ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬಗಳ ಶಾಂತಿ ಸಭೆ.
ಕೋಮು ಸೌಹಾರ್ದತೆಯಿಂದ ಹಬ್ಬ ಆಚರಣೆ ಸೂಚನೆ.
ಗಜೇಂದ್ರಗಡ::
ಪಟ್ಟಣದ ರೇವಣಸಿದ್ದೇಶ್ವರ ನಗರದಲ್ಲಿನ ಪೋಲಿಸ್ ಠಾಣೆಯಲ್ಲಿ
ಗಣೇಶ ಚತುರ್ಥಿ ಹಾಗೂ ಈದ್ ಮಿಲಾದ್ ಹಬ್ಬಗಳ ಹಿನ್ನೆಲೆಯಲ್ಲಿ
ಗಜೇಂದ್ರಗಡ ಪೋಲಿಸ್ ಠಾಣೆಯಲ್ಲಿ ಕೋಮು ಸೌಹಾರ್ದತೆಗಾಗಿ ಶಾಂತಿ ಸಭೆ ನಡೆಯಿತು.
ಶಾಂತಿ ಸಭೆಯಲ್ಲಿ ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿನ ಮುಖಂಡರುಗಳು ಸಭೆಯಲ್ಲಿ ಭಾಗಿಯಾಗಿದ್ದರು.
ಬಳಿಕ ಪೋಲಿಸ್ ಠಾಣೆಯ ಪಿ.ಎಸ್.ಐ. ಸೋಮನಗೌಡ ಗೌಡರ ಮಾತನಾಡಿ ಭಾವೈಕ್ಯ ನಗರವೆಂದು ಖ್ಯಾತಿ ಪಡೆದ ನಗರ ಇದಾಗಿದೆ. ಈ ಹಿನ್ನಲೆಯಲ್ಲಿ ಎರಡು ಹಬ್ಬಗಳನ್ನು ಕಾನೂನು ಚೌಕಟ್ಟಿನಡಿಯಲ್ಲಿ ಆಚರಣೆಗೆ ಮುಂದಾಗಬೇಕಿದೆ. ಪರಿಸರ ಸ್ನೇಹಿ ಗಣೇಶ ಹಾಗೂ ಹಸಿರು ಪಟಾಕಿಗಳನ್ನು ಬಳಕೆ ಮಾಡಬೇಕು ನಿಗಧಿತ ಸಮಯದಲ್ಲಿ,ಪುರಸಭೆ ಸೂಚಿಸಿದ ಸ್ಥಳಗಳಲ್ಲಿ ಗಣೇಶ ವಿಸರ್ಜನೆ ಮಾಡಬೇಕು. ತಪ್ಪಿದಲ್ಲಿ ಸೂಕ್ತ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುತ್ತದೆ ಎಂದರು.
ಶಾಂತಿ ಸಭೆಯಲ್ಲಿ ಪುರಸಭೆ ಅಧಿಕಾರಿ ರಾಘವೇಂದ್ರ ಮಂತಾ, ಕೆ.ಇ.ಬಿ.ಅಧಿಕಾರಿ ಮಾಮನಿ, ಪುರಸಭೆ ಸದಸ್ಯ ರಾಜೂ ಸಾಂಗ್ಲೀಕರ , ಮಲ್ಲಿಕಾರ್ಜುನ ಗಾರಗಿ, ಪ್ರಕಾಶ ಕಲ್ಗುಡಿ, ಹನಮಂತ ರಾಮಜಿ, ರಾಘವೇಂದ್ರ ರಂಗ್ರೇಜಿ ಸೇರಿದಂತೆ ಅನೇಕರು ಇದ್ದರು.