
ಗಂಗೋತ್ರಿ ಪಬ್ಲಿಕ್ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ : ಕೃಷ್ಣ ರಾಧೆಯ ವೇಷಭೂಷಣಗಳಲ್ಲಿ ಗಮನ ಸೆಳೆದ ಮಕ್ಕಳು.
ಗಂಗೋತ್ರಿ ಪಬ್ಲಿಕ್ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಸಂಭ್ರಮ : ಕೃಷ್ಣ ರಾಧೆಯ ವೇಷಭೂಷಣಗಳಲ್ಲಿ ಗಮನ ಸೆಳೆದ ಮಕ್ಕಳು.
ಗಜೇಂದ್ರಗಡ:
ನಗರದ ಪ್ರತಿಷ್ಠಿತ ಗಂಗೋತ್ರಿ ಪಬ್ಲಿಕ್ ಶಾಲೆಯಲ್ಲಿ ಮಕ್ಕಳಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಲಾಯಿತು.
ಪುಟಾಣಿ ಮಕ್ಕಳು ಕೃಷ್ಣ ರಾಧೆ ವೇಷಭೂಷಣ ತೊಟ್ಟು ಸಂಭ್ರಮಿಸಿದರು. ಮುದ್ದು ಮಕ್ಕಳ ಭಾಷಣ, ಸಂಭಾಷಣೆ , ಛದ್ಮವೇಷ ಮುಂತಾದ ಕಾರ್ಯಕ್ರಮಗಳು ನೆರದಿದ್ದ ಪೋಷಕರ ಮನಸೊರೆಗೊಂಡವು.
ಬಳಿಕ ಕಾರ್ಯಕ್ರಮದ ಉದ್ಘಾಟಕರಾದ ತಾಲೂಕಾ ವೈದ್ಯಾಧಿಕಾರಿ
ಅನಿಲಕುಮಾರ ತೊಟದ ಮಾತನಾಡಿ ಮುದ್ದು ಮಕ್ಕಳ ರಾಧೆ ಹಾಗೂ ಕೃಷ್ಣನ ವೇಷಧಾರಿಗಳಾಗಿ ಬಂದಾಗ ನೋಡಲು ಬಲು ಚಂದ ಇಂತಹ ಕಾರ್ಯಕ್ರಮಗಳನ್ನು ಗಂಗೋತ್ರಿ ಶಾಲೆಯಲ್ಲಿ ಜನ್ಮಾಷ್ಟಮಿಯನ್ನು ಕೇವಲ ಒಂದು ಧರ್ಮಕ್ಕೆ ಸೀಮಿತವೆಂದು ನೋಡದೆ ಎಲ್ಲಾ ಧರ್ಮದ ಮಕ್ಕಳು ಪಾಲ್ಗೊಂಡಿದ್ದಾರೆ . ನಾವೇಲ್ಲ ಒಂದೇ ಎನ್ನುವ ಭಾವನೆಯಿಂದ ಒಂದು ಕಾರ್ಯಕ್ರಮ ಹಮ್ಮಿಕೊಂಡಿರುವುದು ತುಂಬಾ ಸಂತಸದ ವಿಷಯ ಎಂದರು.
ಬಳಿಕ ಸಂಸ್ಥೆಯ ಕಾರ್ಯದರ್ಶಿ
ಅಪ್ಪು ಮತ್ತಿಕಟ್ಟಿ ಮಾತನಾಡಿ ಶಾಲೆಯಲ್ಲಿನ ನರ್ಸರಿ, ಎಲ್ ಕೆ ಜಿ , ಯುಕೆಜಿ ಮುದ್ದು ಮಕ್ಕಳು ಶ್ರೀಕೃಷ್ಣ ರಾಧೆಯರ ವೇಷಭೂಷಣವನ್ನು ತೊಟ್ಟು ಕಣ್ಮನ ಸೆಳೆದಿದ್ದಾರೆ. ಇವರನ್ನ ನೋಡುತ್ತಿದ್ದರೆ ಪಾಲಕರ ದಿಲ್ ಖುಷ್ ಆಗುವುದಂತು ಖಂಡಿತ ತುಂಟ ಕೃಷ್ಣನಿಗೆ ಪುಟಾಣಿ ರಾಧೆಯರು ಸಾಥ್ ನೀಡಿದ್ದು, ಕೃಷ್ಣ ರಾಧೆಯರನ್ನು ನೋಡಿದಂತೆ ಭಾಸವಾಗುತ್ತದೆ. ಮಕ್ಕಳೊಂದಿಗೆ ಮೊಸರು ಮಡಿಕೆ ಹೊಡೆಯುವ ಕಾರ್ಯಕ್ರಮ ನೋಡುತ್ತಿದ್ದರೆ ಇತಿಹಾಸವನ್ನು ನೆನಪಿಸುತ್ತದೆ ಎಂದರು.
ಕಾರ್ಯಕ್ರಮದಲ್ಲಿ
ಸಂಸ್ಥೆಯ ಉಪಾಧ್ಯಕ್ಷರಾದ ಅವಿನಾಶ ಮತ್ತಿಕಟ್ಟಿ , ನಿರ್ದೇಶಕರಾದ ಸಹನಾ ಮತ್ತಿಕಟ್ಟಿ, ನಯನಾ ಮತ್ತಿಕಟ್ಟಿ, ಮುಖ್ಯ ಶಿಕ್ಷಕಿ ಸರಸ್ವತಿ ಬುಟ್ಟಾನವರ, ರೋಷನ್ ಮಾನಿಕಬಾಗ, ಮೇಘಾ ನಲವತವಾಡ, ಮಂಜುಳಾ ಜಂತ್ಲಿ, ಕೀರ್ತಿ ಹೆಗ್ಗಣ್ಣನವರ, ಉಮಾ ಸಂಗನಾಳ, ಸವಿತಾ ಕಡಬಲಕಟ್ಟಿ, ನಿರ್ಮಲಾ ಬಡಿಗೇರ, ರೋಹಿಣಿ ಚೋಳಿನ, ನಿವೇದಿತಾ ಹಿರೇಮಠ, ಅರ್ಚನಾ ನಾಗರಾಳ, ಶೃತಿ ಮಂಗಳೂರ ಸೇರಿದಂತೆ ಅನೇಕರು ಇದ್ದರು.