ವಕ್ಫ್ರಾಜಕೀಯರಾಷ್ಟೀಯ ಸುದ್ದಿಸ್ಥಳೀಯ ಸುದ್ದಿಗಳು

ವಕ್ಫ್ ಆಸ್ತಿ ವಿವಾದ – ಬೀದರ್‌ನ ಬಸವಗಿರಿ ಮಹಾಮಠದ ಮೇಲೆ ವಕ್ಫ್ ಕರಿಛಾಯೆ

ಬೀದರ್‌ನ ಪಾಪನಾಶ ದೇವಸ್ಥಾನದ ಬಳಿಯಿರುವ ಬಸವಗಿರಿಯ ಸರ್ವೇ ನಂ.37ರ 5 ಎಕರೆ 19 ಗುಂಟೆ ಜಾಗ 2019ರಲ್ಲಿ ವಕ್ಫ್ಗೆ ಸೇರಿಸಿದ್ದು ಬಸವ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. 2008 ರಲ್ಲಿ ಈ ಬಸವಗಿರಿ ಉದ್ಘಾಟನೆಯಾಗಿದ್ದು, ಬಹುತೇಕ 16 ವರ್ಷದಿಂದ ಪ್ರತಿ ದಿನ ಇಲ್ಲಿಗೆ ನೂರಾರು ಭಕ್ತರು ಭೇಟಿ ನೀಡಿ ಬಸವಣ್ಣನವರ ಭಾವಚಿತ್ರಕ್ಕೆ ನಮಿಸಿ ವಚನಗಳ ಪಠಣೆ ಮಾಡುತ್ತಾರೆ.

Share News

ಬೀದರ್: ರಾಜ್ಯದಲ್ಲಿ ವಕ್ಫ್ ವಿವಾದ (Waqf Dispute) ಕಡಿಮೆಯಾಗುತ್ತಿದ್ದಂತೆ ಮತ್ತೆ ಬೀದರ್ (Bidar) ಜಿಲ್ಲೆಯಲ್ಲಿ ವಕ್ಫ್ ವಕ್ರದೃಷ್ಟಿ ಬಿದ್ದಿದೆ. ಇದೀಗ ಲಿಂಗಾಯತ ಮಹಾಮಠದ ಬಸವಗಿರಿ (Basavagiri) ವಕ್ಫ್ ಪಾಲಾಗಿದೆ.

ಈಗಾಗಲೇ ರೈತರ ಜಮೀನು, ಐತಿಹಾಸಿಕ ಸ್ಮಾರಕಗಳು, ಸರ್ಕಾರಿ ಜಾಗಗಳು ಸೇರಿದಂತೆ ಗಡಿ ಜಿಲ್ಲೆ ಬೀದರ್‌ನಲ್ಲಿ ಒಟ್ಟು 13 ಸಾವಿರಕ್ಕೂ ಅಧಿಕ ಆಸ್ತಿ ವಕ್ಫ್ ಪಾಲಾಗಿದೆ. ಇದೀಗ ಮತ್ತೆ ಬಗೆದಷ್ಟು ಬಯಲಾಗುತ್ತಿದ್ದು, ವಿಶ್ವಗುರು ಬಸವಣ್ಣನವರ ವಚನಮಂತ್ರ ಪಠಿಸುವ ಲಿಂಗಾಯತ ಮಹಾಮಠದ ಬಸವಗಿರಿ ಕೂಡ ವಕ್ಫ್ ಆಸ್ತಿಯಾಗಿ ಬದಲಾಗಿದೆ.

ಬೀದರ್‌ನ ಪಾಪನಾಶ ದೇವಸ್ಥಾನದ ಬಳಿಯಿರುವ ಬಸವಗಿರಿಯ ಸರ್ವೇ ನಂ.37ರ 5 ಎಕರೆ 19 ಗುಂಟೆ ಜಾಗ 2019ರಲ್ಲಿ ವಕ್ಫ್ಗೆ ಸೇರಿಸಿದ್ದು ಬಸವ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. 2008 ರಲ್ಲಿ ಈ ಬಸವಗಿರಿ ಉದ್ಘಾಟನೆಯಾಗಿದ್ದು, ಬಹುತೇಕ 16 ವರ್ಷದಿಂದ ಪ್ರತಿ ದಿನ ಇಲ್ಲಿಗೆ ನೂರಾರು ಭಕ್ತರು ಭೇಟಿ ನೀಡಿ ಬಸವಣ್ಣನವರ ಭಾವಚಿತ್ರಕ್ಕೆ ನಮಿಸಿ ವಚನಗಳ ಪಠಣೆ ಮಾಡುತ್ತಾರೆ.

Share News

Related Articles

Leave a Reply

Your email address will not be published. Required fields are marked *

Back to top button