ಗದಗಜಿಲ್ಲಾ ಸುದ್ದಿಸ್ಥಳೀಯ ಸುದ್ದಿಗಳು
ಶೈಕ್ಷಣಿಕ ವರ್ಷದ ಸಮಾರೋಪ ಇಂದು.
ಶೈಕ್ಷಣಿಕ ವರ್ಷದ ಸಮಾರೋಪ ಇಂದು.
ಗಜೇಂದ್ರಗಡ:
ಬೆನಕಪ್ಪ ಶಂಕ್ರಪ್ಪ ಸಿಂಹಾಸನದ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ 2023-24 ಶೈಕ್ಷಣಿಕ ವರ್ಷದ ಸಾಂಸ್ಕೃತಿಕ, ಕ್ರೀಡಾ, ಎನ್‌ಎಸ್‌ಎಸ್, ಎನ್‌ಸಿಸಿ, ಯುವ ರೆಡ್ ಕ್ರಾಸ್ ಹಾಗೂ ವಿವಿಧ ಚಟುವಟಿಕೆಗಳ ಸಮಾರೋಪ ಸಮಾರಂಭ ಮತ್ತು ಬಿಎ,
ಬಿಕಾಂ, ಬಿಎಸ್‌ಸಿ ಪದವಿಗಳ ಅಂತಿಮ ವರ್ಷದ ವಿದ್ಯಾರ್ಥಿಗಳ ಬಿಳ್ಕೊಡುವ ಸಮಾರಂಭ ಜುಲೈ 10ರ ಬೆಳಿಗ್ಗೆ 10:30 ಗಂಟೆಗೆ ಕಾಲೇಜಿನ ಆವರಣದಲ್ಲಿ ನಡೆಯಲಿದೆ.
ರೋಣ ಶಾಸಕ ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷ ಜಿ.ಎಸ್. ಪಾಟೀಲ ಅಧ್ಯಕ್ಷರು ಖನಿಜ ಅಭಿವೃದ್ಧಿ ನಿಗಮ ಕರ್ನಾಟಕ ಸರ್ಕಾರ ಬೆಂಗಳೂರು ಇವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸುವರು.
ಕಾರ್ಯಕ್ರಮದ ಮುಖ್ಯ ಅಥಿತಿಯಾಗಿ ಡಾ.ಬಿ.ಬಿ.ಪೋಲಿಸ್ ಪಾಟೀಲ ಪ್ರಾಂಶುಪಾಲರು ಕೆ.ಎಲ್.ಇ. ಶಿಕ್ಷಣ ಮಹಾವಿದ್ಯಾಲಯ ನಿಪ್ಪಾಣಿ , ಮಹೇಂದ್ರ ಜಿ. ಪ್ರಾರ್ಚಾರು ಇವರ ಸೇರಿದಂತೆ ಕಾಲೇಜು ಅಭಿವೃದ್ಧಿ ಸಮಿತಿಯವರು, ಸ್ವಾಗತ ಸಮಿತಿಯವರು , ಕಾಲೇಜಿನ ಉಪನ್ಯಾಸ ಬಳಗ ಸೇರಿದಂತೆ ಕಾಲೇಜಿನ ವಿಧ್ಯಾರ್ಥಿಗಳು ಭಾಗಿಯಾಗಲಿದ್ದಾರೆ.