ಆರೋಗ್ಯ ಇಲಾಖೆಕನಕಗಿರಿಕುಕನೂರುಕುಷ್ಟಗಿಕೊಪ್ಪಳಗಂಗಾವತಿಗದಗಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುಧಾರವಾಡಬಿಸಿನೆಸ್ ಕನೆಕ್ಟ್ರಾಜ್ಯ ಸುದ್ದಿರಾಷ್ಟೀಯ ಸುದ್ದಿಲೇಖನವಿಡಿಯೋಗಳುಶಿವಮೊಗ್ಗಸಿಂಧನೂರುಸೋಶಿಯಲ್ ಮೀಡಿಯಾ ಅಪ್ಡೇಟ್ಸ್ಸ್ಥಳೀಯ ಸುದ್ದಿಗಳು

ಪ್ರಿಯದರ್ಶಿನಿ ವಿವಿದ್ದೋಶ ಸಹಕಾರಿ ಸಂಘದ ಬೆಳ್ಳಿಹಬ್ಬ : ಠೇವಣಿಯಲ್ಲಿ ಆಕರ್ಷಕ ಯೋಜನೆ

Share News

ಪ್ರಿಯದರ್ಶಿನಿ ವಿವಿದ್ದೋಶ ಸಹಕಾರಿ ಸಂಘದ ಬೆಳ್ಳಿಹಬ್ಬ : ಠೇವಣಿಯಲ್ಲಿ ಆಕರ್ಷಕ ಯೋಜನೆ.

ಗಜೇಂದ್ರಗಡ:

ನಗರದ ವಿಘ್ನೇಶ್ವರ ವಿದ್ಯಾವರ್ಧಕ ಸಂಘದ ಆವರಣದಲ್ಲಿ ಪ್ರಿಯದರ್ಶಿನಿ ವಿವಿದ್ದೋಶಗಳ ಸಂಘದ ೨೫ ನೇ ವರ್ಷದ ವಾರ್ಷಿಕೋತ್ಸವ ನಡೆಯಿತು.

 

ಬಳಿಕ ಮಾಜಿ ಸಭಾಪತಿಗಳಾದ ವೀರಣ್ಣ ಮತ್ತಿಕಟ್ಟಿ ಮಾತನಾಡಿ ಯಾವುದಾದರೂ ಒಂದು ಸಂಸ್ಥೆ ಎತ್ತರಕ್ಕೆ ಬೆಳೆಯಬೇಕು ಎಂದರೆ ಅಲ್ಲಿನ‌ ಗ್ರಾಹಕರು ಹಾಗೂ ಠೇವಣಿದಾರರ ಸಿಂಹ ಪಾಲು ಇರುತ್ತದೆ. ಈ ಹಿನ್ನಲೆಯಲ್ಲಿ ನಮ್ಮ‌ ಬ್ಯಾಂಕಿನಲ್ಲಿ‌ ನಿರಂತರವಾಗಿ ವಾರ್ಷಿಕ ಡಿವಿಟೆಂಟ ಫಂಡ್ ನೀಡುತ್ತಿದೆ ಎಂದರೆ ಸಂಸ್ಥೆಗೆ ಗ್ರಾಹಕರ ಸಹಕಾರ ನೀಡಿದ್ದು ಶ್ಲಾಘನೀಯ. ವಾಣಿಜ್ಯ ನಗರದಲ್ಲಿ ೨೫ ವರ್ಷ ಪೂರೈಸಲು ಶಕ್ತಿ‌ ನೀಡಿದ್ದು ಬ್ಯಾಂಕಿನ‌ ಗ್ರಾಹಕರಿಗೆ ಸಲ್ಲುತ್ತದೆ ಎಂದರು.

ಸೊಸೈಟಿಯ ಉಪಾಧ್ಯಕ್ಷರಾದ
ಅಪ್ಪು ಮತ್ತಿಕಟ್ಟಿ ಮಾತನಾಡಿ
೨೫ ನೇ ವರ್ಷದ ಸಮಾರಂಭವನ್ನು ಅದ್ದೂರಿಯಾಗಿ ಆಚರಣೆ ಮಾಡಬೇಕಾದರೆ ಅದರ ಹಿಂದಿನ ಶ್ರಮ ನೆನಪಿಸಲೇಬೇಕು. ಗ್ರಾಹಕರು ಸಮಯಕ್ಕೆ ಸರಿಯಾಗಿ ಸಾಲವನ್ನು ತುಂಬಿ ಸಂಸ್ಥೆ ಬೆಳವಣಿಗೆ ಸಾಕ್ಷಿಯಾಗಿದ್ದಾರೆ. ಬೆಳ್ಳಿಹಬ್ಬ ಆಚರಿಸಿದ್ದೇವೆ ಎಂದರೆ ಜವಾಬ್ದಾರಿ ಹಚ್ಚಿಸಿದೆ. ಆದಷ್ಟು ಬೇಗ ಸ್ವಂತ ಕಟ್ಟಡವನ್ನು ನಿರ್ಮಾಣ ಮಾಡುತ್ತೇವೆ ಎಂದರು.

ಬಳಿಕ ಪ್ರಶಾಂತ ಮುಧೋಳ ಮಾತನಾಡಿ ಗಜೇಂದ್ರಗಡದಲ್ಲಿನ ಸೊಸೈಟಿಗಳು ಆರ್ಥಿಕವಾಗಿ ಬಲಿಷ್ಠ ಹೊಂದಿವೆ. ಸ್ಥಿರತೆ ಮತ್ತು ಬೇರೆ ಬೇರೆ ಕಡೆ ಶಾಖೆಯನ್ನು ತೆರೆದಿದ್ದು ಪ್ರಿಯದರ್ಶಿನಿ ಸೊಸೈಟಿ ಆಗಿದೆ. ಸಹಕಾರ ಸಂಘಗಳು ಕೇಂದ್ರ ಕಛೇರಿ ಬಿಟ್ಟು ಬೇರೆ ಬೇರೆ ಕಡೆ ಶಾಖೆ ತೆರೆದರೆ ಲಾಭದಾಯಕ ಸೊಸೈಟಿ ಆಗಲು ಸಾಧ್ಯವಿದೆ ಎಂದರು.

ಇದೇ ಸಂದರ್ಭದಲ್ಲಿ ನೂತನ ಪುರಸಭೆ ಅಧ್ಯಕ್ಷ ಸುಭಾಷ ಮ್ಯಾಗೇರಿ ಹಾಗೂ ಉಪಾಧ್ಯಕ್ಷರಾದ ಸವಿತಾ ಶ್ರೀಧರ ಬಿದರಳ್ಳಿಯವರಿಗೆ ಸಂಸ್ಥೆಯಿಂದ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ
ವೀರಣ್ಣ ಮತ್ತಿಕಟ್ಟಿ, ಡಾ.ಬಿ.ವ್ಹಿ. ಕಂಬಳ್ಯಾಳ, ವಿಶ್ವನಾಥಸಾ ಮೇಘರಾಜ, ಪುರಸಭೆ ಅಧ್ಯಕ್ಷ ಸುಭಾಷ ಮ್ಯಾಗೇರಿ, ಉಪಾಧ್ಯಕ್ಷೆ ಸವಿತಾ ಶ್ರೀಧರ ಬಿದರಳ್ಳಿ, ಅವಿನಾಶ ಮತ್ತಿಕಟ್ಟಿ, ಪ್ರಶಾಂತ ಮುಧೋಳ, ಪ್ರಿಯದರ್ಶಿನಿ ವಿವಿಧೋದ್ದೇಶ ಸಹಕಾರಿ ಸಂಘದ ಉಪಾಧ್ಯಕ್ಷ ಅಪ್ಪು ಮತ್ತಿಕಟ್ಟಿ, ಸದಸ್ಯರಾದ ಮಹಾಂತೇಶ ಸೊಮನಕಟ್ಟಿ , ನಾಗೇಶ ಲಕ್ಕಲಕಟ್ಟಿ , ಕಳಕಪ್ಪ ಪಟ್ಟಣಶೆಟ್ಟಿ , ಅವಿನಾಶ ಕೊಟಗಿ , ಫಕೀರಶಟ್ಟರ್ ಕುರಡಗಿ, ನಿಂಗಬಸಪ್ಪ ಮಾಸ್ತಿ ,ಶ್ರೀಮತಿ ಗಂಗಾ ಚೋಳದ , ಶ್ರೀಮತಿ ಗೀತಾ ವಾಲಿ, ಕಂಠೆಪ್ಪ ಸಂಗನಾಳ , ಲಕ್ಷ್ಮಣ ಮಾಳೋತ್ತರ ಸೇರಿದಂತೆ ಅನೇಕರು ಇದ್ದರು.


Share News

Related Articles

Leave a Reply

Your email address will not be published. Required fields are marked *

Back to top button