ವಕ್ಪ್ ಬೋರ್ಡನ ಮನ ಪೂರ್ವಕವಾಗಿ ವಿರೋಧ ಮಾಡುತ್ತೇನೆ : ಫಲಿಮಾರು ಮಠದ ಶ್ರೀ
ವಕ್ಪ್ ಬೋರ್ಡನ ಮನ ಪೂರ್ವಕವಾಗಿ ವಿರೋಧ ಮಾಡುತ್ತೇನೆ : ಫಲಿಮಾರು ಮಠದ ಶ್ರೀ.
ಗಜೇಂದ್ರಗಡ:
ವಕ್ಫ್ ಬೋರ್ಡನ ತೆಗೆದು ಹಾಕಲು ಪಕ್ಷಾತೀತವಾಗಿ ಶ್ರಮಿಸಬೇಕಿದೆ. ವಕ್ಪ್ ಬೋರ್ಡನ ಮನ ಪೂರ್ವಕವಾಗಿ ವಿರೋಧ ಮಾಡುತ್ತೇನೆ ಎಂದು ಉಡುಪಿಯ ಫಲಿಮಾರು ಮಠದ ಶ್ರೀಗಳು ಹೇಳಿದರು.
ಗಜೇಂದ್ರಗಡ ನಗರದ ಶ್ರೀ ರಾಘವೇಂದ್ರ ಸ್ವಾಮಿಗಳ ದೇವಾಲಯದಲ್ಲಿ ನೂತಬ ಭಾಗವತ ಭವನ ಲೋಕಾರ್ಪಣೆ ಮಾಡಿದ ಬಳಿಕ ಮಾಧ್ಯಮದ ಜೊತೆ ಮಾತನಾಡಿ
ಇಲ್ಲಿರುವ ಪ್ರಸ್ತುತ
ಸಮಸ್ಯೆಯನ್ನು ಸರಿಮಾಡಬೇಕಾದರೆ ಮೊದಲು ನೀತಿ ಸಂಹಿತೆ ಸರಿಮಾಡಬೇಕಿದೆ. ಒಂದೇ ನಾಗರಿಕ ಸಂಹಿತೆ ಬರಬೇಕು. ಎಲ್ಲರಿಗೂ ಒಂದೆ ರೀತಿ ನ್ಯಾಯ ನೀಡಬೇಕು. ಇಡೀ ವಕ್ಪ್ ಗೊಂದು ನ್ಯಾಯ ಬೇರೆಯವರಿಗೊಂದು ನ್ಯಾಯ ಮಾಡಬಾರದು. ಯಾರೋದು ಆಸ್ತಿ ಯಾರೋ ಕಬಳಿಸುವಂತದ್ದು ತುಂಬಾ ದುರಂತ. ರಾಜಕೀಯ ದುರಂತ. ವಕ್ಪಬೋರ್ಡದಂತ ಯಾವೋದು ಒಂದು ಅಸಂಬದ್ಧಂತ ನಿರ್ಮಾಣ ಮಾಡಿ ಯಾರೋದೊ ಜಾಗವನ್ನು ವಶಪಡಿಸಿಕೊಳ್ಳುವಂತದ್ದು ಇದು ತುಂಬಾ ಕಠೋರವಾದಂತ ನ್ಯಾಯ ಹಾಗಾಗೀ ಇದನ್ನು ನಾವೆಲ್ಲರೂ ಸಾರಸಗಟವಾಗಿ ನಿಷೇದ ಮಾಡಬೇಕಾಗಿದ್ದು, ಎಲ್ಲರೂ ಇದನ್ನು ಪಕ್ಷಬೇದ ಮರೆತು, ಜಾತಿಬೇದ ಮರೆತು, ನಾವೆಲ್ಲಾ ಹೋರಾಡಬೇಕಾಗಿದೆ.ಇಲ್ಲದಿದ್ದರೆ ನಾಳೆ ನಮ್ಮ ಮನೆಗೆ ಕುತ್ತು ತಪ್ಪಿದ್ದಲ್ಲ, ಆ ದೃಷ್ಟಿಯಿಂದ ಆದರೂ ನಾವೆಲ್ಲಾ ಕಂಡಾತುಂಡವಾಗಿ ಇದನ್ನು ಪ್ರತಿಭಟನೆ ಮಾಡುತ್ತೇವೆ.
ಆ ವಕ್ಪ್ ಬೋರ್ಡ ತೆಗೆದುಬಿಡಬೇಕು. ಎಲ್ಲರಿಗೂ ಒಂದೇ ನೀತಿ ಒಂದೇ ನ್ಯಾಯ ಇರಬೇಕು. ಇತ್ತಿಚೆಗೆ ನಾವು ಹೈದರಾಬಾದ್ ಗೆ ಹೋಗಿದ್ದೆ ಅಲ್ಲಿನ ಪ್ರಾಣದೇವರನ್ನು ವಕ್ಪಗೆ ಸೇರಿಸಿ ಬಿಟ್ಟಿದ್ದಾರೆ. ಅದು ದೊಡ್ಡ ಅನ್ಯಾಯ. ಹಾಗಿದ್ದರೆ ನಮ್ದು ಒಂದು ಬೋರ್ಡ್ ಮಾಡುತ್ತೇವೆ. ನಮ್ಮಗೂ ಕೂಡಾ ಇದೇ ರೀತಿ ನ್ಯಾಯ ಕೊಡಿ, ಹಾಗಾಗಿ ಈ ರಾಜಕೀಯವನ್ನು ವಿರೋದಿಸಿತ್ತೇವೆ.ಯಾರೂ ಇದನ್ನು ಮಾಡಿದ್ದಾರೆ ಅವರನ್ನು ವಿರೋಧ ಮಾಡುತ್ತಾ. ಇದನ್ನು ಸರಿ ಪಡಿಸುವ ರಾಜಕೀಯ ಪಕ್ಷಕ್ಕೆ ಬೆಂಬಲ ನೀಡಬೇಕಿದೆ. ವಕ್ಪ್ ಬೋರ್ಡ್ ತೆಗೆದುಹಾಕಲು ನಾವೆಲ್ಲರೂ ಸೇರಬೇಕು ಹಾಗೂ ಆ ದೇವರಲ್ಲಿ ವಿಶೇಷ ಪೂಜೆ, ಪ್ರಾರ್ಥನೆ ಮಾಡಬೇಕಿದೆ. ವಕ್ಪ್ ಬೋರ್ಡನ ಮನ ಪೂರ್ವಕವಾಗಿ ವಿರೋಧ ಮಾಡುತ್ತೇನೆ.