎರಡನೇ ಬಾರಿಗೆ ರಾಜ ಮನೆತನದ ದವರು ಪಾತೆಗೆ ( ಪ್ರಾರ್ಥನೆ) ಬರುಲು ಸಿದ್ದರಿದ್ದಾರೆ ಇನ್ನೂ ಮೂರನೇ ಬಾರಿ ಊದಿದರೆ ರಾಜ ಮನೆತನದ ಗೌರವ ಮುಗಿದಿದ್ದು ಮರಳಿ ಮಸೀದಿಗೆ ತೆರಳುವ ಸೂಚನೆ ಈ ಕರಣೆ ಊದುವ ವಿಶೇಷವಾಗಿದೆ.
ಹೆಜ್ಜೆ ಹಾಕಿದ ಯುವಕರು:
ಮೊಹರಂ ಹಬ್ಬದಲ್ಲಿ ಯುವಕರು, ಮಕ್ಕಳು, ಹಿರಿಯರು ಹಲಗೆ ಸದ್ದಿಗೆ ಹೆಜ್ಜೆಗಳಿಗೆ ಹಾಕುತ್ತಾ ಇರುವುದು ವಿಶೇಷವಾಗಿದೆ. ಶಿವಾಜಿ ಪೇಟೆಯಲ್ಲಿನ ಯುವಕರು ಪ್ರತಿವರ್ಷವೂ ಕೂಡಾ ಹೆಜ್ಜೆಗಳನ್ನು ಆಡುವುದನ್ನು ನೋಡಲು ಜನ ಮುಗಿಬಿಳುತ್ತಾರೆ.
ಹುಲಿ ಕುಣಿತ:
ಮೊಹರಂ ಹಬ್ಬದಲ್ಲಿ ಹುಲಿ ಕುಣಿತ ಒಂದು ರೀತಿ ವಿಶೇಷ. ಮನೆಯಲ್ಲಿ ಯಾವುದೇ ಕಾಯಿಲೆ, ತೊಂದರೆಗಳು ಬಾರದಿರಲಿ, ಇಷ್ಟಾರ್ಥಗಳು ಸಿದ್ಧಿಸಲಿ ಎಂದು ಅಲೈ ದೇವರಿಗೆ ಹರಕೆ ಹೊತ್ತ ಮಕ್ಕಳಿಂದ ಹಿಡಿದು ಮುದುಕರು ಸಹ ಹುಲಿ ವೇಷ ಹಾಕಿಕೊಂಡು ಕುಣಿದು ಹರಕೆ ತೀರಿಸುತ್ತಾರೆ. ಅದನ್ನು ರಾಜವಾಡೆಯ ಮುಂಭಾಗದಲ್ಲಿ ನೆರೆದ ಸಾರ್ವಜನಿಕರ ಮುಂದೆ ಹುಲಿ ಕುಣಿತ ಪುಲ್ ಫೇಮಸ್ ಆಗಿತ್ತು.