Yatnal Vs Vijayendra: ಯತ್ನಾಳ್ ಟೀಂಗೆ ಬಿವೈವಿ ಬಣ ಸೆಡ್ಡು! ವಿಜಯೇಂದ್ರ ಪರ ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ
ವಿಜಯಂದ್ರ-ಯತ್ನಾಳ್ ಮಧ್ಯ ಬಣ ಬಡಿದಾಟ ವಿಚಾರ ಇದೀಗ ಮತ್ತಷ್ಟು ಬಿರುಸು ಪಡೆದುಕೊಂಡಿದೆ. ದಾವಣಗೆರೆಯಲ್ಲಿ ವಿಜಯೇಂದ್ರ ಪರ ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಪಕ್ಷದ ಸಮಾವೇಶ ಹೆಸರಲ್ಲಿ ಯತ್ನಾಳ್ ಟೀಮ್ ಗೆ ಟಾಂಗ್ ಕೊಡಲು ಸಿದ್ಧತೆ ನಡೆದಿದೆ.
ದಾವಣಗೆರೆ: ರಾಜ್ಯ ಬಿಜೆಪಿಯಲ್ಲಿ (Karnataka BJP) ಬಣ ಬಡಿದಾಟ ಜೋರಾಗಿದೆ. ವಕ್ಪ್ (Waqf) ವಿಚಾರವಾಗಿ ಬಿಜೆಪಿ ರಾಜಾಧ್ಯಕ್ಷ (BJP State President) ಬಿವೈ ವಿಜಯೇಂದ್ರಗೆ (BY Vijayendra) ಸೆಡ್ಡು ಹೊಡೆದಿರುವ ಯತ್ನಾಳ್ (Basanagouda Patil Yatnal) ಬಣ, ಸಮರ ಮುಂದುವರೆಸಿದೆ. ಇತ್ತ ಇನ್ನೊಂದು ಬಣದ ನಾಯಕರು ತಾವೇನು ಕಡಿಮೆ ಇಲ್ಲ ಎಂದು ಹೇಳಲು ವಿಜಯೇಂದ್ರ ಪರ ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ ನಡೆಸಿದ್ದಾರೆ.
ವಿಜಯಂದ್ರ-ಯತ್ನಾಳ್ ಮಧ್ಯ ಬಣ ಬಡಿದಾಟ ವಿಚಾರ ಇದೀಗ ಮತ್ತಷ್ಟು ಬಿರುಸು ಪಡೆದುಕೊಂಡಿದೆ. ದಾವಣಗೆರೆಯಲ್ಲಿ ವಿಜಯೇಂದ್ರ ಪರ ಶಕ್ತಿ ಪ್ರದರ್ಶನಕ್ಕೆ ಸಿದ್ಧತೆ ನಡೆಸಲಾಗುತ್ತಿದೆ. ಪಕ್ಷದ ಸಮಾವೇಶ ಹೆಸರಲ್ಲಿ ಯತ್ನಾಳ್ ಟೀಮ್ ಗೆ ಟಾಂಗ್ ಕೊಡಲು ಸಿದ್ಧತೆ ನಡೆದಿದೆ.
ಈ ಸಮಾವೇಶ ನಡೆಸಲು ಇದೀಗ ರೇಣುಕಾಚಾರ್ಯ ಮುಂದಾಳತ್ವದಲ್ಲಿ ಸಭೆ ನಡೆಸಲು ಮುಂದಾಗಿದ್ದಾರೆ. 60 ಕ್ಕೂ ಅಧಿಕ ಬಿಜೆಪಿ ಮಾಜಿ ಸಚಿವರು ಹಾಲಿ ಶಾಸಕರು, ಮಾಜಿ ಶಾಸಕರು ಸಮ್ಮುಖದಲ್ಲಿ ಸಭೆ ನಡೆಯಲಿದೆ. ದಿನಾಂಕ 10ರಂದು ದಾವಣಗೆರೆ ಖಾಸಗಿ ರೇಸಾರ್ಟ್‌ನಲ್ಲಿ ಸಭೆ ನಡೆಸಲಾಗುತ್ತಿದೆ. 11 ರಂದೇ ಸಮಾವೇಶಕ್ಕೆ ದಿನಾಂಕ ನಿಗದಿ ಪಡಿಸಲಿದ್ದಾರೆ.
ಈ ಸಭೆಗೆ ಮಾಜಿ ಸಿಎಂ ಯಡಿಯೂರಪ್ಪ, ವಿರೋಧ ಪಕ್ಷದ ನಾಯಕನ್ನ ಕರೆಯಲಾಗುತ್ತದೆ ಎಂದು ಹೇಳಲಾಗುತ್ತಿದೆ. ದಾವಣಗೆರೆಯಲ್ಲಿ ಸಮಾವೇಶ ಯಾವ ರೀತಿ ಮಾಡಬೇಕು, ಸಮಾವೇಶಕ್ಕೆ ರಾಜ್ಯ, ರಾಷ್ಟ್ರೀಯ ನಾಯಕರನ್ನ ಯಾರನ್ನ ಕರಿಬೇಕು ಅನ್ನೋ ಬಗ್ಗೆ ಚರ್ಚೆ ನಡೆಸಲಾಗುತ್ತದೆ.