ವಾಣಿಜ್ಯ ನಗರಿಯಲ್ಲಿ ಸುಗಮ ಸಂಚಾರಕ್ಕೆ ಪೋಲಿಸ್ ಇಲಾಖೆಯ ಜೊತೆ ಸಾರ್ವಜನಿಕರು ಸಹಕರಿಸಿ : ಬಿ.ಎಸ್.ನೇಮಗೌಡ.
ವಾಣಿಜ್ಯ ನಗರಿಯಲ್ಲಿ ಸುಗಮ ಸಂಚಾರಕ್ಕೆ ಪೋಲಿಸ್ ಇಲಾಖೆಯ ಜೊತೆ ಸಾರ್ವಜನಿಕರು ಸಹಕರಿಸಿ : ಬಿ.ಎಸ್.ನೇಮಗೌಡ.
ಗಜೇಂದ್ರಗಡ::
ನಗರದ ರೋಣ ರಸ್ತೆಯಲ್ಲಿನ ರೇವಣಸಿದ್ದೇಶ್ವರ ನಗರದಲ್ಲಿನ ಪೋಲಿಸ್ ಠಾಣೆಯಲ್ಲಿ ಸಂಚಾರ ಮತ್ತು ರಸ್ತೆ ಸುರಕ್ಷತಾ ದೃಷ್ಟಿಯಿಂದ ತಾಲೂಕಾ ಮಟ್ಟದ ಅಧಿಕಾರಿಗಳ ಸಮನ್ವಯ ಸಭೆ ಗುರುವಾರ ನಡೆಯಿತು.
ಬಳಿಕ ಮಾಧ್ಯಮದ ಜೊತೆ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಬಿ.ಎಸ್.ನೇಮಗೌಡ ಮಾತನಾಡಿ ಗದಗ ಜಿಲ್ಲೆಯಲ್ಲಿಯೇ ಅತ್ಯಂತ ವಾಣಿಜ್ಯ ಕೇಂದ್ರವಾದ ಗಜೇಂದ್ರಗಡ ಪಟ್ಟಣದಲ್ಲಿ ಸಂಚಾರ ನಿಯಮ ಪಾಲನೆಗೆ ವಿವಿಧ ಇಲಾಖೆಯ ಅಧಿಕಾರಿಗಳ ಸಭೆ ಮಾಡಿದ್ದು, ಸಾರ್ವಜನಿಕರು ಸಹ ಪೋಲಿಸ್ ಇಲಾಖೆಯ ಜೊತೆ ಸಹಕರಿಸಬೇಕಿದೆ. ಜಿಲ್ಲಾ ಆಡಳಿತ, ತಾಲೂಕಾ ಆಡಳಿತ, ಪುರಸಭೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಗಳು ಇಲಾಖೆಯ ಅಗತ್ಯಗಳಿಗೆ ಸಹಕರಿಸಬೇಕಿದೆ. ಆಟೋ ಚಾಲಕರು, ಟೀಪೋ ಚಾಲಕರು, ಬಸ ಚಾಲಕರು ಎಲ್ಲೆಂದರಲ್ಲಿ ವಾಹನ ನಿಲುಗಡೆ ಮಾಡದೆ ನಿಗಧಿತ ಸ್ಥಳಗಳಲ್ಲಿ ನಿಲುಗಡೆ ಮಾಡಬೇಕು, ವಾಹನ ಚಲಾವಣೆಗೆ ಬೇಕಾದ ಎಲ್ಲಾ ದಾಖಲೆಗಳನ್ನು ವಾಹನದಲ್ಲಿ ಇರುವಂತೆ ನೋಡಿಕೊಳ್ಳಿ, ಇಲ್ಲವಾದಲ್ಲಿ ಅಂತಹ ವಾಹನಗಳನ್ನು ಸೀಜ್ ಮಾಡಲಾಗುತ್ತದೆ. ಟ್ರಾಪಿಕ್ ಸಿಗ್ನಲ್, ಸಿಸಿಟಿವಿ ಗಳನ್ನು ಶೀಘ್ರವಾಗಿಯೇ ದುರಸ್ತಿಗೊಳಿಸಲಾಗುತ್ತದೆ. ನಗರದಲ್ಲಿನ ವರ್ತಕರು ಕೂಡಾ ಅವರ ಅಂಗಡಿ, ಮುಗಟ್ಟುಗಳ ಮುಂದೆ ಸಿಸಿಟಿವಿಯನ್ನು ಅಳವಡಿಸಿಕೊಳ್ಳಲು ಸಭೆ ಮಾಡಲಾಗುತ್ತದೆ ಸಾರ್ವಜನಿಕರೆಲ್ಲರೂ ಇಲಾಖೆಯ ಜೊತೆ ಸಹಕರಿಸಿ ಸಂಚಾರ ನಿಯಮ ಪಾಲನೆ ಮಾಡಬೇಕಿದೆ ಎಂದರು.
ಸಮನ್ವಯ ಸಭೆಯಲ್ಲಿ ಆರ್.ಟಿ.ಓ ವಿಶಾಲ ಪವಾರ, ಗಜೇಂದ್ರಗಡ ತಾಲೂಕಾ ತಹಶಿಲ್ದಾರರ ಕಿರಣಕುಮಾರ ಕುಲಕರ್ಣಿ, ರೋಣ ಸಿ.ಪಿ.ಐ ಎಸ್.ಎಸ್.ಬಿಳಗಿ, ಗಜೇಂದ್ರಗಡ ಠಾಣೆಯ ಪಿ.ಎಸ್.ಐ ಸೋಮನಗೌಡ ಗೌಡರ, ಲೋಕೋಪಯೋಗಿ ಇಲಾಖೆಯ ಎಇಇ ಬಲವಂತರಾಯ ಮೆಹತಾ, ನ್ಯಾಷನಲ್ ಹೈವೇ ಎ.ಇ.ಇ ಎನ್.ಕೆ.ಮೂರ್ತಿ, ಇ.ಇ. ಗಿರೀಶ , ಪುರಸಭೆ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ, ತಾಲೂಕಾ ವೈದ್ಯಾಧಿಕಾರಿ ಅನಿಲ ತೋಟದ ಸೇರಿದಂತೆ ಅನೇಕರು ಇದ್ದರು.