ಲೇಖನಅಂತಾರಾಷ್ಟ್ರೀಯಉದ್ಯೋಗ ವಾರ್ತೆಗಳುಉಪಯುಕ್ತ ಮಾಹಿತಿಗಳುಗದಗಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುಬಿಸಿನೆಸ್ ಕನೆಕ್ಟ್ರಾಜಕೀಯರಾಜ್ಯ ಸುದ್ದಿರಾಷ್ಟೀಯ ಸುದ್ದಿವಿಡಿಯೋಗಳುಸೋಶಿಯಲ್ ಮೀಡಿಯಾ ಅಪ್ಡೇಟ್ಸ್ಸ್ಥಳೀಯ ಸುದ್ದಿಗಳು

Janadhwani Kannada special : ಕಡು ಬಡತನದಿಂದ ಬೆಳೆದ “ಯಲ್ಲಪ್ಪ ಬಂಕದ”ಗೆ ಒಲಿದ ರಾಷ್ಟ್ರೀಯ ಅಂಬೇಡ್ಕರ್ ಫೆಲೋಶಿಫ್ ಪ್ರಶಸ್ತಿ..!

ಇವರು ಮೂಲತಃ ಗಜೇಂದ್ರಗಡದಲ್ಲಿಮ ನಿವಾಸಿಯಾಗಿದ್ದು, ಭೋವಿ ಸಮಾಜದ ನಾಗಪ್ಪ ದೇವಮ್ಮ ದಂಪತಿಗಳ ಹಿರಿಯ ಮಗನಾಗಿ ಜನಸಿದ್ದಾರೆ. ಇವರು ಕಡು ಬಡತನ ಕುಟುಂಬದಿAದ ಇದ್ದ ಕಾರಣ ತಮ್ಮ ಶಿಕ್ಷಣವನ್ನು 7ನೇತರಗತಿಗೆ ಮೊಟಕುಗೊಳಿಸಿ, ೧೯೯೦ರಲ್ಲಿ ತಂದೆ ತಾಯಿಯವರ ಅಗಲಿಕೆಯಿಂದ ಮನೆತನದ ಜವಾಬ್ದಾರಿಯನ್ನು ತಮ್ಮ ಹೆಗಲ ಮೇಲೆ ಹಾಕಿ ಉಳಿದ ೩ ಜನ ಸಹೋದರರು ಹಾಗೂ ಒಬ್ಬ ತಂಗಿಯರೊAದಿಗೆ ಜೀವನ ಸಾಗಿದ್ದಾರೆ.

Share News

Janadhwani News Story  ಜನಧ್ವನಿ ಕನ್ನಡ ವಿಶೇಷ : ಬಡತನವಿದ್ದರು ಅಂಜದೆ ಅಲುಕದೆ ಸಮಾಜದ ನಿಂದನೆಗಳಿಗೆ ಸವಾಲು ಹಾಕಿ ಜೀವನದ ಪ್ರತಿ ಹಂತದಲ್ಲೂ ಕಷ್ಟಪಟ್ಟು ದುಡಿದು ಮನೆತನವನ್ನು ನಿರ್ವಹಣೆ ಮಾಡಿ, ನಿಂದಿಸಿದ ಸಮಾಜಕ್ಕೆ ಅಧ್ಯಕ್ಷರಾಗಿ ಸಮಾಜ ಸೇವೆಯನ್ನು ಮಾಡಿ ಭೋವಿ ಸಮಾಜವನ್ನು ಕಟ್ಟಿ ಬೆಳೆಸಿದ ಶ್ರೀ ಯಲಪ್ಪ ಬಂಕದರವರು, ಬಂಕದ ಮಾತ್ರ ಓದಿದ್ದು 7ನೇ ತರಗತಿ., ಆದ್ರೆ ಅವರ ಛಲ,ಬಲದಿಂದ ಪ್ರಸ್ತುತ ಗುತ್ತಿಗೆದಾರರಾಗಿ ಸಮಾಜ ಸೇವೆಯನ್ನು ಮಾಡುತ್ತಾ ಬಂದಿದ್ದಾರೆ. ಇವ್ರ ಸಾಧನೆ ಗಮನಿಸಿದ ರಾಷ್ಟ್ರೀಯ ದಲಿತ ಅಕಾಡೆಮಿಯು ದೆಹಲಿಯಲ್ಲಿ ನಡೆಯಲಿರುವ ದೇಶದ ಅತ್ಯುನತ ಸಾಲಿನಲ್ಲಿರುವ ರಾಷ್ಟ್ರೀಯ ಅಂಬೇಡ್ಕರ ಫೆಲೋಶಿಫ್ ಪ್ರಶಸ್ತಿ ನೀಡಿ ಗೌರವಿಸಿದ ಹಿನ್ನಲೆ ತನ್ನಮಿತ್ಯ ಈ ಲೇಖನ.

ಬಾಲ್ಯ ಜೀವನ:
ಇವರು ಮೂಲತಃ ಗಜೇಂದ್ರಗಡದಲ್ಲಿಮ ನಿವಾಸಿಯಾಗಿದ್ದು, ಭೋವಿ ಸಮಾಜದ ನಾಗಪ್ಪ ದೇವಮ್ಮ ದಂಪತಿಗಳ ಹಿರಿಯ ಮಗನಾಗಿ ಜನಸಿದ್ದಾರೆ. ಇವರು ಕಡು ಬಡತನ ಕುಟುಂಬದಿAದ ಇದ್ದ ಕಾರಣ ತಮ್ಮ ಶಿಕ್ಷಣವನ್ನು 7ನೇತರಗತಿಗೆ ಮೊಟಕುಗೊಳಿಸಿ, 1990ರಲ್ಲಿ ತಂದೆ-ತಾಯಿಯ ಅಗಲಿಕೆಯಿಂದ ಮನೆತನದ ಜವಾಬ್ದಾರಿಯನ್ನು ತಮ್ಮ ಹೆಗಲ ಮೇಲೆ ಹಾಕಿ ಉಳಿದ 3 ಜನ ಸಹೋದರರು ಹಾಗೂ ಒಬ್ಬ ತಂಗಿಯರೊಂದಿಗೆ ಜೀವನ ಸಾಗಿದ್ದಾರೆ.

ಕಡುಬಡತನಕ್ಕೆ ಸವಾಲು:
ಬಡತನ ಬಹಳ ಕೆಟ್ಟದ್ದು, ಯಾರಿಗಾದರೂ ಏನಾದರು ಬರಲಿ ಬಡತನ ಬರಬಾರದು ಎನ್ನುವ ವಾಣಿಯು ಎಲ್ಲೋ ಇವರಿಗೆ ಹತ್ತಿರ ಅನಿಸುತ್ತೆ. ಆದರೆ ಆ ಮಾತನ್ನು ಶ್ರೀಯುತ ಯಲ್ಲಪ್ಪ ಬಂಕದ ಅವರು ಸುಳ್ಳಾಗಿಸಿದ್ದಾರೆ. ಜೀವನೋಪಾಯಕ್ಕೆ ಅವರು ಮಾಡಿರದ ಕೆಲಸವಿಲ್ಲ, ಆಡು ಮುಟ್ಟದ ಸೊಪ್ಪಿಲ್ಲ, ಯಲ್ಲಪ್ಪ ಬಂಕದ ಮಾಡದ ಕೆಲಸವಿಲ್ಲ. ಬಾಲ್ಯದಲ್ಲಿಯೇ ಹರಕು ಬಟ್ಟೆ ಧರಿಸಿ ಮುಂಜಾನೆ ಬ್ರೇಡಗಳನ್ನು ಮಾರಿ ನಂತರ ಹಳ್ಳಿಗಳ್ಳಿಗೆ ಹೆಗಲಮೇ ಐಸ್ ಕ್ರೀಮ್ ಡಬ್ಬಿಯನ್ನು ಹೊತ್ತು ಜೀವನ ಸಾಗಿಸಿ, ನಂತರ ಸಾಯಂಕಾಲ ರಾತ್ರಿ ವೇಳೆಯಲ್ಲಿ ಚಲನಚಿತ್ರ ಮಂದಿರಗಳಲ್ಲಿ ಪೇಪರಮೆಂಟ್,ಕುಕಲು ತಿಂಡಿಗಳನ್ನು ಮಾರಿ ಜೀವನ ಸಾಗಿಸಬೇಕಾದರೆ ಕುಟುಂಬ ನಿರ್ವಹಣೆಗೆ ಅದುಕೂಡಾ ಸಾಕಾಗಲಿಲ್ಲ. ನಂತರ ಕಂಬಿಣ್ಣವನ್ನು ತುಂಬಿ ಜೀವನ ಸಾಗಿಸಿ ಬಡತನವನ್ನು ಹೊಗಲಾಡಿಸಿದರು. ಮುಂದೆ ಬೆಳೆದ ಹಾಗೆ ಕಷ್ಟಪಟ್ಟು ಕಾರ್ಮಿಕರಾಗಿ, ಕಟ್ಟಡ ನಿರ್ಮಾಣ ಕಾರ್ಯದಲ್ಲಿ ತೊಡಗಿ ಅನೇಕರ ಕೈಗಳಲ್ಲಿ ಕೆಲಸ ಮಾಡಿ,ನಂತರ ತಾವೇ ಸ್ವಂತ ಕಟ್ಟಡ ನಿರ್ಮಾಣ ಕಾರ್ಯಕ್ಕೆ ಮುಂದಾಗಿ, ಪ್ರಸ್ತುತ ಗುತ್ತಿಗೆದಾರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಬೋವಿ ಸಮಾಜಕ್ಕೆ ಅನೇಕ ಕೊಡುಗೆ:
ಕೋಟೆನಾಡಿನಲ್ಲಿ ಬೋವಿ ಸಮಾಜವೂ ಒಗ್ಗಟ್ಟಿನ ಸಮಾಜಕ್ಕೆ ಹೆಸರುವಾಸಿಯಾಗಿದೆ.ಬೋವಿ ಸಮಾಜಕ್ಕೆ ಯಲ್ಲಪ್ಪ ಬಂಕದ ಅವರು ಅಧ್ಯಕ್ಷರಾಗಿ ಸಮಾಜದ ಸೇವೆಯನ್ನು ಕೂಡಾ ಮಾಡುತ್ತಾ ಬಂದಿದ್ದಾರೆ.  1994ರಿಂದ ಸಮಾಜ ಸೇವೆಯನ್ನು ಆರಂಭಿಸಿದ್ದಾರೆ. 2 ಬಾರಿ ಭೋವಿ ಸಮಾಜದ ಅಧ್ಯಕ್ಷರಾಗಿ ಕಾರ್ಯ ನಿವಹಿ ಅನೇಕ ಸಾಮಾಜಿಕ, ಸಮಾಜದಲ್ಲಿನ ಕೆಲ ಸಮಸ್ಯಗಳನ್ನು ಪರಿಹರಿಸಿ, ಸಮಾಜವನ್ನು ಉತ್ತಮ ರೀತಿಯಲ್ಲಿ ಮುನ್ನೆಡಿಸಿಕೊಂಡು ಬಂದಿದ್ದಾರೆ.ಇವರು ಸಮಾಜದ ಅಧ್ಯಕ್ಷರಾದ ಮೇಲೆ ಪುರಸಭೆ ಮುಂದೆ ಸಮಾಜದವರ ಸಹಕಾರ ಪಡೆದು 2 ಅಂಗಡಿಗಳನ್ನು, ಒಂದು ಕೋಚಿಂಗ್ ಕ್ಲಾಸ್ ಗಳನ್ನು ನಂತರ 2012 ರಲ್ಲಿ ದುರ್ಗಾದೇವಿ ಟ್ರಸ್ಟ ಕಮೀಟಿ ನಿರ್ಮಿಸಿ ದೇವಾಲಯಕ್ಕೆ ಅನೂಕೂಲಕರವಾಗಲಿ ಎಂದು 5 ಅಂಗಡಿಗಳನ್ನು ನಿರ್ಮಿಸಿ. ದೇವಾಲಯಕ್ಕೆ ಶಾಶ್ವತವಾಗಿ ಮೂಲ ಆಧಾಯ ಬರುವಂತೆ ಮಾಡಿದ್ದು ಇವರ ಅವಧಿಯಲ್ಲಿ, ಇನ್ನೂ ಬೋವಿ ಸಮಾಜದ ಕೆಲ ಆಸ್ತಿಗಳು ಪುರಸಭೆಯಲ್ಲಿ ನೊಂದಣಿಯಿಲ್ಲದೆ ಇದದ್ದವು ಅಂತಹವುಗಳನ್ನು ಗುರುತಿಸಿ ಅವುಗಳ ನೊಂದಣಿ ಕಾರ್ಯ ಮಾಡಿಸಿದ್ದು ಹೆಮ್ಮೆಯ ವಿಷಯ.
ಇವರ ಈ ನಾಯಕತ್ವ ಗುಣಗಳನ್ನು ಅರಿತ ಸಮಾಜವೂ ಶ್ರೀ ಸಿದ್ದರಾಮೇಶ್ವರ ಕಟ್ಟಡ ಕಾರ್ಮಿಕರ ಸಂಘಟನಗೆ ಅಧ್ಯಕ್ಷರಾಗಿ ಆಯ್ಕೆ ಮಾಡಿ ಕಾರ್ಮಿಕರ ಅನೇಕ ಸಮಸ್ಯೆಗಳನ್ನು ಪರಿಹರಿಸಿ, ಸರ್ಕಾರದಿಂದ ಸಲ್ಲಬೇಕಾದ ಸಕಲ ಸೌಲಭ್ಯಗಳನ್ನು ಕಾರ್ಮಿಕರಿಗೆ ಕೊಡಿಸಿದ್ದಾರೆ. ಪ್ರಸ್ತುತವಾಗಿ ಶ್ರೀ ದುರ್ಗಾದೇವಿ ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷರಾಗಿದ್ದಾರೆ.ಇವರ ಇಂತಹ ಸಾಮಾಜಿಕ, ಧಾರ್ಮಿಕ ಸೇವೆಯನ್ನು ಪರಿಗಣಸಿ 2008ರಲ್ಲಿ ಅಖಿಲ ಭಾರತ ಭೋವಿ ವಡ್ಡರ ಮಹಾಸಭಾದ ಉತ್ತರ ಕರ್ನಾಟಕದ ಅಧ್ಯಕ್ಷರಾಗಿ ಈ ಬಾಗದಲ್ಲಿ ಸಮಾಜವನ್ನು ಸಂಘಟಿಸುವ ಕೆಲಸ ಮಾಡಿದ್ದಾರೆ.

ರಾಜಕೀಯದಲ್ಲಿ ಸಕ್ರೀಯತೆ:
1995ರಲ್ಲಿ ಇವರು ರಾಜಕೀಯ ಜೀವನಕ್ಕೆ ಪಾದಾರ್ಪಣೆಯನ್ನು ಕಾಂಗ್ರೇಸ್ ಪಕ್ಷದಿಂದ ಮಾಡುತ್ತಾರೆ. ¥ಪಕ್ಷದಲ್ಲಿ ಸಕ್ರೀಯರಾಗಿ ಕಾರ್ಯ ನಿರ್ವಹಿಸಿದ್ದರು ಕೂಡಾ ಪಕ್ಷವೂ ಇವರಿಗೆ ಪುರಸಭೆಯ ಚುನಾವಣೆಯಲ್ಲಿ ಟಿಕೆಟ್ ನೀಡದೆ ಇದ್ದಾಗ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕೆ ಇಳಿದು ಕೆಲ ಅಂತರದಲ್ಲಿ ಸೋತರು, ಎದೆಗುಂದದೆ ಮತ್ತೇ ಕಾಂಗ್ರೇಸ್ ಪಕ್ಷಕ್ಕೆ ನಿಷ್ಠಯಿಂದ ಸೇವೆ ಸಲ್ಲಿಸಲು ಪ್ರಾರಂಭಿಸಿದರು. ನಂತರ ಕೆಲ ಕಾಲ ಬಿಜೆಪಿಗೆ ಸೇರಿ ಅಲ್ಲಿಯೂ ತಮ್ಮ ಪಕ್ಷ ನಿಷ್ಠತೆಯನ್ನು ಮೆರೆದರು. ಬಿಜೆಪಿಯಲ್ಲಿಯೂ ಕೂಡಾ ಇವರಿಗೆ ಟಿಕೆಟ್ ಸಿಗದೆ ಇದ್ದಾಗ. ಮತ್ತೇ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿ ೩೦ ಮತಗಳಿಂದ ಸೋತು. ಸಧ್ಯ ಕಾಂಗ್ರೇಸ್ ಪಕ್ಷದಲ್ಲಿ ತಾಲೂಕಾ ಎಸ್.ಸಿ.ಘಟಕದ ಅಧ್ಯಕ್ಷರಾಗಿ, ಆಶ್ರಯ ಸಮಿತಿಯ ಸದಸ್ಯರಾಗಿ ರಾಜಕೀಯದಲ್ಲಿ ಸಕ್ರೀಯರಾಗಿದ್ದಾರೆ.

ಇವರು ಕೇವಲ ರಾಜಕೀಯ, ಸಾಮಾಜಿಕ,ಧಾರ್ಮಿಕ ಕ್ಷೇತ್ರಗಳಿಗೆ ಸೀಮಿತರಾಗದೆ ರಂಗಭೂಮಿಯಲ್ಲಿಯೂ ಮಿಚ್ಚಿದ್ದಾರೆ. ಪತ್ರಿವರ್ಷವೂ ಗ್ರಾಮದೇವತೆ ಹಿರೇ ದುರ್ಗಾದೇವಿ ಜಾತ್ರಾಮಹೋತ್ಸವದಲ್ಲಿ ನಾಟಕಗಳಲ್ಲಿ ಅಭಿನಯಸಿದ್ದಾರೆ.ಸು೫ಕ್ಕೂ ಹೆಚ್ಚು ನಾಟಕಗಳಲ್ಲಿ ಪಾತ್ರಗಳನ್ನು ಮಾಡಿ ರಂಗಬೂಮಿಯಲ್ಲಿಯೂ ಕೂಡಾ ತಮ್ಮ ಸೇವೆಯನ್ನು ಮಾಡಿದ್ದಾರೆ.
ಇವರ ಈ ಎಲ್ಲಾ ಸೇವೆಗಳನ್ನು ಗಮನಿಸಿ ಇವರಿಗರ ಅನೇಕ ಸಂಘ ಸಂಸ್ಥೆಗಳು ಅನೇಕ ಪ್ರಶಸ್ತಿ, ಗೌರವ ಸನ್ಮಾನಿಸಿದೆ. ಇದೀಗ ಡಿಸೆಂಬರ 8.9ರಂದು ದೆಹಲಿಯಲ್ಲಿ ನಡೆಯುವ ರಾಷ್ಟ್ರೀಯ ಸಮಾರಂಭದಲ್ಲಿ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ರಾಷ್ಟ್ರೀಯ ಫೆಲೋಶಿಪ್ ಪ್ರಶಸ್ತಿ ನೀಡಿ ಗೌರವಿಸುತ್ತಿದೆ.

ಲೇಖನ :ಸೀತಲ ಓಲೇಕಾರ (ಸಂಪಾದಕರು, ಜನಧ್ವನಿ ಕನ್ನಡ ಸುದ್ದಿವಾಹಿನಿ)


Share News

Related Articles

Leave a Reply

Your email address will not be published. Required fields are marked *

Back to top button