ಸದೃಡ ದೇಹಕ್ಕೆ ಕ್ರೀಡೆ ಅತ್ಯವಶ್ಯಕ : ಕಾಲೇಶ ವನ್ನಾಲ
ಸದೃಡ ದೇಹಕ್ಕೆ ಕ್ರೀಡೆ ಅತ್ಯವಶ್ಯಕ : ಕಾಲೇಶ ವನ್ನಾಲ.
ಗಜೇಂದ್ರಗಡ:
ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ ೨ ರಲ್ಲಿ ಉತ್ತರವಲಯ ಕ್ಲಸ್ಟರ್ ಮಟ್ಟದ ಕ್ರೀಡಾಕೂಟ ಶುಕ್ರವಾರ ನಡೆಯಿತು.
ಕ್ರೀಡಾಕೂಟವನ್ನು ಉತ್ತರ ಮಲಯದ ಸಿ.ಆರ್.ಪಿ.ಕಾಲೇಶ ವನ್ನಾಲ ಉದ್ಘಾಟಿಸಿ ಮಾತನಾಡಿ ವಿಧ್ಯಾರ್ಥಿ ದೆಸೆಯಲ್ಲಿ ಮಕ್ಕಳು ಸದೃಢ ದೇಹ ಬೆಳೆಸಲು ಕ್ರೀಡೆಯು ಅತ್ಯವಶ್ಯಕವಾಗಿ ಬೇಕಾಗಿದೆ. ಆಧುನಿಕ ಯುಗದಲ್ಲಿ ಕ್ರೀಡೆಯು ಸಹ ಮಹತ್ವವನ್ನು ಪಡೆದುಕೊಳ್ಳುತ್ತಿದ್ದು, ಓದಿನ ಜೊತೆಗೆ ಕ್ರೀಡೆಗಳಿಗೂ ಮಹತ್ವ ನೀಡಿ ಎಂದರು.
ಈ ಕಾರ್ಯಕ್ರಮದಲ್ಲಿ ಉತ್ತರ ವಲಯದಲ್ಲಿನ ಶಾಲೆಯ ಮುದ್ದು ಮಕ್ಕಳು ಹಾಗೂ ಅನೇಕ ಗಣ್ಯರು ಭಾಗವಹಿಸಿದ್ದರು.
ಶಾಲೆಯ ಎಸ್.ಡಿ.ಎಮ್.ಸಿ.ಅಧ್ಯಕ್ಷ ಕೆ.ಎಮ್.ಹಣಗಿ ಕ್ರೀಡಾ ಧ್ವಜಾರೋಹಣ ನೆರವರಿಸಿದರು.
ದೈಹಿಕ ಶಿಕ್ಷಕ ಎಸ್.ಟಿ.ಪೂಜಾರ ನೇತೃತ್ವದಲ್ಲಿ ಕ್ರೀಡಾ ಜ್ಯೋತಿ ಆಗಮಿಸಿ ಪುರಸಭೆ ಸದ್ಯಸಿನಿ ಸುಜಾತಾಬಾಯಿ ಶಿಂಗ್ರೀ ಸ್ವೀಕರಿಸಿದರು.
ಬಳಿಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ ೨ ರ ದೈಹಿಕ ಶಿಕ್ಷಕ ಎಚ್.ಆರ್.ನಿಡಗುಂದಿ ಪ್ರತಿಜ್ಞಾ ವಿಧಿ ಮಕ್ಕಳಿಗೆ ಬೋಧಿಸಲಾಯಿತು.
ಗಜೇಂದ್ರಗಡ ತಾಲೂಕಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ಸರಗಣಾಚಾರಿ ಮಾತನಾಡಿ ಕ್ರೀಡೆ ಆಡಲು ಸದೃಢ ದೇಹ ಅವಶ್ಯಕ ಹಾಗಾಗಿ ನಾವು ಯೋಗದೊಂದಿಗೆ ದೇಹ ದಂಡನೆ ಮಾಡಲೇಬೇಕು ಮಕ್ಕಳಿಗೆ ಆಟ ಅಂದಾಗ ಎಲ್ಲಿಲ್ಲದ ಸಂತೋಷ ಯಾಕೆಂದರೆ ಕ್ರೀಡೆ ಎನ್ನುವುದು ಸ್ನೇಹಿತರೊಂದಿಗೆ ಆಟ ವಾಡಿ ಸಂತಸದಿಂದ ಇರುವ ಗಳಿಗೆ ಹಾಗಾಗಿ ಮಕ್ಕಳ ಆಟಕ್ಕೆ ಮಹತ್ವ ನೀಡುವಷ್ಟು ಶಿಕ್ಷಣಕ್ಕೆ ನೀಡಬೇಕು ಎಂದರು.
ಸರಕಾರಿ ಹಿರೆಯ ಪ್ರಾಥಮಿಕ ಶಾಲೆ ನಂ 2 ಮುಖ್ಯೋಪಾಧ್ಯಾಯರಾದ ಎಸ್.ಆರ್. ಅಂಗಡಿ ಮಾತನಾಡಿ ಕ್ರಿಡೆಯಲ್ಲಿ ಸಾಧನೆ ಮಾಡಿದ ಕ್ರೀಡಾ ಸಾಧಕರ ಕಥೆಗಳನ್ನು ಮಕ್ಕಳಿಗೆ ತಿಳಿಸಿ ಕ್ರೀಡೆಯ ಮಹತ್ವದ ಬಗ್ಗೆ ಮಾಹಿತಿ ನೀಡಿದರು.
ಬಳಿಕ ಸರ್ಕಾರಿ ನೌಕರ ಸಂಘದ ಖಜಾಂಚಿ ಎಸ್ ಎಸ್ ಡೊಳ್ಳಿನ, ಮಾತನಾಡಿದರು.
ಇದೇ ಸಂದರ್ಭದಲ್ಲಿ ದಕ್ಷಿಣ ವಲಯದ ಸಿ.ಆರ್.ಪಿ.ಆರ್.ಜಿ. ಮ್ಯಾಂಕಲ್, ಬಸವರಾಜ ಅಣ್ಣಿಗೇರ, ಬಿ.ಎಮ್.ಹಿರೇಮಠ, ಟಿ.ಎಸ್.ಚಳಮರದ, ಸುಮಂಗಲಾ ಪಾಟೀಲಣ ಸುರೇಶ ಶಿಂದೆ, ರವಿ ವರಗ್ಗಪ್ಪನವರ, ವೆಂಕಟೇಶ ಕಾಳೂರ, ಮಂಜು ಗೂಡೂರ,ರೇಣುಕಾ ರಾಯಬಾಗಿ, ರೂಪಾ ಆರೇರ, ಕವಿತಾ ಲಾಳಿ, ಮೌಲಾನಬಿ ಮಾಲ್ದಾರ, ಎಸ್.ಎಸ್.ಡೊಳ್ಳಿನ,ಎಸ್.ಕೆ.ಮಠದ, ಎಸ್.ಎಸ್.ಸೊಟ್ಟಬಸಪ್ಪನವರ, ಮುಕುಂದ ಭಗವತಿ, ಪಾತೀಮಾ ಬೇಗಂ ಮುಜಾವರ, ಬಸವರಾಜ ಹೊಸಗೌಡ್ರ, ಸುಜಾತ ದಿವಾಣದ, ನಾಗರಾಜ ಬಾದನಟ್ಟಿ, ಬಸವರಾಜ ಗುಳಗುಳಿ ಸೇರಿದಂತೆ ಅನೇಕರು ಇದ್ದರು.