ರಾಜ್ಯ ಸುದ್ದಿಅಂತಾರಾಷ್ಟ್ರೀಯಉದ್ಯೋಗ ವಾರ್ತೆಗಳುಉಪಯುಕ್ತ ಮಾಹಿತಿಗಳುಗದಗಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುಬಾಗಲಕೋಟೆರಾಷ್ಟೀಯ ಸುದ್ದಿಸ್ಥಳೀಯ ಸುದ್ದಿಗಳು

ವಾಣಿಜ್ಯ ಆಹಾರ ಮೇಳಗಳು ವಿದ್ಯಾರ್ಥಿಗಳಿಗೆ ದಾರಿದೀಪ: ಪ್ರೊ. ವಿಜಯಕುಮಾರ ಮಾಲಗಿತ್ತಿ..!

9 ತಂಡಗಳ 34 ವಿದ್ಯಾರ್ಥಿಗಳು ಭಾಗವಹಿಸಿದ್ದರು, ಲಘು ಆರೋಗ್ಯಕರ ಆಹಾರ ಸಾಮಾಗ್ರಿಗಳನ್ನು ತಂದು ವಿದ್ಯಾರ್ಥಿಗಳೇ ಆಹಾರ ಸಿದ್ದಪಡಿಸಿ ಉಪನ್ಯಾಸಕರ ಸಹಾಯದೊಂದಿಗೆ ಕಾರ್ಯಕ್ರಮ ಆಯೋಜಿಸಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

Share News

JanadhwaniNewsGajendrgad :ಗಜೇಂದ್ರಗಡ ಪಟ್ಟಣದ ಜಗದ್ಗುರು ತೋಂಟದಾರ್ಯ ಪಿ.ಯು. ಕಾಲೇಜಿನಲ್ಲಿ ವಾಣಿಜ್ಯ ಆಹಾರ ಮೇಳ – 2025 ಯಶಸ್ವಿಯಾಗಿ ಜರುಗಿತು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪ್ರೊ.ವಿಜಯಕುಮಾರ ಮಾಲಗಿತ್ತಿ “ಮೇಳಗಳು ವಿದ್ಯಾರ್ಥಿಗಳಲ್ಲಿ ಮಾರುಕಟ್ಟೆಗಳ ಮಹತ್ವ ತಿಳಿಸುತ್ತವೆ ಗ್ರಾಹಕರ ಆಕರ್ಷಣೆ, ಸ್ಥಳದ ಆಯ್ಕೆ ಹಾಗೂ ಗ್ರಾಹಕ – ಮಾಲೀಕರ ಸಂಬಂಧ ಹೇಗಿರಬೇಕು ಎನ್ನುವುದನ್ನು ಇಂತಹ ವಿದ್ಯಾರ್ಥಿಸ್ನೇಹಿ ಮೇಳಗಳ ಮೂಲಕ ಎಲ್ಲರೂ ಕಲಿಯಬಹುದು ಎಂದರು”

ಒಟ್ಟು 9 ತಂಡಗಳ 34 ವಿದ್ಯಾರ್ಥಿಗಳು ಭಾಗವಹಿಸಿದ್ದರು, ಲಘು ಆರೋಗ್ಯಕರ ಆಹಾರ ಸಾಮಾಗ್ರಿಗಳನ್ನು ತಂದು ವಿದ್ಯಾರ್ಥಿಗಳೇ ಆಹಾರ ಸಿದ್ದಪಡಿಸಿ ಉಪನ್ಯಾಸಕರ ಸಹಾಯದೊಂದಿಗೆ ಕಾರ್ಯಕ್ರಮ ಆಯೋಜಿಸಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

ಕಾಲೇಜಿನ ಪ್ರಾಂಶುಪಾಲರಾದ ಸಂಗಮೇಶ ಬಾಗೂರ, ಉಪನ್ಯಾಸಕರಾದ ಹುತ್ತಪ್ಪ ಮಾರನಬಸರಿ, ಅಭಿಲಾಷಾ ಗಂಜಿಹಾಳ, ಅಶೋಕ ಅಂಗಡಿ, ಶೃತಿ ನಡಕಟ್ಟಿನ, ಆನಂದ ಜೂಚನಿ, ಶರಣು ಅಂಗಡಿ, ಮಲ್ಲನಗೌಡ ಗೌಡರ, ಪ್ರಶಾಂತ, ಸಿದ್ರಾಮೇಶ ಕರಬಾಶೆಟ್ಟರ, ಹನಮಂತ ನಡಕಟ್ಟಿನ, ಕವಿತಾ ಪಾಟೀಲ, ಸುಶೀಲಾ ಮುಂಡರಗಿ, ಫಾತಿಮಾ ವಣಗೇರಿ, ಕರುಣಾ ಜಕ್ಕಲಿ, ಮಾಧುರಿ ನಾಡಗೇರಿ, ಶಿವಕುಮಾರ ಕೊಸಗಿ, ಪ್ರವೀಣ ಚಿತ್ರಗಾರ, ಈರಣ್ಣ ಹಾಗೂ ಮಹಾವಿದ್ಯಾಲಯದ ಭೋದಕೇತರ ಸಿಬ್ಬಂದಿ ಉಪಸ್ಥಿತರಿದ್ದರು.


Share News

Related Articles

Leave a Reply

Your email address will not be published. Required fields are marked *

Back to top button