ಸ್ಥಳೀಯ ಸುದ್ದಿಗಳುಅಂತಾರಾಷ್ಟ್ರೀಯಆರೋಗ್ಯ ಇಲಾಖೆಉಡುಪಿಉದ್ಯೋಗ ವಾರ್ತೆಗಳುಉಪಯುಕ್ತ ಮಾಹಿತಿಗಳುಕನಕಗಿರಿಕುಕನೂರುಕುಷ್ಟಗಿಕೊಪ್ಪಳಗಂಗಾವತಿಗದಗಜಿಲ್ಲಾ ಸುದ್ದಿಟ್ರೆಂಡಿಂಗ್ ಸುದ್ದಿಗಳುತಾಲೂಕುಧಾರವಾಡಬಿಸಿನೆಸ್ ಕನೆಕ್ಟ್ರಾಜ್ಯ ಸುದ್ದಿರಾಷ್ಟೀಯ ಸುದ್ದಿಲೇಖನವಿಡಿಯೋಗಳುಶಿವಮೊಗ್ಗಸಿಂಧನೂರುಸೋಶಿಯಲ್ ಮೀಡಿಯಾ ಅಪ್ಡೇಟ್ಸ್

ನಗರಕ್ಕೆ ಪೌರ ಕಾರ್ಮಿಕರ ಸೇವೆ ಅನನ್ಯ: ಶಾಸಕ‌ ಜಿ.ಎಸ್.ಪಾಟೀಲ.

Share News

ನಗರಕ್ಕೆ ಪೌರ ಕಾರ್ಮಿಕರ ಸೇವೆ ಅನನ್ಯ: ಶಾಸಕ‌ ಜಿ.ಎಸ್.ಪಾಟೀಲ.

ಗಜೇಂದ್ರಗಡ:

ಗಜೇಂದ್ರಗಡ ನಗರದ ಟಿ.ಟಿ.ಡಿ.ಕಲ್ಯಾಣ ಮಂಟಪದಲ್ಲಿ ಪೌರ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮ ಸೋಮವಾರ ನಡೆಯಿತು.

ಕಾರ್ಯಕ್ರಮವನ್ನು ಖನಿಜ ಅಭಿವೃದ್ಧಿ ನಿಗಮದ ಅಧ್ಯಕ್ಷ, ರೋಣ ಶಾಸಕ ಜಿ.ಎಸ್.ಪಾಟೀಲ ಉದ್ಘಾಟಿಸಿ ಮಾತನಾಡಿ

ಪೌರ ಕಾರ್ಮಿಕರ ಸೇವೆ ಅನನ್ಯ
ಮರೆಯಲು ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ ಪೌರ ಕಾರ್ಮಿಕರು ಕೂಡಾ ತಮ್ಮ
ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ಒತ್ತನ್ನು ನೀಡಬೇಕಿದೆ. ಪೌರ ಕಾರ್ಮಿಕರ ಸಮಸ್ಯೆ ಬಂದಾಗ ರಾಜ್ಯ ಮಟ್ಟದಲ್ಲಿ ಧ್ವನಿ ಎತ್ತಿದ್ದೇವೆ. ಈಗಾಗಲೇ ನಗರದಲ್ಲಿನ ಕೆಲ ನೌಕರರನ್ನು ಖಾಯಂ ಮಾಡಲಾಗಿದೆ. ಪೌರ ಕಾರ್ಮಿಕರಿಗೆ ಸಿಗಬೇಕಾದ ಸರ್ಕಾರಿ ಸೌಲಭ್ಯಗಳನ್ನು ಒದಗಿಸಲು ಜನಪ್ರತಿನಿಧಿಗಳು ಪ್ರಾಮಾಣಿಕ ಕೆಲಸ ಮಾಡಬೇಕು ಎಂದರು.

ಬಳಿಕ ಪುರಸಭೆ ಸದಸ್ಯ ಶಿವರಾಜ ಘೋರ್ಪಡೆ, ರಾಜೂ ಸಾಂಗ್ಲೀಕರ,
ಪ್ರಾಸ್ತಾವಿಕವಾಗಿ
ಮುಖ್ಯಾಧಿಕಾರಿ ಬಸವರಾಜ ಬಳಗಾನೂರ , ಅಶೋಕ ಬಾಗಮಾರ ತಾರಸಿಂಗ ರಾಠೋಡ ಮಾತನಾಡಿದರು.

ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಸುಭಾಷ ಮ್ಯಾಗೇರಿ, ಉಪಾಧ್ಯಕ್ಷೆ ಸವಿತಾ ಶ್ರೀಧರ ಬಿದರಳ್ಳಿ, ಪುರಸಭೆ ಮುಖ್ಯಾಧಿಕಾರಿ ಬಸವರಾಜ ಬಳಗಾನೂರ, ಮುರ್ತುಜಾ ಡಾಲಾಯತ,
ವಿಜಯಾ ಮಳಗಿ, ದ್ರಾಕ್ಷಾಯಣಿ ಚೋಳಿನ,ಮಂಜುಳಾ ರೇವಡಿ, ಶರಣಪ್ಪ ಉಪ್ಪಿನಬೆಟಗೇರಿ, ವೆಂಕಟೇಶ ಮುದಗಲ್ , ಮುದಿಯಪ್ಪ ಮುಧೋಳ, ಪ್ರಶಾಂತ ರಾಠೋಡ, ದುರಗಪ್ಪ ಮುಧೋಳ, ಸಿದ್ದಪ್ಪ ಬಂಡಿ, ರಫೀಕ ತೋರಗಲ್, ಮುತ್ತಣ್ಣ ಮ್ಯಾಗೇರಿ, ಆರ್.ಎಮ್.ರಾಯಬಾಗಿ, ಬಸವರಾಜ ಹೂಗಾರ, ಉಮೇಶ ರಾಠೋಡ , ಯಲ್ಲಪ್ಪ ಬಂಕದ, ಅಶೋಕ ಬಾಗಮಾರ, ತಾರಾಸಿಂಗ್ ರಾಠೋಡ, ಕನಕಪ್ಪ ಕಲ್ಲವಡ್ಡರ, ಅಂದಪ್ಪ ರಾಠೋಡ, ದಾದೂ ತಾಳಿಕೋಟಿ, ಶರಣಪ್ಪ ಚಳಗೇರಿ, ವಿರೇಶ ಸಂಗಮದ, ಸಿದ್ದು ಗೊಂಗಡಶೆಟ್ಟಿಮಠ ಸೇರಿದಂತೆ ಅನೇಕರು ಇದ್ದರು.


Share News

Related Articles

Leave a Reply

Your email address will not be published. Required fields are marked *

Back to top button