ಕ್ರಾಂತಿಸೂರ್ಯ ಜೈಭೀಮ್ ಸೇನೆ ರಾಜ್ಯ ಸಂಚಾಲಕರಾಗಿ ಪ್ರಕಾಶ ರಾಠೋಡ ನೇಮಕ
ಕ್ರಾಂತಿಸೂರ್ಯ ಜೈಭೀಮ್ ಸೇನೆ ರಾಜ್ಯ ಸಂಚಾಲಕರಾಗಿ ಪ್ರಕಾಶ ರಾಠೋಡ ನೇಮಕ
ಜನಧ್ವನಿ ಕನ್ನಡ ನ್ಯೂಸ್
ಗಜೇಂದ್ರಗಡ :
ಪಟ್ಟಣದ ನಿವಾಸಿ, ದಲಿತ ಯುವ ಮುಖಂಡ ಪ್ರಕಾಶ ರಾಠೋಡ ಇವರನ್ನು ಕ್ರಾಂತಿಸೂರ್ಯ ಜೈಭೀಮ್ ಸೇನೆ ರಾಜ್ಯ ಸಂಚಾಲಕರನ್ನಾಗಿ ರಾಜ್ಯಾಧ್ಯಕ್ಷ ಮಂಜುನಾಥ ರಾಠೋಡ ನೇಮಕ ಮಾಡಿದ್ದಾರೆ.
ತುಳಿತಕ್ಕೆ ಒಳಗಾದವರ ಪರವಾಗಿ ಸದಾಧ್ವನಿ ಎತ್ತುತಿರುವ ಕ್ರಾಂತಿಸೂರ್ಯ ಜೈಭೀಮ್ ಸೇನೆ(ರಿ)ಯು ಸಮಾಜ ಸುಧಾರಕ, ನ್ಯಾಯಶಾಸ್ತ್ರಜ್ಞ, ಅರ್ಥಶಾಸ್ತ್ರಜ್ಞ, ತೌಲನಿಕ ಧರ್ಮಗಳ ವಿದ್ವಾಂಸ ಮತ್ತು ಚಿಂತಕ ಡಾ. ಭೀಮರಾವ್ ರಾಮ್ಜೀ ಅಂಬೇಡ್ಕರ್ ರವರ ತತ್ವಸಿದ್ಧಾಂತ ಅಡಿಯಲ್ಲಿ ಶ್ರಮಿಸುತ್ತಿರುವ ಸಂಘಟನೆಯಾಗಿದ್ದು, “ಕ್ರಾಂತಿಸೂರ್ಯ ಜೈಭೀಮ್ ಸೇನೆಯ “ರಾಜ್ಯ ಸಂಚಾಲಕರನ್ನಾಗಿ” ತಮ್ಮನ್ನು ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ ಎಂದು ತಿಳಿಸಲು ಹರ್ಷಿಸುತ್ತೇನೆ ಎಂದು ತಿಳಿಸಿದ್ದಾರೆ.
ತಮಗೆ ನೀಡಿರುವ ಈ ಜವಾಬ್ದಾರಿಯನ್ನು ವಹಿಸಿಕೊಂಡು, ಸಂಘಟನೆಯ ಸೂಚನೆಯ ಮತ್ತು ಸಹಕಾರದೊಂದಿಗೆ ಸಂಘಟನೆಯ ಸಬಲೀಕರಣದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು, ಸಂಘಟನೆಯ ಶ್ರಯೋಭಿವೃದ್ಧಿಗೆ ಶ್ರಮಿಸಬೇಕೆಂದು ಕೋರುತ್ತೇನೆ. ಈ ದಿಸೆಯಲ್ಲಿ ತಮಗೆ ಎಲ್ಲ ರೀತಿಯ ಯಶಸ್ಸು ಸಿಗಲೆಂದು ಹಾರೈಸುತ್ತೇನೆ. ಬುದ್ಧ,ಬಸವ,ಅಂಬೇಡ್ಕರು ನಮಗೆ ಸದಾ ದಾರಿದೀಪವಾಗಲಿ ಎಂದು ಹೇಳಿದ್ದಾರೆ.